ಔರಾಂಗಬಾದ್, ಉಸ್ಮಾನಾಬಾದ್ ಹೆಸರು ಬದಲಾಯಿಸಿ: ಶಿವಸೇನಾ
ಮುಂಬೈ, ನವೆಂಬರ್ 08: ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಅಲ್ಲಿನ ಎರಡು ಜಿಲ್ಲೆಗಳ ಹೆಸರನ್ನು ಬದಲಿಸುತ್ತಿದ್ದಂತೆ, ದೇಶದ ವಿವಿಧ ರಾಜ್ಯಗಳಲ್ಲಿ ಹೆಸರು ಬದಲಿಸುವ ಕಿಚ್ಚು ಹೆಚ್ಚಾಗಿದೆ.
ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರದ ಎರಡು ನಗರಗಳ ಹೆಸರನ್ನು ಬದಲಿಸುವಂತೆ, ಶಿವಸೇನೆ ಆಗ್ರಹಿಸುತ್ತಿದೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ವಕ್ತಾರ ಸಂಜಯ್ ರಾವತ್, 'ಉತ್ತರ ಪ್ರದೇಶ ಸರ್ಕಾರವು ಅಲಹಾಬಾದ್ ಹಾಗೂ ಫೈಜಾಬಾದ್ ನ್ನು ಪ್ರಜ್ಯಾರಾಜ್ ಹಾಗೂ ಅಯೋಧ್ಯಾ ಎಂದು ಬದಲಿಸಬಹುದಾದರೆ, ಮಹಾರಾಷ್ಟ್ರದಲ್ಲಿ ಏಕೆ ಸಾಧ್ಯವಿಲ್ಲ.
ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಉಸ್ಮಾನಾದ್ ನ್ನು ಸಂಭಾಜಿ ನಗರ ಹಾಗೂ ಧರಾಶಿವ ನಗರ ಬದಲಾಯಿಸುವಂತೆ ರಾಜ್ಯದ ಸಿಎಂ ದೇವೇಂದ್ರ ಫಡ್ನಾವಿಸ್ ಗೆ ಆಗ್ರಹಿಸಿದ್ದಾರೆ.

ಈ ಎರಡು ನಗರಗಳ ಹೆಸರನ್ನು ಬದಲಿಸಬೇಕೆಂದು ಶಿವಸೇನೆ ಕಳೆದರೆಡು ದಶಕದಿಂದ ಆಗ್ರಹಿಸುತ್ತಾ ಬಂದಿದೆ. ಆದರೆ, ಅಧಿಕೃತವಾಗಿ ಮನವಿ ಮಾಡಿಲ್ಲ. ಆದರೆ, ಈ ಬಾರಿ ಇದನ್ನು ಸಾಧಿಸಲು ಶಿವಸೇನಾ ಪಣತೊಟ್ಟಿದೆ ಎಂದು ಶಿವಸೇನಾ ನಾಯಕಿ ಮನೀಶಾ ಕಾಯಾಂಡೆ ಹೇಳಿದ್ದಾರೆ.
ಗುಜರಾತಿನ ಅಹಮದಾಬಾದ್ ನಗರವನ್ನು ಕರ್ಣಾವತಿ ಎಂದು, ಮಧ್ಯಪ್ರದೇಶದ ಭೂಪಾಲ್ ನ್ನು ಭೋಜ್ ಪಾಲ್ ಎಂದು ಬದಲಿಸಬೇಕೆಂಬ ಕೂಗು ಕೇಳಿಬಂದಿದೆ.
ಈ ಬಗ್ಗೆ ಗುರುವಾರ ಮಾತನಾಡಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ, ಅಹಮದಾಬಾದ್ ನ್ನು ಕರ್ಣವತಿ ಎಂದು ಬದಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾನೂನು ಹಾಗೂ ಇತರೆ ಆಯಾಮದ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ದೃಡ ನಿರ್ಧಾರಕ್ಕೆ ಬರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications