• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಂಚನೆ ಕೇಸ್: ಖ್ಯಾತ ಕಾರು ವಿನ್ಯಾಸಕ ದಿಲೀಪ್ ಬಂಧನ

|

ಮುಂಬೈ, ಡಿ. 29: ಖ್ಯಾತ ಕಾರು ವಿನ್ಯಾಸಕ ದಿಲೀಪ್ ಛಾಬ್ರಿಯಾರನ್ನು ಬಂಧಿಸಲಾಗಿದೆ ಎಂದು ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಹೇಳಿದ್ದಾರೆ. ವಂಚನೆ ಹಾಗೂ ಫೋರ್ಜರಿ ಪ್ರಕರಣದಲ್ಲಿ ದಿಲೀಪ್ ಬಂಧಿಸಲಾಗಿದೆ ಎಂದು ಮುಂಬೈನ ಕ್ರೈಂ ಗುಪ್ತಚರ ಘಟಕ(ಸಿಐಯು) ತಿಳಿಸಿದೆ. ಈ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಜಂಟಿ ಆಯುಕ್ತ(ಕ್ರೈಂ) ಮಿಲಿಂದ್ ಭಾರಂಬೆ ಹೇಳಿದ್ದಾರೆ.

ಕ್ರಿಮಿನಲ್ ಸಂಚು, ವಂಚನೆ ಹಾಗೂ ಫೋರ್ಜರಿ ಆರೋಪದಡಿಯಲ್ಲಿ ದಿಲೀಪ್ ಅವರ ಡಿಸಿ ಡಿಸೈನ್ಸ್ ಸಂಸ್ಥೆಗೆ ಬೀಗ ಜಡಿಯಲಾಗಿದ್ದು, ಸುಮಾರು 75 ಲಕ್ಷ ಮೌಲ್ಯದ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ನೋಂದಣಿ ಅಕ್ರಮ ಜಾಲದ ಹಿಂದೆ ಬಿದ್ದಿದ್ದ ಪೊಲೀಸರಿಗೆ ಸ್ಫೋರ್ಟ್ ಕಾರೊಂದರ ಮೇಲೆ ಅನುಮಾನ ಬಂದಿತ್ತು. ಕಾರಿನ ಮೂಲ ಹುಡುಕಿ ಹೊರಟಾಗ ಇದು ಇಂದರ್ ಮಲ್ ರಮಣಿ ಎಂಬ ತಮಿಳುನಾಡಿನ ವ್ಯಕ್ತಿಯ ಹೆಸರಿಗೆ ನೋಂದಣಿಯಾಗಿದ್ದು, ಡಿಸಿ ಡಿಸೈನ್ಸ್ ನಿಂದ ನೋಂದಣಿಯಲ್ಲಿ ಅಕ್ರಮ, ದಾಖಲೆಗಳನ್ನು ನಕಲಿ ಮಾಡಿರುವುದು ಕಂಡು ಬಂದಿದೆ. ಒಂದೇ ಸಂಖ್ಯೆ ಎರಡು ಕಾರುಗಳಿಗೆ ಬಳಕೆ ಹೀಗೆ ಅನೇಕ ವಂಚನೆ ಬೆಳಕಿಗೆ ಬಂದಿದೆ.

ದಿಲೀಪ್ ಅವರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೋರಲಾಗುವುದು ಎಂದು ತನಿಖಾಧಿಕಾರಿ ಎಸಿಪಿ ಸಚಿನ್ ವಾಜ್ ಹೇಳಿದ್ದಾರೆ.

English summary
The Criminal Intelligence Unit (CIU) of Mumbai Crime Branch on Monday arrested renowned car designer Dilip Chhabria in a cheating and forgery case, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X