• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಗೆ ರೈಲು, ವಿಮಾನ ಸೇವೆ ಪುನಾರಂಭದ ಕುರಿತು 8 ದಿನದಲ್ಲಿ ನಿರ್ಧಾರ: ಮಹಾರಾಷ್ಟ್ರ ಸರ್ಕಾರ

|

ಮುಂಬೈ, ನವೆಂಬರ್ 23: ಮಹಾರಾಷ್ಟ್ರದಿಂದ ದೆಹಲಿಗೆ ವಿಮಾನ, ರೈಲು ಸೇವೆಯನ್ನು ಪುನರಾರಂಭಿಸುವ ಕುರಿತು ಮುಂದಿನ 8 ದಿನಗಳೊಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸಚಿವ ವಿಜಯ್ ತಿಳಿಸಿದ್ದಾರೆ.

ಕೊರೊನಾ ಸೋಮಕು ದೇಶದಲ್ಲಿ ಹರಡಲು ಆರಂಭವಾದಾಗಿನಿಂದ ಮಹಾರಾಷ್ಟ್ರ, ಮುಂಬೈನಲ್ಲಿ ಸೋಂಕು ವಿಪರೀತವಾಗಿ ಕಾಣಿಸಿಕೊಂಡಿತ್ತು. ಇದೀಗ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಸಫಲವಾಗಿದೆ.

ದೆಹಲಿ ಮುಂಬೈ ನಡುವೆ ರೈಲು ಹಾಗೂ ವಿಮಾನ ಸೇವೆ ಸ್ಥಗಿತಕ್ಕೆ ನಿರ್ಧಾರ

ಆದರೆ ದೆಹಲಿಯಲ್ಲಿ ಸೋಂಕು ಹೆಚ್ಚಾಗುತ್ತಿರುವ ಕಾರಣ ಒಂದೊಮ್ಮೆ ರೈಲು ಹಾಗೂ ವಿಮಾನ ಸಂಚಾರವನ್ನು ಮತ್ತೆ ಆರಂಭಿಸಿದರೆ ಮಹಾರಾಷ್ಟ್ರ ಮತ್ತೆ ಕೊರೊನಾ ಹಾಟ್‌ಸ್ಪಾಟ್ ಆಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಹೀಗಾಗಿ ಮುಂದಿನ ಎಂಟು ದಿನಗಳೊಳಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು ಈಗಿರುವ ಲಾಕ್‌ಡೌನ್ ನಿಯಮಗಳು ಮುಂದುವರೆಯಲಿದೆ. ನವೆಂಬರ್ 30ರವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ದೆಹಲಿಯಷ್ಟೇ ಅಲ್ಲದೆ ಗುಜರಾತ್‌ನಿಂದ ಆಗಮಿಸುವ ರೈಲುಗಳಿಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ.ದೆಹಲಿ, ಗುಜರಾತ್ ಸೇರಿದಂತೆ ಹಲವು ಕಡೆ ತೀವ್ರ ನಿಗಾ ವಹಿಸದಿದ್ದರೆ ಮಹಾರಾಷ್ಟ್ರವು ಸೇರಿದಂತೆ ಹಲವು ರಾಜ್ಯಗಳ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 6746 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 5.29 ಲಕ್ಷ ಕೊರೊನಾ ಸೋಂಕಿತರಿದ್ದಾರೆ.

   ಮಹಾಮಾರಿಗೆ Gandhi ಮರಿ ಮೊಮ್ಮಗ ಬಲಿ | Oneindia Kannada

   ಗುಜರಾತ್ ಪರಿಸ್ಥಿತಿಯು ದೆಹಲಿಯ ರೀತಿಯಲ್ಲಿಯೇ ಇದೆ, ಈಗಲೇ ಎಚ್ಚೆತ್ತುಕೊಂಡರೆ ಡಿಸೆಂಬರ್‌ನಲ್ಲಿ ಬರಬಹುದಾದ ಆತಂಕವನ್ನು ಕೊಂಚ ಕಡಿಮೆ ಮಾಡಬಹುದಾಗಿದೆ.

   English summary
   Maharashtra, which has just managed to contain its huge Coronavirus outbreak, will consider if it should allow transport to and from Delhi, which is witnessing a flare-up in cases for more than a month.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X