ಮುಂಬೈ: ನಾಪತ್ತೆಯಾಗಿದ್ದ ಕಲಾವಿದೆ ಚರಂಡಿಯಲ್ಲಿ ಹೆಣವಾಗಿ ಪತ್ತೆ!
ಮುಂಬೈ, ಡಿ.13: ಇತ್ತೀಚೆಗೆ ನಾಪತ್ತೆಯಾಗಿದ್ದಾರೆ ಎನ್ನಲಾದ ಕಲಾವಿದೆ ಹೇಮಾ ಉಪಾಧ್ಯಾಯ್ ಹಾಗೂ ಅವರ ವಕೀಲ ಹರೀಶ್ ಭಂಬಾನಿ ಅವರ ಮೃತದೇಹಗಳು ಚರಂಡಿಯೊಂದರಲ್ಲಿ ಭಾನುವಾರ ಪತ್ತೆಯಾಗಿದೆ.
ಕಂಡಿವಲಿ ಪೊಲೀಸ್ ಠಾಣೆ ವ್ಯಾಪ್ತಿಯ ಚರಂಡಿಯೊಂದರಲ್ಲಿ ಕಾರ್ಡ್ ಬೋರ್ಡ್ ಬಾಕ್ಸ್ ನಲ್ಲಿ ಇಬ್ಬರ ದೇಹಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಎಸೆದಿರುವುದು ಕಂಡು ಬಂದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.[ಶಾಶ್ವತ ಸಂತಸ ಬೆಸೆಯುವ 3ಡಿ ಕಾಸ್ಟಿಂಗ್]
ಮೃತ ದೇಹಗಳನ್ನು ಹೇಮಾ ಉಪಾಧ್ಯಾಯ್, ಹರೀಶ್ ಭಂಬಾನಿ ಎಂದು ಗುರುತಿಸಲಾಗಿದ್ದು, ದೇಹಗಳನ್ನು ಅಟಾಪ್ಸಿಗೆ ಕಳಿಸಲಾಗಿದೆ. ಎರಡು ದೇಹಗಳಲ್ಲಿ ಒಳ ಉಡುಪು ಬಿಟ್ಟರೆ ಮತ್ತೇನು ಇರಲಿಲ್ಲ. ಕೈ ಕಾಲುಗಳು ಕಟ್ಟಲಾಗಿತ್ತು. ಎರಡು ದೇಹಗಳು ಇನ್ನೂ ಕೊಳತಿಲ್ಲದ ಕಾರಣ ಕೊಲೆ ನಡೆದು ಹೆಚ್ಚಿನ ದಿನಗಳು ಕಳೆದಿಲ್ಲ ಎನ್ನಬಹುದು ಎಂದು ಡಿಸಿಪಿ ಧನಂಜಯ್ ಕುಲಕರ್ಣಿ ಹೇಳಿದ್ದಾರೆ.
ಯಾರೀಕೆ ಹೇಮಾ: ಮುಂಬೈ ಮೂಲದ ಖ್ಯಾತ ಶಿಲ್ಪಿ, ಫೋಟೋಗ್ರಾಫರ್ ಹೇಮಾ ಹಿರಾನಿ ಉಪಾಧ್ಯಾಯ್(42) ಅವರು ತಮ್ಮ ಪತಿ ಕಲಾವಿದ ಚಿಂತನ್ ಉಪಾಧ್ಯಾಯ್ ರಿಂದ ವಿವಾಹ ವಿಚ್ಛೇದನ ಬಯಸಿದ್ದರು.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]
ಇದಕ್ಕಾಗಿ 65 ವರ್ಷ ವಯಸ್ಸಿನ ಹರೀಶ್ ಭಂಬಾನಿ ಅವರ ನೆರವು ಕೋರಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಪತಿ ವಿರುದ್ಧ ಕೇಸು ದಾಖಲಿಸಿದ್ದರು. 'ನನ್ನ ರೂಮಿನ ಗೋಡೆ ಮೇಲೆ ನನ್ನನ್ನು ಅಶ್ಲೀಲವಾಗಿ ಚಿತ್ರಿಸಿದ ನನ್ನ ಪತಿಯನ್ನು ಶಿಕ್ಷಿಸಿ' ಎಂದು ಹೇಮಾ ಅವರು ದೂರಿನಲ್ಲಿ ಕೇಳಿಕೊಂಡಿದ್ದರು. ಇದಾದ ಬಳಿಕ ಪ್ರಕರಣ ತಣ್ಣಗಾಗಿತ್ತು. ಪ್ರಕರಣದ ತನಿಖೆ ಜಾರಿಯಲ್ಲಿದ್ದು, ಹೇಮಾ ಅವರ ಪತಿ ಚಿಂತನ್, ಕೆಲಸದವ ಹೇಮಂತ್ ಸೇರಿದಂತೆ ಹಲವರ ವಿಚಾರಣೆ ನಡೆಸಲಾಗಿದೆ.[ಮೌಲ್ಡ್ ರಾಜಣ್ಣನ ಕಥೆ ಕೇಳಿ...]

ಮೊದಲಿಗೆ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಕಳೆದ ಶುಕ್ರವಾರ ರಾತ್ರಿ ಹೇಮಾ ಅವರು ಮನೆಗೆ ಹಿಂತಿರುಗಿರಲಿಲ್ಲ. ನಂತರ ಮನೆ ಕೆಲಸದವರಾದ ಹೇಮಂತ್ ಮಂಡಲ್ ಅವರು ಪೊಲೀಸರಿಗೆ ದೂರು ನೀಡಿದ್ದರು. ರಾತ್ರಿ ಅಡುಗೆ ಮಾಡುವುದು ಬೇಡ ನಾನು ಬರುವುದು ತಡವಾಗುತ್ತೆ ಎಂದಷ್ಟೇ ಹೇಳಿದ್ದರು ಎಂದು ಹೇಮಂತ್ ತಿಳಿಸಿದ್ದಾರೆ. ಭಂಬಾನಿ ಕುಟುಂಬ ಕೂಡಾ ನಾಪತ್ತೆ ದೂರು ದಾಖಲಿಸಿದ್ದರು.
|
ಕಾರ್ಡ್ ಬೋರ್ಡ್ ಬಾಕ್ಸಿನಲಿ ಶವಗಳು
ಮುಂಬೈನ ಚರಂಡಿಯೊಂದರಲ್ಲಿ ಪತ್ತೆಯಾದ ಕಾರ್ಡ್ ಬೋರ್ಡ್ ಬಾಕ್ಸಿನಲ್ಲಿದ್ದ ಶವಗಳು ಹೇಮಾ ಹಾಗೂ ಹರೀಶ್ ಅವರದ್ದು ಎಂದು ಗುರುತಿಸಲಾಗಿದೆ.
|
Dream a Wish, Wish a Dream
Dream a Wish, Wish a Dream ಎಂದು ಕಲಾವಿದೆ ಹೇಮಾ ನಿಧನಕ್ಕೆ ಕಂಬನಿ ಮಿಡಿದ ಆಪ್ತರು.
|
ಅಪ್ರತಿಮ ಕಲಾವಿದೆ ಹೇಮಾ ಉಪಾಧ್ಯಾಯ್
ಅಪ್ರತಿಮ ಕಲಾವಿದೆ ಹೇಮಾ ಉಪಾಧ್ಯಾಯ್ ಅವರ ಕಲಾಕೃತಿ ವಿಶ್ವಮನ್ನಣೆ ಪಡೆದುಕೊಂಡಿತ್ತು.












Click it and Unblock the Notifications