ಮಹಾರಾಷ್ಟ್ರ ರಾಜಭವನದ ಕೆಳಗೆ ಕಂಡ ಬ್ರಿಟಿಷ್ ಬಂಕರ್

Written By:
Subscribe to Oneindia Kannada

ಮುಂಬೈ, ಆಗಸ್ಟ್, 17: ಮಹಾರಾಷ್ಟ್ರ ರಾಜಭವನದ ಕೆಳಭಾಗದಲ್ಲಿ ಬ್ರಿಟಿಷರ ಕಾಲದ ಬಂಕರ್‌ ಪತ್ತೆಯಾಗಿದೆ. ಮುಂಬೈನ ಮಲಬಾರ್‌ ಹಿಲ್‌ನಲ್ಲಿ ಇರುವ ರಾಜಭವನದ ಕೆಳಗಿದ್ದ ಈ ಬಂಕರ್‌ನ್ನು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್‌ ಮತ್ತು ರಾಜಭವನದ ಅಧಿಕಾರಿಗಳೇ ಪತ್ತೆ ಮಾಡಿರುವುದು ವಿಶೇಷ.

ಈಗ ಎನ್ನಲಾಗಿದೆ. ಈ ರಾಜಭವನವು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದು, ಬ್ರಿಟಿಷ್‌ ಗವರ್ನರ್‌ಗಳು ಬೇಸಿಗೆ ಕಾಲದಲ್ಲಿ ಇಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಇದು 150 ಮೀಟರ್‌ ವಿಸ್ತಾರವಾಗಿದೆ. ಈ ಬಂಕರ್‌ನ ಪಶ್ಚಿಮ ಭಾಗದಲ್ಲಿ 20 ಅಡಿಯಷ್ಟು ಎತ್ತರದ ಗೇಟ್‌ ಇದ್ದು, ಜೊತೆಗೆ ಇಳಿಜಾರಿನ ದಾರಿ ಇದೆ.[6 ಜನರನ್ನು ಕೊಂದ ಮಹಾರಾಷ್ಟ್ರದ ವೈದ್ಯ]

mumbai

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಂಕರ್‌ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಚಿತ್ರಗಳನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಆಗಸ್ಟ್‌ 12ರಂದು ರಾಜಭವನದ ಕೆಲಸಗಾರರು ಬಂಕರ್‌ನ ಪಶ್ಚಿಮ ಭಾಗದಲ್ಲಿರುವ ಹಾಗೂ ಪ್ರವೇಶ ನೀಡುವ ತಾತ್ಕಾಲಿಕ ಗೋಡೆಯನ್ನು ಒಡೆದಿದ್ದರು. ಆದರೆ ಸುರಂಗವಿರಬಹುದು ಎಂದು ಗ್ರಹಿಸಿದ್ದರು.

mumbai


ಶಾಕ್‌ ಕಾದಿತ್ತು ಮುಂದೆ ಸಾಗುತ್ತಿದ್ದಂತೆ ಒಟ್ಟು 13 ರೂಮ್‌ಗಳು ಇಲ್ಲಿದ್ದವು. ದೊಡ್ಡ ಓಣಿಯ ಜೊತೆಗೆ ಸಣ್ಣ ಗಾತ್ರದಿಂದ ಹಿಡಿದು ದೊಡ್ಡ ಗಾತ್ರದವರೆಗಿನ ಕೋಣೆಗಳು ಕಂಡು ಬಂದವು ಎನ್ನಲಾಗಿದೆ.[ಬರಗಾಲ ಪ್ರದೇಶದಲ್ಲಿ ಸೆಲ್ಫಿ, ತೊಂದ್ರೆ ಇಲ್ಲ ಎಂದ ಪಂಕಜ!]

ಈ ಬಂಕರ್‌ 5000 ಚದರ ಅಡಿ ವಿಸ್ತಾರವಾಗಿದ್ದು, ಇದರೊಳಗಿನ ರೂಮ್‌ಗಳಿಗೆ ಪ್ರತ್ಯೇಕ ಹೆಸರುಗಳನ್ನು ಕೂಡ ನೀಡಲಾಗಿದೆ. ಅಲ್ಲದೇ ಉತ್ತಮ ಚರಂಡಿ ವ್ಯವಸ್ಥೆಯನ್ನು ಹೊಂದಿದ್ದು ಇಂದಿಗೂ ಮಾದರಿಯಾಗಿ ನಿಂತುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A forgotten 150-metre long, underground British-era bunker has been unearthed inside the sprawling Raj Bhavan complex at Malabar Hill in south Mumbai, an official said on Tuesday. Governor C.V. Rao and his wife Vinodha and senior officials went around the bunker on Tuesday.
Please Wait while comments are loading...