ದುಬೈನಿಂದ ಗಡಿಪಾರಾಗಿದ್ದ ದಾವೂದ್ ಆಪ್ತ ಸಹಚರ ಸಿಬಿಐ ವಶಕ್ಕೆ

ಮುಂಬೈ, ಮಾರ್ಚ್ 8: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಶರಣಾಗಿ, ಭಾರತಕ್ಕೆ ವಾಪಸಾಗುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಆತನ ಆಅಪ್ತ ಸಹಚರ ಫಾರೂಖ್ ತಾಕ್ಲಾ ಎಂಬುವವನನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ. ದಾವೂದ್ ಶರಣಾಗತಿಯ ಹೇಳಿಕೆಗೆ ಈ ಬೆಳವಣಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ದುಬೈನಲ್ಲಿದ್ದ ಫಾರೂಖ್ ತಾಕ್ಲಾನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಗಡಿಪಾರು ಮಾಡಿದ ನಂತರ, ಭಾರತದ ಸಿಬಿಐ ಪೊಲಿಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಮುಂಬೈಗೆ ಆತನನ್ನು ಇಂದು(ಮಾ.08) ಬೆಳಿಗ್ಗೆ ಕರೆತರಲಾಗಿದೆ.

ತಾಕ್ಲಾನನ್ನು ಸಿಬಿಐ ಪೊಲೀಸರು ಇಂದೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಂತರ ಆತನನ್ನು ಮುಂಬೈನ ಟಾಡಾ(Terrorist and Disruptive Activities ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಮೂಲಗಳು ತಿಳಿಸಿವೆ.

Dawood's key aide arrested, brought to Mumbai from Dubai

1993 ರ ಬಾಂಬೆ ಸ್ಫೋಟದ ನಂತರ ಆತ ಭಾರತದಿಂದ ತಲೆಮರೆಸಿಕೊಂದಿದ್ದ. ತಾಕ್ಲಾ ಮೇಲೆ ಅಪರಾಧ ಪಿತೂರಿ, ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+