ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಂದ್ರ ಫಡ್ನವೀಸ್ ವಿರುದ್ಧ ನವಾಬ್ ಮಲಿಕ್‌ನ ‘ಹೈಡ್ರೋಜನ್ ಬಾಂಬ್’

|
Google Oneindia Kannada News

ಮುಂಬೈ ನವೆಂಬರ್ 10: ಸಚಿವ ನವಾಬ್ ಮಲಿಕ್ ದೇವೇಂದ್ರ ಫಡ್ನವೀಸ್ ಅವರ ಭೂಗತ ಲೋಕದ ಸಂಬಂಧವನ್ನು ಬಯಲಿಗೆಳೆಯುವ "ಹೈಡ್ರೋಜನ್ ಬಾಂಬ್" ಇಂದು ಸಿಡಿಸಿದ್ದಾರೆ. ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಮಾಜಿ ಮುಖ್ಯಮಂತ್ರಿಗೆ ಡಾನ್ ದಾವೂದ್ ಇಬ್ರಾಹಿಂನ ಸಹಾಯಕ ರಿಯಾಜ್ ಭಾಟಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ನವಾಬ್ ಮಲಿಕ್ ವಿರುದ್ಧ ದೇವೇಂದ್ರ ಫಡ್ನವೀಸ್ ಭೂಗತ ಲೋಕದ ಸಂಬಂಧವನ್ನು ಬಯಲಿಗೆಳೆದಿದ್ದರು ಇದಕ್ಕೆ ಪ್ರತಿಯಾಗಿ ನವಾಬ್ ಇಂದು ಹೊಸ ಬಾಂಬ್ ಸಿಡಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನವಾಬ್ ಮಲಿಕ್, "ರಿಯಾಜ್ ಭಾಟಿ ಯಾರು? ನಕಲಿ ಪಾಸ್‌ಪೋರ್ಟ್‌ನೊಂದಿಗೆ ಸಿಕ್ಕಿಬಿದ್ದಿದ್ದ ವ್ಯಕ್ತಿ ಮತ್ತು ದಾವೂದ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಎರಡು ದಿನಗಳಲ್ಲಿ ಅವನನ್ನು ಬಿಡಲಾಗಿದೆ. ನಿಮ್ಮೊಂದಿಗೆ (ದೇವೇಂದ್ರ) ಕಾರ್ಯಕ್ರಮಗಳಲ್ಲಿ ಮತ್ತು ಬಿಜೆಪಿ ಕಾರ್ಯಕ್ರಮಗಳಲ್ಲಿಯೂ ಸಹ ಅವನು ಕಾಣಿಸಿಕೊಂಡಿದ್ದಾನೆ" ಎಂದು ಹೇಳಿದರು.

"ಪ್ರಧಾನಿ ಅವರನ್ನು ಈ ವಿಷಯಕ್ಕೆ ತರಲು ನಾವು ಬಯಸುವುದಿಲ್ಲ. ಆದರೆ, ಈ ರಿಯಾಜ್ ಭಾಟಿ ಅವರು ಪ್ರಧಾನಿ ಕಾರ್ಯಕ್ರಮಕ್ಕೆ ಪ್ರವೇಶವನ್ನು ಹೊಂದಿದ್ದರು ಮತ್ತು ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇತರ ದೇಶಗಳ ಭೂಗತ ಪಾತಕಿಗಳು ಥಾಣೆಯಲ್ಲಿ ದೇವೇಂದ್ರ ಫಡ್ನವಿಸ್ ನೇಮಿಸಿದ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ಇತ್ಯರ್ಥ ಮಾಡಿಕೊಂಡಿದ್ದಾರೆ" ಎಂದು ನವಾಬ್ ಮಲಿಕ್ ಹೇಳಿದರು. ಹೀಗೆ ದೇವೇಂದ್ರ ಫಡ್ನವೀಸ್ ರಾಜಕೀಯವನ್ನು ಕ್ರಿಮಿನಲ್ ಮಾಡಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದರು.

 Devendra Fadnavis Against Nawab Maliks Hydrogen Bomb

"ನಾಗ್ಪುರದ ಕುಖ್ಯಾತ ಕ್ರಿಮಿನಲ್ ಮುನ್ನಾ ಯಾದವ್ ಅವರನ್ನು ಅವರ ಸರ್ಕಾರದ ಅವಧಿಯಲ್ಲಿ ದೇವೇಂದ್ರ ಫಡ್ನವಿಸ್ ಅವರು ಕಟ್ಟಡ ಕಾರ್ಮಿಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದರು. ಬಾಂಗ್ಲಾದೇಶಿಗಳ ಅಕ್ರಮ ವಲಸೆಯಲ್ಲಿ ಭಾಗಿಯಾಗಿರುವ ಹೈದರ್ ಆಜಮ್, ಮೌಲಾನಾ ಆಜಾದ್‌ನನ್ನು ಫೈನಾನ್ಸ್ ಕಾರ್ಪೊರೇಷನ್ ಅಧ್ಯಕ್ಷರಾಗಿ ಫಡ್ನವಿಸ್ ಅವರನ್ನು ನೇಮಿಸಿದರು" ನವಾಬ್ ಮಲಿಕ್ ಆರೋಪಗಳ ಸುರಿಮಳೆ ಸುರಿಸಿದ್ದಾರೆ.

2016 ರಲ್ಲಿ ನೋಟು ಅಮಾನ್ಯೀಕರಣದ ನಂತರ ದೇವೇಂದ್ರ ಫಡ್ನವಿಸ್ ಅವರು ಡಿಆರ್‌ಐನಲ್ಲಿದ್ದ ಸಮೀರ್ ವಾಂಖೆಡೆ ಅವರ ಸಹಾಯದಿಂದ ರಾಜ್ಯದಲ್ಲಿ ನಕಲಿ ಕರೆನ್ಸಿ ರಾಕೆಟ್‌ಗಳನ್ನು ರಕ್ಷಿಸಿದ್ದಾರೆ. ನವೆಂಬರ್ 8 2016 ರಂದು ನೋಟು ಅಮಾನ್ಯೀಕರಣವನ್ನು ಘೋಷಿಸಿದಾಗ, ದೇಶದ ವಿವಿಧ ಭಾಗಗಳಿಂದ ಸಾಕಷ್ಟು ನಕಲಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಯಿತು. ಈ ನಕಲಿ ನೋಟು ಅಸಲಿಯಾಗಿ ನಂತರ ಒಂದು ವರ್ಷದವರೆಗೆ ಮಹಾರಾಷ್ಟ್ರದಲ್ಲಿ ಫಡ್ನವಿಸ್ ಅವರ ಆಶೀರ್ವಾದದಿಂದ ನಡೆಯುತ್ತಿದ್ದರಿಂದ ಯಾವುದೇ ನಕಲಿ ನೋಟು ಪ್ರಕರಣ ಇರಲಿಲ್ಲ. ಅಕ್ಟೋಬರ್ 8, 2017 ರಂದು BKC ಮುಂಬೈನಲ್ಲಿ DRI 14.56 ಕೋಟಿ ರೂಪಾಯಿ ನಕಲಿ ಕರೆನ್ಸಿಯನ್ನು ವಶಪಡಿಸಿಕೊಂಡಿತು. ಆದರೆ ಈ ವಿಷಯವನ್ನು ಫಡ್ನವಿಸ್ ಕಾರ್ಪೆಟ್ ಅಡಿಯಲ್ಲಿ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ" ಎಂದು ನವಾಬ್ ಮಲಿಕ್ ಹೇಳಿದರು.

 Devendra Fadnavis Against Nawab Maliks Hydrogen Bomb

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಇಬ್ಬರು ಅಪರಾಧಿಗಳಿಂದ ಕಾಲ್ಪನಿಕ ದಾಖಲೆಗಳ ಮೂಲಕ ಎನ್‌ಸಿಪಿ ನಾಯಕ ಮತ್ತು ಅವರ ಕುಟುಂಬ ಸದಸ್ಯರ ಕಂಪನಿಯು ಉಪನಗರ ಕುರ್ಲಾದಲ್ಲಿ ಭೂಮಿಯನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಿದೆ ಎಂದು ದೇವೇಂದ್ರ ಫಡ್ನವಿಸ್ ಆರೋಪಿಸಿದ ಒಂದು ದಿನದ ನಂತರ ನವಾಬ್ ಮಲಿಕ್ ಅವರ ಈ ಆರೋಪಗಳನ್ನು ಮಾಡಿದ್ದಾರೆ.

ಜೊತೆಗೆ ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ತೆಗೆದುಹಾಕುವ ಮೊದಲು ಮಾದಕ ದ್ರವ್ಯ ದಂಧೆ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಮಲಿಕ್ ವಾಂಖೆಡೆ ವಿರುದ್ಧ ಆರೋಪಗಳ ಸರಮಾಲೆಯನ್ನು ಹೊರಿಸಿದ್ದಾರೆ.

English summary
Maharashtra minister Nawab Malik said that the former Chief Minister had links with Riyaz Bhati, an aide of don Dawood Ibrahim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X