ಏನಿದು ಮೈಲ್ಡ್‌ ಹೀಟ್‌ ಸ್ಟ್ರೋಕ್?‌ ಇದರ ಲಕ್ಷಣಗಳೇನು? ತುರ್ತು ಚಿಕಿತ್ಸೆ ಹೇಗಿರಬೇಕು?

ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ತಾಪ ದೇಹದ ಮೇಲೆ ಪರಿಣಾಮ ಬೀರುತ್ತದೆ. ಬಿಸಿಲ ತಾಪಕ್ಕೆ ಜನರು ಸಾಮಾನ್ಯವಾಗಿ ಆಯಾಸ ಮತ್ತು ತಲೆನೋವಿನಿಂದ ಬಳಲುವಂತಾಗುತ್ತದೆ. ಈ ಋತುವಿನಲ್ಲಿ ಅತಿಯಾಗಿ ಬೆವರುವುದು ಕೂಡಾ ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಈ ಲಕ್ಷಣಗಳು ಕೆಲವೊಮ್ಮೆ ಮೈಲ್ಡ್‌ ಹೀಟ್‌ ಸ್ಟ್ರೋಕ್‌ನ ಸಂಕೇತವಾಗಿರಬಹುದು. ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ತಾಪಮಾನ ಹೀಟ್‌ ಸ್ಟ್ರೋಕ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ರೋಗಲಕ್ಷಣಗಳನ್ನು ಮೊದಲೇ ಗುರುತಿಸಿದರೆ, ಸಮಸ್ಯೆ ಗಂಭೀರವಾಗುವುದನ್ನು ತಡೆಯಬಹುದು.

ಏನಿದು ಮೈಲ್ಡ್‌ ಹೀಟ್‌ ಸ್ಟ್ರೋಕ್ ?:

ನಮ್ಮ ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆಯು ಶಾಖದ ಒತ್ತಡದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಇದ್ದಾಗ ದೇಹವು ತನ್ನನ್ನು ತಾನೇ ತಣ್ಣಗಾಗಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಈ ಸ್ಥಿತಿಯನ್ನು ಮೈಲ್ಡ್‌ ಹೀಟ್‌ ಸ್ಟ್ರೋಕ್ ಎಂದು ಕರೆಯಲಾಗುತ್ತದೆ. ಆರಂಭದಲ್ಲಿಯೇ ಇದರ ಬಗ್ಗೆ ಕಾಳಜಿ ವಹಿಸದಿದ್ದರೆ, ಅದು ಗಂಭೀರ ಹೀಟ್‌ ಸ್ಟ್ರೋಕ್‌ ಆಗಿ ಪರಿವರ್ತನೆಯಾಗಬಹುದು. ಇದು ದೇಹದ ಅಂಗಗಳ ಮೇಲೆ ಕೂಡಾ ಪರಿಣಾಮ ಬೀರುತ್ತದೆ.

Mild heat stroke

ಮೈಲ್ಡ್‌ ಹೀಟ್‌ ಸ್ಟ್ರೋಕ್ ಲಕ್ಷಣಗಳು:

* ಅತಿಯಾಗಿ ಬೆವರುವುದು.
* ಸ್ನಾಯುಗಳಲ್ಲಿ ಸೆಳೆತ, ಕೈಕಾಲು ಎಳೆದಂತೆ ಭಾಸವಾಗುವುದು.
* ಹಠಾತ್ ದೌರ್ಬಲ್ಯ ಮತ್ತು ಆಯಾಸ
* ಸತತ ತಲೆನೋವು ಮತ್ತು ತಲೆ ಭಾರ
* ವಾಕರಿಕೆ ಅಥವಾ ವಾಂತಿ
* ತಲೆತಿರುಗುವಿಕೆ ಅಥವಾ ಮೂರ್ಛೆ ಬಂದಂತೆ ಅನಿಸುವುದು.
* ಹೃದಯ ಬಡಿತ ಹೆಚ್ಚಾಗುವುದು, ನಾಡಿ ಬಡಿತ ದುರ್ಬಲವಾಗುವುದು
* ಚರ್ಮವು ಶೀತ ಮತ್ತು ಜಿಗುಟಾದ ಅನುಭವವಾಗುವುದು
* ದೇಹದ ಉಷ್ಣತೆಯು 100.4 ಡಿಗ್ರಿಗಳಿಗಿಂತ ಹೆಚ್ಚಾಗಿರುವುದು.
* ಅತಿಯಾಗಿ ಬಾಯಾರುವುದು

ದೇಹವು ಶಾಖದ ವಿರುದ್ಧ ಹೋರಾಡುವಲ್ಲಿ ವಿಫಲಾವಾಗಿದೆ ಎನ್ನುವುದನ್ನು ಈ ಎಲ್ಲಾ ಚಿಹ್ನೆಗಳು ಸೂಚಿಸುತ್ತವೆ. ಈ ಲಕ್ಷಣಗಳು ಕಂಡು ಬಂದರೆ ತಕ್ಷಣದ ಪರಿಹಾರದ ಅಗತ್ಯವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಹಸಿ ಹಾಲಿನೊಂದಿಗೆ ಈ ಪುಡಿ ಬೆರೆಸಿ ಹಚ್ಚಿದರೆ ಬೇಸಿಗೆಯಲ್ಲಿಯೂ ಮುಖದ ಕಾಂತಿ ಕಾಪಾಡಬಹುದು!
ಹಸಿ ಹಾಲಿನೊಂದಿಗೆ ಈ ಪುಡಿ ಬೆರೆಸಿ ಹಚ್ಚಿದರೆ ಬೇಸಿಗೆಯಲ್ಲಿಯೂ ಮುಖದ ಕಾಂತಿ ಕಾಪಾಡಬಹುದು!

ಮೈಲ್ಡ್‌ ಹೀಟ್‌ ಸ್ಟ್ರೋಕ್ ಲಕ್ಷಣಗಳು ಕಾಣಿಸಿಕೊಂಡರೆ ಏನು ಮಾಡಬೇಕು?:

ಮೈಲ್ಡ್‌ ಹೀಟ್‌ ಸ್ಟ್ರೋಕ್ ಲಕ್ಷಣಗಳನ್ನು ಗಮನಿಸಿದರೆ, ಸಕಾಲಿಕ ಚಿಕಿತ್ಸೆಯನ್ನು ಪ್ರಾರಂಭಿಸಲು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಅದಕ್ಕೂ ಮುನ್ನ ತಕ್ಷಣ ಕೈಗೊಳ್ಳಬೇಕಾದ ಅಂಶಗಳಿವೆ. ಅವುಗಳೆಂದರೆ

* ರೋಗಿಯನ್ನು ತಕ್ಷಣ ತಂಪಾದ ಸ್ಥಳಕ್ಕೆ ಕರೆದೊಯ್ಯಿರಿ.
* ನೀರು ಅಥವಾ ಎಲೆಕ್ಟ್ರೋಲೈಟ್ ಪಾನೀಯಗಳನ್ನು ನಿಧಾನವಾಗಿ ನೀಡಿ.
* ಬಿಗಿಯಾದ ಬಟ್ಟೆಗಳನ್ನು ಸಡಿಲಗೊಳಿಸಿ ಅಥವಾ ಹೆಚ್ಚುವರಿ ಬಟ್ಟೆಗಳನ್ನು ತೆಗೆದುಹಾಕಿ.
* ಹಣೆ, ಕುತ್ತಿಗೆ ಮತ್ತು ದೇಹಕ್ಕೆ ಕೋಲ್ಡ್ ಕಂಪ್ರೆಸ್‌ಗಳನ್ನು ಅನ್ವಯಿಸಿ.
* ಫ್ಯಾನ್ ಅಥವಾ ಕೂಲರ್‌ನ ತಂಗಾಳಿಯಲ್ಲಿ ವಿಶ್ರಾಂತಿ ಪಡೆಯಲು ಬಿಡಿ.
* ಚಹಾ, ಕಾಫಿ ಅಥವಾ ಮದ್ಯಪಾನದಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಇದು ದೇಹದಲ್ಲಿನ ನೀರಿನ ಅಂಶವನ್ನು ಕಡಿಮೆ ಮಾಡಬಹುದು.
* ಸ್ಥಿತಿ ಸುಧಾರಿಸದಿದ್ದರೆ ಅಥವಾ ಪ್ರಜ್ಞೆ ತಪ್ಪುವುದು, ಅಧಿಕ ಜ್ವರ, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಹೆಚ್ಚಾಗಲು ಪ್ರಾರಂಭಿಸಿದರೆ, ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಮುಖ್ಯ.

ಬೇಸಿಗೆಯಲ್ಲಿ ಡಯಾಲಿಸಿಸ್ ರೋಗಿಗಳಲ್ಲಿ ಸೋಂಕಿನ ಅಪಾಯ ಹೆಚ್ಚಾಗುವುದೇಕೆ? ಸಮಸ್ಯೆ ಉಲ್ಬಣಿಸದಂತೆ ಏನು ಮಾಡಬೇಕು
ಬೇಸಿಗೆಯಲ್ಲಿ ಡಯಾಲಿಸಿಸ್ ರೋಗಿಗಳಲ್ಲಿ ಸೋಂಕಿನ ಅಪಾಯ ಹೆಚ್ಚಾಗುವುದೇಕೆ? ಸಮಸ್ಯೆ ಉಲ್ಬಣಿಸದಂತೆ ಏನು ಮಾಡಬೇಕು

ಮೈಲ್ಡ್‌ ಹೀಟ್‌ ಸ್ಟ್ರೋಕ್‌ನಿಂದ ಸುರಕ್ಷಿತವಾಗಿರುವುದು ಹೇಗೆ?:

ಬೇಸಿಗೆಯಲ್ಲಿ ಶಾಖದ ಹೊಡೆತವನ್ನು ತಪ್ಪಿಸಲು, ಕೆಲವು ಸರಳ ಸಲಹೆಗಳನ್ನು ಅನುಸರಿಸಬೇಕು. ಅವುಗಳೆಂದರೆ :

* ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ.
* ಹೊರಗೆ ಹೋಗುವಾಗ ಹಗುರವಾದ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ.
* ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಅಂದರೆ ಸೂರ್ಯನ ತಾಪಮಾನ ಹೆಚ್ಚಾಗಿ ಇರುವಾಗ ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸಿ.
* ಬೆಳಿಗ್ಗೆ ಅಥವಾ ಸಂಜೆ ಹೆಚ್ಚು ಶ್ರಮದಾಯಕ ಕೆಲಸವನ್ನು ಮಾಡಿ.
* ಮಕ್ಕಳು ಮತ್ತು ವೃದ್ಧರು ಮನೆಯೊಳಗೇ ಉಳಿಯುವುದು ಒಳ್ಳೆಯದು.
* ನಿರ್ಜಲೀಕರಣದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+