ರಾಜಕಾರಣಿಗಳ ರಕ್ಷೆಯಿಂದ 100 ಕೋಟಿ ರು. ಬಾಚಿದ್ದ ದಾವೂದ್ ತಮ್ಮ!
ರಾಜಕಾರಣಿಗಳ ನೆರವಿನಿಂದ 100 ಕೋಟಿ ರು. ಹಣ ಮಾಡಿದ್ದ ಕಸ್ಕರ್. ಕುಖ್ಯಾತ ಭೂಗತ ಪಾತಕಿ ದಾವೂದ್ ಕಿರಿಯ ಸಹೋದರ ಕಸ್ಕರ್.
ಮುಂಬೈ, ಸೆಪ್ಟೆಂಬರ್ 21: ಇತ್ತೀಚೆಗೆ ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಕಿರಿಯ ಸಹೋದರ ಇಕ್ಬಾಲ್ ಕಸ್ಕರ್ ಬಗ್ಗೆ ತನಿಖೆ ಮುಂದುವರಿಸಿರುವ ಪೊಲೀಸರು ಅನೇಕ ಸ್ವಾರಸ್ಯಕರ ವಿಚಾರಗಳನ್ನು ಕಂಡುಕೊಂಡಿದ್ದಾರೆ.
ಕೆಲವು ರಾಜಕಾರಣಿಗಳ ಶ್ರೀರಕ್ಷೆ ಹೊಂದಿದ್ದ ಕಸ್ಕರ್, ಅವರ ನೆರವಿನಿಂದಲೇ ಸುಮಾರು 100 ಕೋಟಿ ರು.ಗಳನ್ನು ಅಕ್ರಮವಾಗಿ ಸಂಪಾದಿಸಿದ್ದ ಎಂಬ ವಿಚಾರ ಈಗ ಹೊರಬಿದ್ದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಎನ್ ಸಿಪಿ ಪಕ್ಷದ ನಾಯಕರ ಮೇಲೆ ಪೊಲೀಸರ ಸಂಶಯದ ದೃಷ್ಟಿ ಹರಿದಿದ್ದು, ಅವರ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಂಬೈನ ಥಾಣೆ ವಿಭಾಗದ ಪೊಲೀಸ್ ಕಮೀಷನರ್ ಪರಂಬೀರ್ ಸಿಂಗ್, ಹವಾಲಾ ಮಾರ್ಗ ಗಳ ಮೂಲಕ ಕಸ್ಕರ್ ಗೆ ಈ ಹಣ ರವಾನೆಯಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications