ಐಎನ್‌ಎಸ್ ವಿಕ್ರಾಂತ್ ಪ್ರಕರಣ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಮತ್ತು ಪುತ್ರನಿಗೆ ರಿಲೀಫ್

ಮುಂಬೈ, ಏಪ್ರಿಲ್ 20: ಮಹಾರಾಷ್ಟ್ರದಲ್ಲಿ ಐಎನ್‌ಎಸ್ ವಿಕ್ರಾಂತ್ ನೌಕೆಯ ಸಂರಕ್ಷಣೆಗಾಗಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಪುತ್ರ ನೀಲ್ ಸೋಮಯ್ಯಗೆ ತಾತ್ಕಾಲಿಕೆ ರಿಲೀಫ್ ಸಿಕ್ಕಿದೆ. ಏಪ್ರಿಲ್ 28 ರವರೆಗೆ ಬಂಧನದಿಂದ ಬಾಂಬೆ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.

ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ನೇತೃತ್ವದ ಏಕ ಸದಸ್ಯ ಪೀಠವು ಬಂಧನದ ವೇಳೆ ಆರೋಪಿ ನೀಲ್ ಸೋಮಯ್ಯ ಅನ್ನು 50,000 ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ.

ಕಳೆದ 2013ರಲ್ಲಿ ಸೋಮಯ್ಯ ಸಾರ್ವಜನಿಕರಿಂದ 57 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಮಾಜಿ ಸೈನಿಕರೊಬ್ಬರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಬಿಜೆಪಿಯ ಮಾಜಿ ಸಂಸದ ಕಿರಿತ್ ಸೋಮಯ್ಯ ಮತ್ತು ನೀಲ್ ಸೋಮಯ್ಯ ವಿರುದ್ಧ ಏಪ್ರಿಲ್ 6ರಂದು ನಗರದ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ನಿಷ್ಕ್ರಿಯಗೊಂಡ ಯುದ್ಧನೌಕೆ ಹಾಳಾಗದಂತೆ ರಕ್ಷಿಸುವುದಕ್ಕಾಗಿ ದೇಣಿಗೆ ಸಂಗ್ರಹಿಸಲಾಗಿತ್ತು. ಆದರೆ ಹಾಗೆ ಸಂಗ್ರಹಿಸಿದ ಹಣವನ್ನು ರಾಜ್ಯಪಾಲರಿಗೆ ಆಗಲಿ ಅಥವಾ ಮೂಲ ಉದ್ದೇಶಕ್ಕಾಗಲಿ ಬಳಕೆಯಾಗಿಲ್ಲ ಎನ್ನುವುದೇ ಮುಖ್ಯ ಆರೋಪವಾಗಿದೆ.

Cheating case: Bombay HC grants interim protection from arrest till April 28 to Kirit Somaiyas son Neil Somaiya

ತಮ್ಮ ವಿರುದ್ಧದ ಆರೋಪ ನಿರಾಕರಿಸಿದ ಕಿರಿತ್ ಸೋಮಯ್ಯ:

ಐಎನ್‌ಎಸ್ ವಿಕ್ರಾಂತ್ ನೌಕೆಯ ಸಂರಕ್ಷಣೆಗಾಗಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ತಮ್ಮ ವಿರುದ್ಧ ಎಲ್ಲಾ ಆರೋಪಗಳನ್ನು ಕಿರಿತ್ ಸೋಮಯ್ಯ ತಳ್ಳಿ ಹಾಕಿದ್ದಾರೆ. 57 ಕೋಟಿ ರೂಪಾಯಿ ಸಂಗ್ರಹಿತ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ಅವರು ತಿರಸ್ಕರಿಸಿದ್ದಾರೆ. ಕಳೆದ ವಾರ ಕೂಡ ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಬಾಂಬೆ ಕೋರ್ಟ್, ಕಿರಿತ್ ಸೋಮಯ್ಯರಿಗೆ ಬಂಧನದಿಂದ ರಿಲೀಫ್ ನೀಡಿತ್ತು.

Cheating case: Bombay HC grants interim protection from arrest till April 28 to Kirit Somaiyas son Neil Somaiya

ಏಪ್ರಿಲ್ 28ರಂದು ಕೋರ್ಟ್ ವಿಚಾರಣೆ:

ಬುಧವಾರ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಏಪ್ರಿಲ್ 28ರವರೆಗೂ ನೀಲ್ ಸೋಮಯ್ಯ ಮತ್ತು ಕಿರಿತ್ ಸೋಮಯ್ಯಗೆ ರಕ್ಷಣೆ ನೀಡಿದೆ. ಇದೇ ವೇಳೆ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿದೆ.

ಪೊಲೀಸರು ಕಿರಿತ್ ಸೋಮಯ್ಯ ಪ್ರಶ್ನಿಸಿದ್ದು, ನೀಲ್ ಸೋಮಯ್ಯರನ್ನೂ ವಿಚಾರಣೆಗೆ ಒಳಪಡಿಸಲು ಬಯಸುತ್ತಿದ್ದಾರೆ ಎಂದು ಪೊಲೀಸರ ಪರ ವಾದ ಮಂಡಿಸಿದ ವಕೀಲ ಶಿರೀಶ್ ಗುಪ್ತೆ ಹೈಕೋರ್ಟ್‌ಗೆ ತಿಳಿಸಿದರು. ತದನಂತರ ಏಪ್ರಿಲ್ 25 ರಿಂದ ಏಪ್ರಿಲ್ 28 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರ ನಡುವೆ ವಿಚಾರಣೆಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ ನೀಲ್ ಸೋಮಯ್ಯಗೆ ನ್ಯಾಯಮೂರ್ತಿ ಪ್ರಭುದೇಸಾಯಿ ಸೂಚಿಸಿದರು.

Cheating case: Bombay HC grants interim protection from arrest till April 28 to Kirit Somaiyas son Neil Somaiya

ಏನಿದು ಐಎನ್ಎಸ್ ವಿಕ್ರಾಂತ್ ಪ್ರಕರಣ?:

ಐಎನ್ಎಸ್ ವಿಕ್ರಾಂತ್ ಅನ್ನು ಕಾಪಾಡಿಕೊಳ್ಳುವ ಉದ್ದೇಶದಿಂದಾಗಿ ನಡೆಸಿದ ಅಭಿಯಾನದಡಿ ಸಂಗ್ರಹಿಸಿದ ಕೋಟಿ ಕೋಟಿ ರೂಪಾಯಿ ಹಣವನ್ನು ಬಿಜೆಪಿ ಸಂಸದ ಕಿರಿತ್ ಸೋಮಯ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ 1971ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಇದೇ ಐಎನ್ಎಸ್ ವಿಕ್ರಾಂತ್ ಬಹುಮುಖ್ಯ ಪಾತ್ರ ವಹಿಸಿತ್ತು. ಆದರೆ ತದನಂತರದ ಐಎನ್ಎಸ್ ನಿರ್ವಹಣೆಯು ಹೊರೆ ಆಗುವುದಕ್ಕೆ ಶುರು ಆಯಿತು. ಈ ಹಿನ್ನೆಲೆ ಐಎನ್ಎಸ್ ನಿರ್ವಹಣೆಗಾಗಿ ಅಭಿಯಾನ ಶುರು ಮಾಡಲಾಗಿತ್ತು. ಅಂಥ ಅಭಿಯಾನದಿಂದಲೇ ಅದೊಂದು ಮ್ಯೂಸಿಯಂ ಆಗಿ ಬದಲಾಯಿತು. ಮುಖ್ಯವಾಗಿ ಉದ್ದೇಶ ಸಾಕಾರಗೊಳ್ಳುವುದಕ್ಕೆ 200 ಕೋಟಿ ರೂಪಾಯಿ ಬೇಕಾಗಿದ್ದರೂ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ಹಣಕಾಸು ಬೆಂಬಲವನ್ನು ನೀಡಲಿಲ್ಲ.

ಭಾರತದ ಐಎನ್ಎಸ್ ವಿಕ್ರಾಂತ್ ಅನ್ನು ಸಂರಕ್ಷಿಸುವ ಉದ್ದೇಶದಿಂದ ದೇಶಾದ್ಯಂತ ಅಭಿಯಾನ ಆರಂಭಿಸಲಾಯಿತು. ಮಹಾರಾಷ್ಟ್ರದ ಸರ್ವಪಕ್ಷಗಳ ನಾಯಕರ ನಿಯೋಗವು ಅಂದಿನ ಕೇಂದ್ರ ರಕ್ಷಣಾ ಸಚಿವ ಎಕೆ ಆಂಟೋನಿ ಮತ್ತು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದರು. ಅಂದು ಕಿರಿತ್ ಸೋಮಯ್ಯ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದರು. ವಿಕ್ರಾಂತ್ ಉಳಿಸಿ ಅಭಿಯಾನಕ್ಕಾಗಿ ಸ್ವಯಂ ಪ್ರೇರಿತರಾಗಿ ಮುಂದೆ ಬರುವಂತೆ ಕರೆ ನೀಡಲಾಗಿತ್ತು.

Recommended Video

      ಆರೊನ್ ಫಿಂಚ್-ಪ್ರಸಿದ್ಧ್ ಕೃಷ್ಣ ಮೈದಾನದಲ್ಲೇ ಮಾತಿನ‌ ಚಕಮಕಿಯ ವಿಡಿಯೋ ವೈರಲ್ | Oneindia Kannada

      'Save Vikrant' ಎಂಬ ಬರಹವುಳ್ಳ ಟೀ-ಶರ್ಟ್ ಮತ್ತು ಜೆರ್ಸಿಯನ್ನು ಹಾಕಿಕೊಂಡು ಹಣ ಸಂಗ್ರಹಿಸುವ ಕಾರ್ಯ ಶುರುವಾಯಿತು. ಹಲವು ಮಂದಿ ಈ ಅಭಿಯಾನಕ್ಕಾಗಿ ಲಕ್ಷ ಲಕ್ಷ ರೂಪಾಯಿ ಹಣವನ್ನು ನೆರವಾಗಿ ನೀಡಿದ್ದಾರೆ. ಇತ್ತೀಚಿಗೆ ತಮಗೆ ಕರೆ ಮಾಡಿ ಅಭಿಯಾನಕ್ಕಾಗಿ 5 ರಿಂದ 10 ಸಾವಿರ ರೂಪಾಯಿ ನೀಡಿದ್ದಾಗಿ ಹೇಳಿದ್ದರು. ಆದರೆ ಹೀಗೆ ಸಂಗ್ರಹಿಸಲಾದ 57 ಕೋಟಿಗೂ ಅಧಿಕ ಹಣವನ್ನು ಬಿಜೆಪಿಯ ಸಂಸದ ಕಿರಿತ್ ಸೋಮಯ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+