• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ ದೇವೇಂದ್ರನ ರಾಜ್ಯಭಾರ ಆರಂಭ

By Mahesh
|

ಮುಂಬೈ, ಅ.31: ವಾಂಖೆಡೆ ಸ್ಟೇಡಿಯಂನಲ್ಲಿ ಕೇಸರಿ ರಂಗು ಚೆಲ್ಲಿದ್ದು, ಎಲ್ಲೆಡೆ ನರೇಂದ್ರ ದೇವೇಂದ್ರ ಜಯಘೋಷಗಳು ಮೊಳಗಿವೆ.ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರದ ದಿಗ್ವಿಜಯವನ್ನು ಇಂದು ಭರ್ಜರಿಯಾಗಿ ಆಚರಿಸಿಕೊಂಡಿದೆ. ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಶುಕ್ರವಾರ ಸಂಜೆ ಸುಮಾರು 40 ಸಾವಿರಕ್ಕೂ ಅಧಿಕ ಗಣ್ಯರ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಾಗಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೇವೇಂದ್ರ ಗಂಗಾಧರರಾವ್ ಫಡ್ನವೀಸ್ ಅವರು ಮಹಾರಾಷ್ಟ್ರದ 27ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಎಂ ಸ್ಥಾನ ಪಡೆದ 18ನೇ ವ್ಯಕ್ತಿ ಹಾಗೂ ವಿದರ್ಭ ಪ್ರಾಂತ್ಯದ ನಾಲ್ಕನೇ ರಾಜಕಾರಣಿಯಾಗಿದ್ದಾರೆ. 44 ವರ್ಷ ವಯಸ್ಸಿನ ದೇವೇಂದ್ರ ಅವರು ಮಹಾರಾಷ್ಟ್ರದ ಎರಡನೇ ಅತ್ಯಂತ ಕಿರಿಯ ಸಿಎಂ ಎನಿಸಿದ್ದಾರೆ. [ದೇವೇಂದ್ರ ಫಡ್ನವೀಸ್ ವ್ಯಕ್ತಿ ಚಿತ್ರ ಓದಿ]

ಬಾಲಿವುಡ್ ನ ಖ್ಯಾತ ವಿನ್ಯಾಸಗಾರ ನಿತಿನ್ ದೇಸಾಯಿ ಹಾಗೂ ರವಿ ಸಾವ್ಲ ಅವರ ವಿನ್ಯಾಸದ ಸುಂದರ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಗಣ್ಯಾತಿಗಣ್ಯ ನಾಯಕರು, ಬಾಲಿವುಡ್ ತಾರೆಯರು, ಉದ್ಯಮಿಗಳು ಪಾಲ್ಗೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಸಮಾರಂಭಕ್ಕೆ ಆಗಮಿಸಿ ದೇವೇಂದ್ರ ಅವರಿಗೆ ಶುಭ ಕೋರಿದರು. ಸಮಾರಂಭಕ್ಕೆ ಯಾರೆಲ್ಲ ಬಂದಿದ್ದರು? ಯಾರೆಲ್ಲ ಕ್ಯಾಬಿನೆಟ್ ಸೇರಿದರು ಎಂಬ ವಿವರ ಮುಂದಿದೆ...

ನಾಗಾಪುರ ಮೂಲದ ದೇವೇಂದ್ರ ಫಡ್ನವೀಸ್

ನಾಗಾಪುರ ಮೂಲದ ದೇವೇಂದ್ರ ಫಡ್ನವೀಸ್

ಮಧ್ಯಮ ವರ್ಗದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ(1970, ಜುಲೈ 22) ದೇವೇಂದ್ರ ಗಂಗಾಧರ ರಾವ್ ಫಡ್ನವೀಸ್ ಅವರು ಸತಾರಾ ಮೂಲದವರು. ಪೇಶ್ವೆಗಳ ಆಳ್ವಿಕೆ ಕಾಲದಲ್ಲಿ ಇವರ ಕುಟುಂಬಕ್ಕೆ ಗ್ರಾಮವೊಂದರ ಉಸ್ತುವಾರಿಕೆ ಲಭಿಸಿತ್ತು. ಈಗ ದೇವೇಂದ್ರ ಅವರಿಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಸಿಕ್ಕಿದೆ. ಛತ್ರಪತಿ ಶಿವಾಜಿ, ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತದಂತೆ ರಾಜ್ಯಭಾರ ಮಾಡುವುದಾಗಿ ದೇವೇಂದ್ರ ಹೇಳಿದ್ದಾರೆ

ಕ್ಯಾಬಿನೆಟ್ ಸೇರಿದ ಪಂಕಜಾ ಮುಂಡೆ

ಕ್ಯಾಬಿನೆಟ್ ಸೇರಿದ ಪಂಕಜಾ ಮುಂಡೆ

ಮಹಾರಾಷ್ಟ್ರ ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಮುಖವಾಗಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವೀಸ್(44) ಮತ್ತು ದಿ.ಗೋಪಿನಾಥ್ ಮುಂಡೆ ಅವರ ಮಗಳಾದ ಪಂಕಜಾ ಮುಂಡೆ ಅವರ ಹೆಸರುಗಳ ಬಲವಾಗಿ ಕೇಳಿ ಬಂದಿತ್ತು. ಇವರಷ್ಟೇ ಅಲ್ಲದೇ ಪಕ್ಷ ಹಿರಿಯ ಮುಖಂಡರಾದ ಏಕನಾಥ್ ಖಡ್ಸೆ ಮತ್ತು ವಿನೋದ್ ತಾವ್ಡೆ ಅವರ ಹೆಸರು ಕೂಡ ಸಿಎಂ ರೇಸ್‌ನಲ್ಲಿದ್ದರು

ಪ್ರಮಾಣ ವಚನ ಸ್ವೀಕರಿಸಿದವರು

ಪ್ರಮಾಣ ವಚನ ಸ್ವೀಕರಿಸಿದವರು

* ಏಕನಾಥ್ ಖಾಡ್ಸೆ

* ಸುಧೀರ್ ಮುಂಗತಿವಾರ್

*ವಿನೋದ್ ತಾವ್ಡೆ (ಚಿತ್ರದಲ್ಲಿ)

* ಪಂಕಜಾ ಮುಂಡೆ

* ಪ್ರಕಾಶ್ ಮೆಹ್ತಾ

* ವಿಷ್ಣು ಸಾವ್ರಾ

* ಚಂದ್ರಕಾಂತ್ ಪಾಟೀಲ್

* ದಿಲೀಪ್ ಕಾಂಬ್ಳೆ (ರಾಜ್ಯ ಸಚಿವರು)

* ವಿದ್ಯಾ ಠಾಕೂರ್ (ರಾಜ್ಯ ಸಚಿವರು)

ಗುರು ಶಿಷ್ಯರ ಸಮಾಗಮಕ್ಕೆ ವೇದಿಕೆ

ದೇವೇಂದ್ರ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಗುರು ಶಿಷ್ಯರ ಸಮಾಗಮಕ್ಕೆ ವೇದಿಕೆಯಾಯಿತು. ಎಲ್ ಕೆ ಅಡ್ವಾಣಿ ಹಾಗೂ ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ದೇವೇಂದ್ರ ಫಡ್ನವೀಸ್ ಸಂತಸದ ಕ್ಷಣದಲ್ಲಿ ಭಾಗಿಯಾಗಿದ್ದರು.

ಉದ್ಧವ್ ಠಾಕ್ರೆ ಸಮಾರಂಭಕ್ಕೆ ಆಗಮನ

ದೇವೇಂದ್ರ ಫಡ್ನವೀಸ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬೆಳಗ್ಗೆಯಿನ್ನೂ ಶಿವಸೇನಾದ ಮುಖವಾಣಿಯಲ್ಲಿ ಬರೆದುಕೊಂಡಿದ್ದ ಉದ್ದವ್ ಠಾಕ್ರೆ ಅವರು ವೇದಿಕೆ ಏರಿ ಗುಮ್ಮನಂತೆ ಕುಳಿತ್ತಿದ್ದು ಎದ್ದು ಕಾಣುತ್ತಿತ್ತು.

ಸಿನಿಮಾ ಮಂದಿ ಯಾರು ಬಂದಿದ್ರು?

ಸಿನಿಮಾ ಮಂದಿ ಯಾರು ಬಂದಿದ್ರು?

ಅಮಿತಾಬ್ ಬಚ್ಚನ್, ಸೋನಾಕ್ಷಿ ಸಿನ್ಹಾ, ಹೃತಿಕ್ ರೋಷನ್, ವಿವೇಕ್ ಒಬೆರಾಯ್, ಮಧುರ್ ಭಂಡರ್ಕಾರ್, ವಿವೇಕ್ ಒಬೆರಾಯ್ ಸೇರಿದಂತೆ ಹಲವಾರು ಬಾಲಿವುಡ್ ಹಾಗೂ ಕಿರುತೆರೆ ನಟ ನಟಿಯರು ಆಗಮಿಸಿದ್ದರು.

ಮುಖ್ಯಮಂತ್ರಿಗಳು, ಇತರೆ ರಾಜಕಾರಣಿಗಳು

ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಗೋವಾದ ಮನೋಹರ್ ಪಾರಿಕ್ಕರ್, ಶಿವರಾಜ್ ಸಿಂಗ್ ಚೌಹಾಣ್, ಪ್ರಕಾಶ್ ಸಿಂಗ್ ಬದಾಲ್, ವಸುಂಧರಾ ರಾಜೇ

ಸಮಾರಂಭದಲ್ಲಿ ಉದ್ಯಮಿಗಳು, ಕ್ರಿಕೆಟರ್ಸ್

ಮಾಜಿ ಕ್ರಿಕೆಟರ್ಸ್ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್, ಹಾಕಿ ಪಟು ಧನರಾಜ್ ಪಿಳ್ಳೈ, ಉದ್ಯಮಿಗಳಾದ ಗೌತಮ್ ಅದಾನಿ, ಕುಮಾರ್ ಮಂಗಳಂ ಬಿರ್ಲಾ, ರಾಜಶ್ರೀ ಬಿರ್ಲಾ, ನಿರಂಜನ್ ಹಿರಾನಂದನಿ, ಬಿಕೆ ಗೋಯಿಂಕಾ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bhartiya Janata Party is leaving no stone unturned to turn the swearing-in ceremony of its first Chief Minister a memorable affair. The oath taking ceremony of BJP's first CM Devendra Fadnavis took place at Mumbai's Wankhede Stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more