ಅಮಿತ್ ಶಾ ನೀಡಿದ ಆಫರ್ ತಿರಸ್ಕರಿಸಿದ ಶಿವಸೇನೆ?

Posted By:
Subscribe to Oneindia Kannada

ಮುಂಬೈ, ಜೂನ್ 19: ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಿತ್ರಪಕ್ಷ ಶಿವ ಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಉದ್ಧವ್ ಠಾಕ್ರೆ ಅವರ ಜೊತೆ ಸುಮಾರು 75 ನಿಮಿಷಗಳ ಕಾಲ ಅಮಿತ್ ಶಾ ಅವರು ಗೌಪ್ಯ ಮಾತುಕತೆ ನಡೆಸಿದ್ದಾರೆ. ರಾಷ್ಟ್ರಪತಿ ಆಯ್ಕೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರ್ವಾಧಿಕಾರ ನೀಡುವ ಬಗ್ಗೆ ಅಮಿತ್ ಅವರು ಮಾಡಿದ ಪ್ರಸ್ತಾವನೆಯನ್ನು ಠಾಕ್ರೆ ಅವರು ತಳ್ಳಿ ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ.

BJP president Amit Shah meets Uddhav Thackeray

ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುನ್ನ ಎನ್‌ಡಿಎ ಸರ್ಕಾರ ತನ್ನ ಎಲ್ಲ ಮಿತ್ರ ಪಕ್ಷಗಳ ಜೊತೆ ಚರ್ಚಿಸುತ್ತಿದೆ. ಅಂತೆಯೇ ಇಂದು ಠಾಕ್ರೆ ಅವರನ್ನು ಶಾ ಭೇಟಿಯಾಗಿದ್ದಾರೆ. ಇದರಲ್ಲಿ ಯಾವುದೇ ಗೌಪ್ಯ ಮಾತುಕತೆ ಇಲ್ಲ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.

ಆದರೆ, ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ನರೇಂದ್ರಮೋದಿ, ಅಮಿತ್ ಶಾ ಹಾಗೂ ಮೋಹನ್ ಭಾಗ್ವತ್ ಅವರಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಮಿತ್ರಪಕ್ಷ ಶಿವಸೇನೆ ತಗಾದೆ ತೆಗೆದಿತ್ತು. ಇದನ್ನು ಉಪಶಮನಗೊಳಿಸಲು ಅಮಿತ್ ಶಾ ಅವರು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಮೇ ತಿಂಗಳಿನಲ್ಲಿ ನಡೆದ ಎನ್ ಡಿಎ ಸಭೆಯಲ್ಲೂ ಮೋದಿ ಅವರಿಗೆ ಸರ್ವಾಧಿಕಾರ ನೀಡುವ ಬಗ್ಗೆ ಶಿವಸೇನಾ ಆಕ್ಷೇಪ ವ್ಯಕ್ತಪಡಿಸಿತ್ತು. 2019ರಲ್ಲಿ ಮೋದಿ ನಾಯಕತ್ವದಲ್ಲಿ ಎನ್ ಡಿ ಎ ಕಣಕ್ಕಿಳಿಯುವುದು ಸರಿಯಲ್ಲ ಎಂದು ಶಿವಸೇನಾ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
BJP president Amit Shah on Sunday met Shiv Sena chief Uddhav Thackeray at the latter's residence in suburban Bandra. Shah, along with Maharashtra Chief Minister Devendra Fadnavis, visited Thackeray's residence 'Matoshree' and held a close-door meeting.
Please Wait while comments are loading...