Monsoon Rain 2026: ಏಪ್ರಿಲ್ ಸೇರಿ ಜೂನ್-ಸೆಪ್ಟಂಬರ್ ಅವಧಿಯಲ್ಲಿ ಮುಂಗಾರು ಮಳೆ ಕೊರತೆ: ಬರಗಾಲದ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಎರಡು ವರ್ಷಗಳಲ್ಲಿ ನಿರೀಕ್ಷೆಯಂತೆ ಉತ್ತಮ ಮುಂಗಾರು ಮಳೆ ದಾಖಲಾದ ಬೆನ್ನಲ್ಲೇ ಈ ವರ್ಷ 2026ರ ಮುಂಗಾರು ಅವಧಿಯಲ್ಲಿ (ಜೂನ್-ಸೆಪ್ಟಂಬರ್) ಮಳೆ ಕೊರತೆ ಆಗಲಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ದೇಶದಲ್ಲಿ ಇದೇ ಏಪ್ರಿಲ್ ತಿಂಗಳಲ್ಲೇ ಶೇ.08ರಷ್ಟು ಮಳೆ ಕೊರತೆ ಉಂಟಾಗಲಿದೆ. ಇದು ಭವಿಷ್ಯದಲ್ಲಿ ಮಳೆಯ ಅಭಾವ ಎದುರಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಫೆಸಿಪಿಕ್ ಮಹಾಸಾಗರಲ್ಲಿ ಉಂಟಾಗುವ ಅನುಕೂಲ ಮತ್ತು ಅನನುಕೂಲ ವಾತಾವರಣಗಳು ಭಾರತದ ಹವಾಮಾನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯಾದ ಸ್ಕೈಮೆಟ್ ಹೇಳಿದಂತೆ ಜೂನ್‌ನಿಂದ ಸೆಪ್ಟಂಬರ್‍‌ ಸಾಮಾನ್ಯಕ್ಕಿಂತ ಮಳೆ ಕಡಿಮೆ ಆಗಲಿದೆ. ಭಾರತ ಮುಮಗಾರು ಮಲೆ ಕೊರತೆ ಎದುರಿಸಲಿದೆ. 2026ರಲ್ಲಿ ಫೆಸಿಪಿಕ್ ಮಹಾಸಾಗರದಲ್ಲಿ ಸಮುದ್ರ ಮೇಲ್ಮೈ ಅಧಿಕ ತಾಪಮಾನದಿಂದ ಕೂಡಿರುತ್ತದೆ. ಇದಕ್ಕೆ 'ಎಲ್‌ನಿನೋ' ಎಂದು ಹೇಳುತ್ತಾರೆ. ಇದು ಮಳೆ ಸುರಿಸುವ ಮೋಡಗಳ ಚಲನೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಕಾರಣಕ್ಕೆ ನಿರೀಕ್ಷಿತ ಮಳೆ ಆಗದೇ ಈ ಬಾರಿ ಕೊರತೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

Monsoon Rain 2026

ದೇಶದ ಜೀವನಾಡಿ ಕೃಷಿ ಮೇಲೆ ಮಳೆ ಕೊರತೆ ಪರಿಣಾಮ

ಕೇವಲ ಐಎಂಡಿ, ಸ್ಕೈಮೇಟ್ ಮಾತ್ರವಲ್ಲದೇ ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್ (ECMWF) ಸಹ ಈ ವರ್ಷ ಎಲ್ಲನಿನೋ ವರ್ಷವಾಗಿರಲಿದೆ ಎಂದು ಎಚ್ಚರಿಕೆ ನೀಡಿದೆ. ಮಳೆ ಕೊರತೆಗೆ ಬರಗಾಲ ಸೃಷ್ಟಿಯಾಗಿ ಕೃಷಿ, ಜನ, ಜಾನುವಾರು ಬಳಕೆಗೆ, ಕುಡಿಯುಲು ಅಗತ್ಯ ಒಟ್ಟಾರೆ ನೀರು ಬಳಕೆಗೆ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದೆ. ಭಾರತ ಮಳೆ ಕೊರತೆ ಎದುರಿಸಲು ಸಜ್ಜಾಗಬೇಕಿದೆ. ಸದ್ಯ ಪೂರ್ವ ಮುಂಗಾರು ಸಕ್ರಿಯವಾಗಿದ್ದು, ಅಲ್ಲಲ್ಲಿ ಸುರಿಯುತ್ತಿದ್ದು, ಈ ಮಳೆ ಸಹ ಏಪ್ರಿಲ್‌ನಲ್ಲಿ ನಿರೀಕ್ಷೆಯಷ್ಟು ಬಾರದು ಎನ್ನಲಾಗಿದೆ.

ಕೊಲ್ಲಿಯುದ್ಧದಿಂದ ಭಾರತಕ್ಕೆ ಮತ್ತಷ್ಟು ತೊಂದರೆ

ಇನ್ನೂ ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವಿದ್ದ ತಾತ್ಕಾಲಿಕ ಕದನ ವಿರಾಮ ನಾಳೆ ಬುಧವಾರಕ್ಕೆ (ಏಪ್ರಿಲ್ 22)ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಯುದ್ಧ ಮಾತ್ರ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇರಾನ್ ಯುಎಸ್ ಷರತ್ತುಗಳಿಗೆ ಒಪ್ಪುತ್ತಿಲ್ಲ. ಒಂದೂವರೆ ತಿಂಗಳಿನಿಂದ ನಡೆದ ಯುದ್ಧದಿಂದ ಕಚ್ಚಾ ಇಂಧನ ತೈಲ ದರ ಹೆಚ್ಚಾಗಿದೆ. ರಸಾಯನಿಕ, ರಸಗೊಬ್ಬರ ಉತ್ಪಾದನೆ, ಪೂರೈಕೆ ಸರಪಳಿ ಮೇಲೆ ಅಡ್ಡಿ ಉಂಟು ಮಾಡುವ ಆತಂಕವೂ ಇದೆ.

ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ರಸಗೊಬ್ಬರ ಅಭಾವ ಸೃಷ್ಟಿಯಾದರೆ ದೇಶದ ಬಹುಪಾಲು ಜನ ಅವಲಂಬಿಸಿರುವ ಕೃಷಿಗೆ ಹೊಡೆತ ಬೀಳುತ್ತದೆ. ದೇಶದ ಬೆನ್ನೆಲುಬು ರೈತ ವರ್ಗ ಆದಾಯವಿಲ್ಲದೇ ತೊಂದರೆ ಅನುಭವಿಸಿದರೆ, ಎಲ್ಲ ಕ್ಷೇತ್ರದಲ್ಲೂ ತೊಂದರೆ ಆಗಲಿದೆ. ಆಹಾರ ಉತ್ಪಾದನೆ ಕುಂಠಿತಗೊಳ್ಳಬಹುದು. ಗ್ರಾಮೀಣ ಭಾಗದ ಆದಾಯಕ್ಕೆ ತೊಂದರೆ ಆಗುವ ಜೊತೆಗೆ, ಕೃಷಿ ಉತ್ಪಾದಕರು ಹೆಚ್ಚು ತೊಂದರೆ ಅನುಭವಿಸಬಹುದು.

ಪರಿಹಾರ ಮಾರ್ಗೋಪಾಯಗಳೇನು?

ಮಳೆ ಕೊರತೆಯನ್ನು ನೀಗಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೊರತೆ ಇರುವ ರಸಗೊಬ್ಬರು ಸಮರ್ಪಕ ಪೂರೈಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಗತ್ಯ ದಾಸ್ತಾನು ಮಾಡಿಕೊಳ್ಳಬೇಕು. ಕಡಿಮೆ ನೀರು ಪಡೆದು ಬೆಳೆಯುವ, ಉತ್ತಮ ಇಳುವರಿ ನೀಡುವ ಕೃಷಿ, ತಳಿಗಳು, ಬೀಜಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಕೈಗಾರಿಕಾ ವಲಯ, ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+