ಬೆಳಗಾವಿ ಗಡಿ ವಿವಾದ: ಕರ್ನಾಟಕದ ಜತೆ ಚರ್ಚಿಸಲು ರಾಜ್ಯಪಾಲರಿಗೆ ಶಿವಸೇನೆ ಒತ್ತಾಯ
ಮುಂಬೈ, ನವೆಂಬರ್ 02: ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಜತೆ ಚರ್ಚಿಸಲು ರಾಜ್ಯಪಾಲರಿಗೆ ಶಿವಸೇನೆ ಆಗ್ರಹಿಸಿದೆ.
ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎಂಬುದರ ಕುರಿತು ಕರ್ನಾಟಕದ ರಾಜ್ಯಪಾಲರ ಜತೆಗೆ ಚರ್ಚಿಸಬೇಕು ಎಂದು ಹೇಳಿದೆ.
ಮಹಾರಾಷ್ಟ್ರ ರಾಜ್ಯಪಾಲರು ಕರ್ನಾಟಕದ ರಾಜ್ಯಪಾಲರ ಬಳಿ ಚರ್ಚಿಸಬೇಕು. ಕನಿಷ್ಠ ಬೆಳಗಾವಿಯ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಲು ಸಮಯಾವಾಶ ನಿಗದಿಪಡಿಸಲಾದರೂ ನೆರವು ನೀಡಬೇಕು ಎಂದು ಹೇಳಿದೆ.

ಬೆಳಗಾವಿ, ಇತರೆ ಗಡಿ ಪ್ರದೇಶ ಕುರಿತಂತೆ ಕರ್ನಾಟಕ-ಮಹಾರಾಷ್ಟ್ರ ನಡುವಿನ ವಿವಾದ ಈಗ ಸುಪ್ರೀಂಕೋರ್ಟ್‌ನಲ್ಲಿದೆ. ಕರ್ನಾಟಕದ ಲಕ್ಷಾಂತರ ಜನರು ಮಹಾರಾಷ್ಟ್ರದಲ್ಲಿ ಉದ್ಯಮ, ವ್ಯಾಪಾರ ನಡೆಸುತ್ತಾ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಲಕ್ಷ್ಮಣ ಸವದಿಯಂತಹ ಸಚಿವರು ಮರೆಯಬಾರದು ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
ಮರಾಠಿ ಭಾಷಿಕರ ಮೇಲೆ ಈ ಭಾಗದಲ್ಲಿ ಕಳೆದ 60 ವರ್ಷಗಳಿಂದ ದೌರ್ಜನ್ಯ ನಡೆಯುತ್ತಿದೆ. ಕರ್ನಾಟಕ ಇದನ್ನು ನಿಭಾಯಿಸುತ್ತಿರುವ ಕ್ರಮ ಈ ಜನರಲ್ಲಿ ಆಕ್ರೋಶವನ್ನುಂಟುಮಾಡಿದೆ.
ಸೂರ್ಯ-ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ ಭಾಗವೆಂಬ ಲಕ್ಷ್ಮಣ ಸವದಿ ಅವರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications