ಆದರ್ಶ್ ಹೌಸಿಂಗ್ ಸೊಸೈಟಿ ಕಟ್ಟಡ ನೆಲಸಮಕ್ಕೆ ಆದೇಶ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 29: ಆದರ್ಶ್ ಹೌಸಿಂಗ್ ಸೊಸೈಟಿ ಫ್ಲಾಟ್ ಹಗರಣ ಮತ್ತೆ ಸುದ್ದಿಯಲ್ಲಿದೆ. ಆದರ್ಶ್ ಹೌಸಿಂಗ್ ಸೊಸೈಟಿ ಕಟ್ಟಡವನ್ನು ನೆಲಸಮ ಮಾಡುವಂತೆ ಬಾಂಬೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಆದರ್ಶ್ ಹೌಸಿಂಗ್ ಸೊಸೈಟಿ ಫ್ಲ್ಯಾಟ್ ಹಗರಣದಲ್ಲಿ ಸಿಲುಕಿ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಅಶೋಕ್ ಚವಾಣ್ ರಾಜೀನಾಮೆ ನೀಡಿದ್ದರು. ಕೊಲಬಾದಲ್ಲಿರುವ 31 ಮಹಡಿಯ ಕಟ್ಟಡ ನೆಲಸಮ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು 12 ವಾರಗಳ ಕಾಲಾವಕಾಶ ನೀಡಲಾಗಿದೆ.

ಅಶೋಕ್ ಅವರು ತಮ್ಮ ಅತ್ತೆ ಹಾಗೂ ಇಬ್ಬರು ಸಂಬಂಧಿಕರಿಗೆ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕೊಡಿಸಿರುವ ಹಗರಣ ಬೆಳಕಿಗೆ ಬಂದ ನಂತರ, ಮಹಾ ಸಿಎಂ ತಲೆದಂಡಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು.

ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ 31 ಮಹಡಿಯ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕಾರ್ಗಿಲ್ ಸಮರದ ಹೀರೋಗಳು ಹಾಗೂ ಮೃತ ಯೋಧರ ಪತ್ನಿಯರಿಗೆ ನೀಡುವ ಸಲುವಾಗಿ ನಿರ್ಮಿಸಲಾಗಿತ್ತು, ಆದರೆ, ಇದನ್ನು ರಾಜಕಾರಣಿಗಳು ಹಾಗೂ ಅವರ ಸಂಬಂಧಿಗಳು, ನಿವೃತ್ತ ಸೇನಾಧಿಕಾರಿಗಳು ಬಳಸುತ್ತಿದ್ದರು. ಇದರಿಂದ ವಿವಾದ ಹುಟ್ಟಿಕೊಂಡಿತ್ತು.

ಸೇನೆಯ ಹಿರಿಯ ಅಧಿಕಾರಿಗಳ ಮೇಲೂ ಆರೋಪ

ಸೇನೆಯ ಹಿರಿಯ ಅಧಿಕಾರಿಗಳ ಮೇಲೂ ಆರೋಪ

ಭೂ ಸೇನೆಯ ಹಿರಿಯ ಅಧಿಕಾರಿಗಳಾದ ಎನ್ ಸಿ ವಿಜ್, ದೀಪಕ್ ಕಪೂರ್, ಮಾಧವೇಂದ್ರ ಸಿಂಗ್, ರಾಜಕಾರಣಿ ಶರದ್ ಪವಾರ್ ಸೇರಿದಂತೆ ಸುಮಾರು 103ಕ್ಕೂ ಅಧಿಕ ಗಣ್ಯರ ಹೆಸರು ಈ ಹಗರಣದಲ್ಲಿ ಸಿಲುಕಿಕೊಂಡಿತ್ತು. ಇಲ್ಲಿ ಫ್ಲ್ಯಾಟ್ ಹೊಂದಿದ್ದ ಸೇನೆಯ ನಿವೃತ್ತ ಅಧಿಕಾರಿಗಳು, ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ ಮರಳಿಸಿದ್ದರು. ಈ ನಡುವೆ ಫ್ಲ್ಯಾಟ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು

ಕಾಂಗ್ರೆಸ್ ಶಾಸಕರು, ಅಧಿಕಾರಿಗಳು ಕೂಡಾ ಶಾಮೀಲು

ಕಾಂಗ್ರೆಸ್ ಶಾಸಕರು, ಅಧಿಕಾರಿಗಳು ಕೂಡಾ ಶಾಮೀಲು

ಮಹಾರಾಷ್ಟ್ರದ ಆರ್ಥಿಕ ಕಾರ್ಯದರ್ಶಿ ಪ್ರದೀಪ್ ವ್ಯಾಸ್, ಪಿವಿ ದೇಶ್ ಮುಖ್, ನಿವೃತ್ತ ಬ್ರಿಗೇಡಿಯರ್ ಎಂ ಎಂ ವಾಂಚೂ, ಮಾಜಿ ಡಿಫೇನ್ಸ್ ಎಸ್ಟೇಸ್ಟ್ ಅಧಿಕಾರಿ ಆರ್ ಸಿ ಥಾಕೂರ್, ನಿವೃತ್ತ ಮೇಜರ್ ಜನರಲ್ ಎಆರ್ ಕುಮಾರ್, ನಿವೃತ್ತ ಮೇಜರ್ ಜನರಲ್ ಟಿಕೆ ಕೌಲ್, ಜೈರಾಜ್ ಪಾಠಕ್, ರಾಮಚಂದ್ ತಿವಾರಿ ಹಾಗೂ ಮಾಜಿ ಕಾಂಗ್ರೆಸ್ ಶಾಸಕ ಕೆಎಲ್ ಗಿಡ್ವಾಣಿ ಅವರು ಜಾಮೀನು ಪಡೆದಿದ್ದರು.

ಮಹಾರಾಷ್ಟ್ರದ ಮುಖಂಡ ಅಶೋಕ್ ರಾಜೀನಾಮೆ

ಮಹಾರಾಷ್ಟ್ರದ ಮುಖಂಡ ಅಶೋಕ್ ರಾಜೀನಾಮೆ

ಕಾಂಗ್ರೆಸ್ ಮುಖಂಡ ಮಹಾರಾಷ್ಟ್ರ ಸಿಎಂ ಅಶೋಕ್ ಚವಾಣ್ ತಲೆದಂಡದ ನಂತರ ಸಿಬಿಐ ಈ ಪ್ರಕರಣದ ತನಿಖೆ ಆರಂಭಿಸಿ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ವಿಲಾಸ್ ರಾವ್ ದೇಶ್ ಮುಖ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸಿಬಿಐ ಸಲ್ಲಿಸಲಿರುವ ದೋಷಾರೋಪಣ ಪಟ್ಟಿಯಲ್ಲಿ ಇನ್ನು ಗಣ್ಯರ ಹೆಸರು ಸೇರ್ಪಡೆಗೊಂಡಿತ್ತು. ಕಾಂಗ್ರೆಸ್ ಪಕ್ಷಕ್ಕೆ ಈ ಹಗರಣ ತೀವ್ರ ಮುಖಭಂಗ ತಂದಿತ್ತು.

2010 ರಿಂದ 2016ರ ತನಕ ಪ್ರಕರಣ

2010 ರಿಂದ 2016ರ ತನಕ ಪ್ರಕರಣ

2011 ರಲ್ಲಿ ನೆಲಸಮಕ್ಕೆ ಆದೇಶ ಸಿಕ್ಕಿತ್ತು. ಆದರೆ, ಸಾಧ್ಯವಾಗಿರಲಿಲ್ಲ.ಕಾರ್ಗಿಲ್ ಹುತಾತ್ಮರ ಕುಟುಂಬಕ್ಕೆ ಸೇರಬೇಕಿದ್ದ 6 ಅಂತಸ್ತಿನ ಕಟ್ಟಡ ಆದರ್ಶ್ ಫ್ಲಾಟ್ 31 ಮಹಡಿ ಕಟ್ಟಡವಾಗಿ ಬೆಳೆಯಿತು. ಈಗ ಜಸ್ಟೀಸ್ ಆರ್ ವಿ ಮೋರೆ, ಜಸ್ಟೀಸ್ ಆರ್ ಜಿ ಕೆಟ್ಕರ್ ಅವರಿದ್ದ ವಿಭಾಗೀಯ ಪೀಠ ಕಟ್ಟಡ ನೆಲಸಮಕ್ಕೆ ಆದೇಶಿಸಿದ್ದಲ್ಲದೆ, ರಾಜಕಾರಣಿಗಳು, ಅಧಿಕಾರಗಳ ಮೇಲೆ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bombay high court ordered the demolition of Adarsh Housing Society, an illegal Mumbai apartment block that became a symbol of political corruption and led to ouster of Ashok Chavan from the Maharashtra chief minister’s post.
Please Wait while comments are loading...