5 ಬ್ಯಾಂಕುಗಳ ವಿಲೀನ: SBI- SBM ವಿಲೀನಕ್ಕೆ ಮಹೂರ್ತ

ಈ ಐದೂ ಅಧೀನ ಬ್ಯಾಂಕುಗಳನ್ನು ಮರ್ಜ್ ಮಾಡಿಕೊಂಡರೆ SBI ಆಸ್ತಿಯ ಮೊತ್ತ ಸುಮಾರು 22 ಲಕ್ಷ ಕೋಟಿ ರೂ. ಗೆ ಏರುತ್ತದೆ. ಜತೆಗೆ ಈಗಾಗಲೇ 15,143 ಶಾಖೆಗಳನ್ನು ಹೊಂದಿರುವ SBI ಲೆಕ್ಕಕ್ಕೆ ಈ ಪಂಚ ಬ್ಯಾಂಕುಗಳ 5,658 ಶಾಖೆಗಳು ಸೇರ್ಪಡೆಯಾದಂತಾಗುತ್ತದೆ.
ಮಾರುಕಟ್ಟೆ ಪಾಲು ಸಹ ಈಗಿನ ಶೇ. 19ರಿಂದ ಶೇ. 24ಕ್ಕೆ ವೃದ್ಧಿಸುತ್ತದೆ. ಅಂದರೆ ಅಗ್ರಗಣ್ಯ SBI ಮತ್ತಷ್ಟು ಬಲಾಢ್ಯವಾಗುತ್ತದೆ. ದೇಶ ಮತ್ತು ವಿಶ್ವದ ಆರ್ಥಿಕತೆಯನ್ನು ಪರಿಗಣಿಸಿದರೆ ಈಗಿನ ಸೇರ್ಪಡೆ ಸಮಯವೂ ಸುಸಮಯವಾಗಿದೆ ಎಂದು ಎಸ್ ಬಿಐ ನೂನತ ಅಧ್ಯಕ್ಷೆ ಆರುಂಧತಿ ಭಟ್ಟಾಚಾರ್ಯ ಹೇಳುತ್ತಾರೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೊನೆಗೂ ವಿಲೀನ?:
ರಾಜ್ಯದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ State Bank of Mysore, State Bank of Travancore, State Bank of Hyderabad, State Bank of Patiala ಮತ್ತು State Bank of Bikaner & Jaipur ಮಾತೃ ಬ್ಯಾಂಕಿನೊ0ದಿಗೆ ವಿಲೀನವಾಗಲಿದೆ.
ಆದರೆ ಇದು ಕೈಗೂಡುತ್ತದಾ? ಎಂಬುದು ಒಂದು ದಶಕದಿಂದ ಕೇಳಿಬರುತ್ತಿರುವ ಪ್ರಶ್ನೆ. ಏಕೆಂದರೆ ದಶಕದ ಹಿಂದೆಯೇ ಇವುಗಳ ವಿಲೀನಕ್ಕೆ ಚಿಂತನೆ ನಡೆಯಿತು. ಆದರೆ ಬ್ಯಾಂಕ್ ಯೂನಿಯನ್ನುಗಳು ಇದನ್ನು ಸುತರಾಂ ಒಪ್ಪುತ್ತಿಲ್ಲ. ಇನ್ನು ಹಿಂದಿನ ಸರಕಾರವೂ ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲ. ಆದರೆ ಈಗಿನ ಹೊಸ ಕೇಂದ್ರ ಸರಕಾರ ಮತ್ತು ಹೊಸ ಸಿಎಂಡಿ ಆರುಂಧತಿ ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರಾ? ಎಂಬುದು ಕಾದುನೋಡಬೇಕಾದ ವಿಚಾರ.
ಏಕೆಂದರೆ ಕಳೆದೊಂದು ದಶಕದಲ್ಲಿ ಅಪಾರ ಚಿಂತನೆ, ವಿರೋಧಗಳು, ವಿರೋಧಾಭಾಸಗಳ ನಡುವೆ State Bank of Saurashtra ಮತ್ತು State Bank of Indore ಬ್ಯಾಂಕುಗಳನ್ನು SBI ತನ್ನ ಜತೆ ವಿಲೀನಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಏನೇ ಆಗಲಿ, ಬ್ಯಾಂಕುಗಳ ವಿಲೀನವಾದರೆ ಬ್ಯಾಂಕಿನ ಅಂತಃಶಕ್ತಿ ಹೆಚ್ಚಾಗಿ, ದೇಶದ ಆರ್ಥಿಕತೆಗೆ ನೆರವಾಗುತ್ತದೆ ಎಂಬುದಂತೂ ಈ ಕ್ಷಣದ ಸತ್ಯ.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ











Click it and Unblock the Notifications