ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮತ್ತೆ ಕಠಿಣ ಲಾಕ್‌ಡೌನ್‌ ಎಚ್ಚರಿಕೆ ನೀಡಿದ ಸಿಎಂ ಠಾಕ್ರೆ

|
Google Oneindia Kannada News

ಮುಂಬೈ, ಜೂನ್ 10: ಕೊರೊನಾ ವೈರಸ್ ಹಾಟ್‌ಸ್ಪಾಟ್‌ ರಾಜ್ಯ ಎನಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್‌ ಸುಳಿವು ಸಿಕ್ಕಿದೆ. ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ. ಜನರು ಸರ್ಕಾರದ ನಿಬಂಧನೆಗಳನ್ನು ಪಾಲಿಸುವ ವಿಚಾರದಲ್ಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಸರ್ಕಾರದ ನಿಬಂಧನೆಗಳನ್ನು ನಿರ್ಲಕ್ಷ್ಯಿಸಿದರೆ ಮತ್ತೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಬೇಕಾಗುವ ಸಂದರ್ಭ ಬರಬಹುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ 90 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆಮಹಾರಾಷ್ಟ್ರದಲ್ಲಿ 90 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

'ಮಿಷನ್ ಬಿಗಿನ್ ಅಗೈನ್'ಗಾಗಿ ಸರ್ಕಾರವೂ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿ ಲಾಕ್‌ಡೌನ್‌ ನಿಯಮವನ್ನು ಹಂತ ಹಂತವಾಗಿ ಜಾರಿಗೊಳಿಸಲಾಯಿತು. ಅದೇ ರೀತಿ ಹಂತ ಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸಬೇಕಾಗಿದೆ. ಸದ್ಯಕ್ಕೆ ಅಪಾಯ ನಮ್ಮಿಂದ ಹೋಗಿಲ್ಲ. ಕೊರೊನಾ ವಿರುದ್ಧ ಹೋರಾಡಲು ಆರ್ಥಿಕ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತಿಲ್ಲ'' ಎಂದು ಠಾಕ್ರೆ ಹೇಳಿದ್ದಾರೆ.

'ಲಾಕ್‌ಡೌನ್‌ ತೆರವುಗೊಳಿಸುತ್ತಿರುವುದು ಅಪಾಯಕಾರಿ ಎಂದು ಅನಿಸಿದರೆ ಮತ್ತೆ ಕಠಿಣ ಲಾಕ್‌ಡೌನ್‌ ಹೇರಲು ಒತ್ತಾಯಿಸಬೇಕಾಗುತ್ತದೆ' ಎಂದು ಸಿಎಂ ಹೇಳಿದ್ದಾರೆ.

''ಮಹಾರಾಷ್ಟ್ರದ ಜನರು ಸರ್ಕಾರದೊಂದಿಗೆ ಸಹಕರಿಸುತ್ತಿದ್ದಾರೆ. ಸರ್ಕಾರದ ಸೂಚನೆಗಳನ್ನು ಅನುಸರಿಸುತ್ತಿದ್ದಾರೆ. ಸರ್ಕಾರವು ತಮ್ಮ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ನಂಬಿಕೆ ಜನರಲ್ಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲರಲ್ಲೂ ವಿನಂತಿಸುತ್ತೇನೆ" ಎಂದು ಸಿಎಂ ಹೇಳಿದರು.

Chances have to re imposed the lockdown in Maharashtra said uddhav thackeray

ಮಹಾರಾಷ್ಟ್ರದಲ್ಲಿ 90,000ಕ್ಕೂ ಹೆಚ್ಚು ಕೊವಿಡ್ -19 ಪ್ರಕರಣಗಳು ವರದಿಯಾಗಿದೆ. ಈವರೆಗೂ ಸುಮಾರು 3,200 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

English summary
If the relaxations to the lockdown start turning out to be risky, we will be compelled to re-impose the lockdown: Chief Minister's Office Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X