• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಏಕನಾಥ್ ಶಿಂಧೆ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ

|
Google Oneindia Kannada News

ಮುಂಬೈ, ಆಗಸ್ಟ್ 09: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಸಚಿವ ಸಂಪುಟವನ್ನು ಅನ್ನು ಮಂಗಳವಾರ ರಾಜಭವನದಲ್ಲಿ ವಿಸ್ತರಿಸಲಿದ್ದಾರೆ. ಆಗಸ್ಟ್ 10 ರಿಂದ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ಪ್ರಾರಂಭವಾಗಲಿದೆ.

ವರದಿಗಳ ಪ್ರಕಾರ, ರಾಜ್ಯದ ಸಂಪುಟದಲ್ಲಿ ಸುಮಾರು 18 ಸಚಿವರು ಸೇರ್ಪಡೆಗೊಳ್ಳುವ ನಿರೀಕ್ಷೆಯಿದ್ದು, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಿರ್ಣಾಯಕ ಗೃಹ ಖಾತೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಮಹಾರಾಷ್ಟ್ರ; ಮಂಗಳವಾರವೇ ಏಕನಾಥ್ ಶಿಂಧೆ ಸಂಪುಟ ವಿಸ್ತರಣೆ?ಮಹಾರಾಷ್ಟ್ರ; ಮಂಗಳವಾರವೇ ಏಕನಾಥ್ ಶಿಂಧೆ ಸಂಪುಟ ವಿಸ್ತರಣೆ?

ಶಿವಸೇನೆಯಲ್ಲಿನ ಬಂಡಾಯದಿಂದಾಗಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಹೂಡಿದ್ದ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಜೂನ್ 30 ರಂದು ಪ್ರಮಾಣವಚನ ಸ್ವೀಕರಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುನ್ನ ತಮ್ಮ ಪಕ್ಷದ ನಾಯಕರೊಂದಿಗೆ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಸಭೆ ನಡೆಸುತ್ತಿದ್ದಾರೆ.ಈ ಸಭೆಗೂ ಮುನ್ನ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಿವಾಸದಲ್ಲಿ ಸಭೆ ನಡೆದಿತ್ತು.

ಏಕನಾಥ್ ಶಿಂಧೆ ಸಂಪುಟದಲ್ಲಿ ಬಿಜೆಪಿಯಿಂದ ರಾಧಾಕೃಷ್ಣ ವಿಖೆ ಪಾಟೀಲ್, ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಸುಧೀರ್ ಮುಂಗಂತಿವಾರ್ ಮತ್ತು ಶಿಂಧೆ ಗುಂಪಿನಿಂದ ಉದಯ್ ಸಮಂತ್, ದಾದಾ ಭೂಸೆ, ಸಂದೀಪನ್ ಬುಮ್ರೆ, ಸಂಜಯ್ ಶಿರ್ಸತ್ ಮತ್ತು ಗುಲಾಬ್ರಾವ್ ಪಾಟೀಲ್ ಸೇರುವ ಸಾಧ್ಯತೆಯಿದೆ.

Cabinet Expansion: Maharashtra chief minister Eknath Shinde holding meeting with his party leaders

ಉದಯ್ ಸಾಮಂತ್, ಸಂದೀಪನ್ ಬುಮ್ರೆ, ಗುಲಾಬ್ರಾವ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಸೇರಿದಂತೆ ಮಾಜಿ ಸಚಿವರೂ ಏಕನಾಥ್ ಶಿಂಧೆ ನೇತೃತ್ವದ ಹೊಸ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.

ಬಂಡಾಯ ಸಂದರ್ಭದಲ್ಲಿ ಶಿಂಧೆ ಅವರನ್ನು ಬೆಂಬಲಿಸಿದ್ದ ಮಾಜಿ ಸಚಿವ ಪ್ರಹಾರ್ ಜನಶಕ್ತಿ ಪಕ್ಷದ ಮತ್ತೊಬ್ಬ ಮಾಜಿ ಸಚಿವ ಓಂಪ್ರಕಾಶ್ ಕಾಡು ಕೂಡ ಹೊಸ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

Recommended Video

   Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
   English summary
   Maharashtra Cabinet Expansion: Maharashtra chief minister Eknath Shinde holding meeting with his party leaders. Over Dozen Ministers To Take Oath. know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X