ಪತ್ನಿಯಿಂದ ವಿಚ್ಛೇದನ ಪಡೆದ ಜನಪ್ರಿಯ ಗಾಯಕ
ಗಾಯಕ, ನಟ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಯಾ ತಮ್ಮ ಪತ್ನಿಯಿಂದ ಅಧಿಕೃತವಾಗಿ ದೂರವಾಗಿದ್ದಾರೆ.
ಮುಂಬೈ, ಜೂನ್ 07: ಹಿಂದಿ ಚಿತ್ರರಂಗದ ವಿಶಿಷ್ಟ ಗಾಯಕ, ನಟ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಯಾ ಅವರು
ತಮ್ಮ ಪತ್ನಿಯಿಂದ ಅಧಿಕೃತವಾಗಿ ದೂರವಾಗಿದ್ದಾರೆ.
ಬಾಂಬೆ ಹೈಕೋರ್ಟ್ ನಿಂದ ಜೂನ್ 06ರಂದು ಹಿಮೇಶ್ ಹಾಗೂ ಕೋಮಲ್ ದಂಪತಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ನಾವಿಬ್ಬರೂ ಡೈವೋರ್ಸ್ ಪಡೆದುಕೊಂಡಿದ್ದೇವೆ ಎಂದು ಹಿಮೇಶ್ ನಂತರ ಸುದ್ದಿಗಾರರಿಗೆ ತಿಳಿಸಿದರು.

ದಾಂಪತ್ಯ ಮುರಿದು ಬಿದ್ದು, ವಿಚ್ಛೇದನ ಪಡೆದ ಮೇಲೂ ಹಿಮೇಶ್ ಹಾಗೂ ಕೋಮಲ್ ಅವರು ಒಂದೇ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ವಾಸಿಸಲಿದ್ದಾರೆ ಎಂಬುದು ವಿಶೇಷ.
'ನಾವಿಬ್ಬರೂ ಬೇರೆ ಬೇರೆಯಾಗಲು ಯಾರೂ ಕಾರಣರಲ್ಲ, ನಮ್ಮಿಬ್ಬರ ಮಧ್ಯೆ ಹೊಂದಾಣಿಕೆಯಿಲ್ಲ, ಹಾಗಾಗಿ ವಿಚ್ಛೇದನ ಪಡೆದಿದ್ದೇವೆ. ಸುಮ್ಮನೆ ಈ ವಿಷಯವನ್ನು ಎಳೆಯಬೇಡಿ, ಮೂರನೆಯವರ ಹೆಸರನ್ನು ಸೇರಿಸಬೇಡಿ' ಎಂದು ಮಾಧ್ಯಮಗಳಲ್ಲಿ ಹಿಮೇಶ್ ಮನವಿ ಮಾಡಿಕೊಂಡಿದ್ದಾರೆ. ಹಿಮೇಶ್ ಹಾಗೂ ಕೋಮಲ್ ದಂಪತಿಗೆ ಒಬ್ಬ ಮಗನಿದ್ದಾನೆ.












Click it and Unblock the Notifications