ಮುಂಬೈ; ಕಟ್ಟಡ ಕುಸಿತ ಮಕ್ಕಳು ಸೇರಿ 11 ಜನರು ಸಾವು
ಮುಂಬೈ, ಜೂನ್ 10; ಮುಂಬೈ ನಗರದ ಪಶ್ಚಿಮ ಭಾಗದ ಮಲಾಡ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ. ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ನಾಲ್ಕು ಅಂತಸ್ತಿನ ಕಟ್ಟಡ ಬುಧವಾರ ತಡರಾತ್ರಿ ಕುಸಿದು ಮತ್ತೊಂದು ಕಟ್ಟಡದ ಮೇಲೆ ಬಿದ್ದಿದೆ. ಇದುವರೆಗೂ 18 ಜನರನ್ನು ರಕ್ಷಣೆ ಮಾಡಲಾಗಿದ್ದು, 6 ಮಕ್ಕಳು ಸೇರಿದಂತೆ 11 ಜನರು ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಗಳಡಿ ಸಿಲುಕಿದ ಜನರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

"ಇದೊಂದು ವಿಷಾದಕರ ಘಟನೆ. 18 ಜನರನ್ನು ಇದುವರೆಗೂ ರಕ್ಷಣೆ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ" ಎಂದು ಪೊಲೀಸ್ ಅಧಿಕಾರಿ ದಿಲೀಪ್ ಸಾವಂತ್ ಹೇಳಿದ್ದಾರೆ.
ಪೊಲೀಸರು, ಅಗ್ನಿ ಶಾಮಕದಳದ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಜೆಸಿಬಿ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಅವಶೇಷಗಳಡಿ ಇನ್ನೂ ಜನರು ಸಿಲುಕಿದ್ದಾರೆಯೇ ಎಂದು ಹುಡುಕಾಟ ನಡೆಸಲಾಗುತ್ತಿದೆ.












Click it and Unblock the Notifications