"ನೆಹರೂ-ಗಾಂಧಿ ಅಲ್ಲದವರಿಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಕ್ಕುತ್ತಾ?"
ಮುಂಬೈ, ಮಾರ್ಚ್ 10: "ನೆಹರೂ-ಗಾಂಧಿ ಕುಟುಂಬದವರಲ್ಲದ ಬೇರೆಯವರಿಗೆ ಕಾಂಗ್ರೆಸ್ ಅಧ್ಯಕ್ಷರಾಗಲು ಅವಕಾಶವಿದೆಯೇ..?" ಹೀಗೊಂದು ಪ್ರಶ್ನೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎದುರಿಸಬೇಕಾಯ್ತು!
ಮುಂಬೈಯಲ್ಲಿ ನಡೆಯುತ್ತಿರುವ ಇಂಡಿಯಾ ಟುಡೇ ಕಾಂಕ್ಲೇವ್ 2018 ರಲ್ಲಿ ಭಾಗವಹಿಸಿದ್ದ ಅವರು ತಮ್ಮ ರಾಜಕೀಯ ಬದುಕಿನ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಅವರ ಬಳಿ, 'ನೆಹರೂ-ಗಾಂಧಿ ಅಲ್ಲದಿರುವವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಕ್ಕುತ್ತಾ?' ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸೋನಿಯಾ, 'ಯಾಕೆ ಸಿಗಬಾರದು? ಭವಿಷ್ಯದಲ್ಲಿ ಅದೂ ಆಗುತ್ತದೆ' ಎಂದರು! ಮುಂದುವರಿದು, ಈ ಪ್ರಶ್ನೆಯನ್ನು ಕಾಂಗ್ರೆಸ್ ನಾಯಕರ ಬಳಿಯೇ ಕೇಳಿ. ಕಾಂಗ್ರೆಸ್ ನಲ್ಲಿ ಹಲವು ಬಲಾಢ್ಯ ನಾಯಕರಿದ್ದಾರೆ ಎಂದು ಅವರು ಹೆಳಿದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದೇ ಸಂದರ್ಭದಲ್ಲಿ, 'ನೀವ್ಯಾಕೆ ಪ್ರಧಾನಿಯಾಗಲಿಲ್ಲ?' ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, 'ಆ ಸ್ಥಾನಕ್ಕೆ ನನಗಿಂತ ಡಾ.ಮನಮೋಹನ್ ಸಿಂಗ್ ಹೆಚ್ಚು ಸಮರ್ಥರು ಎನ್ನಿಸಿತು. ಅದಕ್ಕೇ ನಾನು ಪ್ರಧಾನಿಯಾಗಲಿಲ್ಲ' ಎಂದರು.












Click it and Unblock the Notifications