ಟಿಆರ್ಪಿ ಹಗರಣ: ಅರ್ನಬ್ ಗೋಸ್ವಾಮಿ ಮಧ್ಯಂತರ ರಕ್ಷಣೆ ವಿಸ್ತರಣೆ
ಮುಂಬೈ, ಫೆಬ್ರವರಿ 12: ಟಿಆರ್ಪಿ ಹಗರಣದ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಎಆರ್ಜಿ ಓಟ್ಲಿಯರ್ ಮೀಡಿಯಾದ ಇತರೆ ಉದ್ಯೋಗಿಗಳಿಗೆ ಬಂಧನದಿಂದ ನೀಡಿರುವ ಮಧ್ಯಂತರ ರಕ್ಷಣೆಯನ್ನು ಮಾರ್ಚ್ 5ರವರೆಗೂ ವಿಸ್ತರಿಸಿದೆ.
ಟಿಆರ್ಪಿ ಹಗರಣ ಪ್ರಕರಣದಲ್ಲಿ ಮುಂಬೈ ಪೊಲೀಸರ ತನಿಖೆಯನ್ನು ಪ್ರಶ್ನಿಸಿ ಎಆರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಿದ ಸಂದರ್ಭದಲ್ಲಿ ಅರ್ನಬ್ ಹಾಗೂ ಇತರೆ ಉದ್ಯೋಗಿಗಳಿಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದ್ದಾರೆ.
ಪೊಲೀಸರ ಆರೋಪಪಟ್ಟಿಗೆ ಪ್ರತಿಯಾಗಿ ಕಳೆದ ವಾರ ಸಲ್ಲಿಸಿದ್ದ ತನ್ನ ಪ್ರತಿವಾದಿ ಅಫಿಡವಿಟ್ನಲ್ಲಿ ಎಆರ್ಜಿ ಮೀಡಿಯಾ, ತನ್ನ ಅರ್ಜಿಯ ಭಾಗವಾಗಿರದ ಕೆಲವು ಹೊಸ ದಾಖಲೆಗಳನ್ನು ಒದಗಿಸಿತ್ತು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಎಆರ್ಜಿ ಸಲ್ಲಿಸಿರುವ ಹೊಸ ದಾಖಲೆಗಳನ್ನು ಪರಿಶೀಲಿಸಲು ತಮಗೆ ಸಮಯಾವಕಾಶದ ಅಗತ್ಯವಿದೆ. ತಮ್ಮ ದಿನದ ವಾದದಲ್ಲಿ ಎಆರ್ಜಿ ಪರ ವಕೀಲರಾದ ಹರೀಶ್ ಸಾಳ್ವೆ ಅವರು ಈ ದಾಖಲೆಗಳನ್ನು ಅವಲಂಬಿಸಬಾರದು ಎಂದು ಸಿಬಲ್ ಹೇಳಿದ್ದರು. ಆದರೆ ಈ ದಾಖಲೆಗಳನ್ನೇ ತಾವು ಆಧಾರವಾಗಿಟ್ಟುಕೊಳ್ಳುವುದಾಗಿ ಸಾಳ್ವೆ ವಾದಿಸಿದ್ದರು.
ಸಿಬಲ್ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಅರ್ನಬ್ ಮತ್ತು ಇತರರಿಗೆ ನೀಡಿದ ಮಧ್ಯಂತರ ನೆಮ್ಮದಿಯನ್ನು ಮುಂದಿನ ದಿನಾಂಕದವರೆಗೂ ವಿಸ್ತರಿಸಿ ಆದೇಶಿಸಿತು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications