ರವೀನಾ, ಫರ್ಹಾ, ಭಾರತಿ ವಿರುದ್ಧ ಎಫ್ಐಆರ್ ದಾಖಲು

ನಾಗ್ಪುರ್, ಫೆಬ್ರವರಿ 09: ಕ್ರೈಸ್ತರಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ರವೀನಾ ಟಂಡನ್, ನಿರ್ದೇಶಕಿ ಹಾಗೂ ಕೊರಿಯೋಗ್ರಾಫರ್ ಫರ್ಹಾ ಖಾನ್ ಮತ್ತು ಹಾಸ್ಯನಟಿ ಭಾರತಿ ಸಿಂಗ್ ವಿರುದ್ಧ ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ.

ಟಿವಿ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಕ್ರಿಶ್ಚಿಯನ್ ಫ್ರಂಟ್ ಆಫ್ ಅಜ್ನಾಲಾ ಬ್ಲಾಕ್‌ನ ಅಧ್ಯಕ್ಷ ಸೋನು ಜಾಫರ್ ಎಂಬುವರು ಮೂವರ ವಿರುದ್ಧ ಅಮೃತ್ ಸರದಲ್ಲಿ ದೂರು ದಾಖಲಿಸಿದ್ದಾರೆ. ಈಗ ಗೋರೆವಾಡದ ನಿವಾಸಿ ಖುಷ್ಬೂ ಭಗವಾನ್ ಪರ್ವಾರ್(27) ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಾಗ್ಪುರದ ಮಂಕಾಪುರ್ ಪೊಲೀಸರು ಎಫ್ಐಆರ್ ಹಾಕಿದ್ದಾರೆ.

"ಕ್ರೈಸ್ತ ಧರ್ಮದ ಶಬ್ದವೊಂದನ್ನು ಬಳಸಿ ಗೇಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿಪೆ. ಕ್ರೈಸ್ತರು ಬಳಸುವ 'ಹಲ್ಲೆಲುಯಾ' ಪದಕ್ಕೆ ಅವಹೇಳನಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಡಿಸೆಂಬರ್ 25ರಂದು ಕ್ರಿಸ್ಮಸ್ ಅಂಗವಾಗಿ ನಡೆದ ಈ ಕಾರ್ಯಕ್ರಮದ ವಿಡಿಯೋ ಪರಿಶೀಲಿಸಿದಿದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ" ಎಂದು ಇನ್ಸ್ ಪೆಕ್ಟರ್ ವಜೀರ್ ಶೇಖ್ ಹೇಳಿದ್ದಾರೆ.

FIR against RaveenaTandon, Farah Khan, Bharti Singh for hurting religious sentiments on TV show

ದೂರು ದಾಖಲಾಗುತ್ತಿದ್ದಂತೆ ನಟಿ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮದ ವಿಡಿಯೋ ಲಿಂಕ್ ಅನ್ನು ಶೇರ್ ಮಾಡಿ, "ದಯವಿಟ್ಟು ಈ ವಿಡಿಯೋ ವೀಕ್ಷಿಸಿ. ಯಾವುದೆ ಧರ್ಮಕ್ಕೆ ಅವಮಾನ ಮಾಡುವಂತ ಪದವನ್ನು ನಾವು ಬಳಸಿಲ್ಲ, ನಾವು ಮೂವರಿಗೂ( ಫರ್ಹಾ ಖಾನ್ ಮತ್ತು ಭಾರತಿ ಸಿಂಗ್) ಅಪರಾಧ ಮಾಡುವಂತೆ ಉದ್ದೇಶ ಇರಲಿಲ್ಲ. ಒಂದು ವೇಳೆ ನಮ್ಮ ಕಡೆಯಿಂದ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ" ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ 27 ರಂದು ದೂರು ನೀಡಲಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 297 ಎ ಅನ್ವಯ ಪ್ರಕರಣ ದಾಖಲಾಗಿದೆ.

READ IN ENGLISH

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+