ಆರ್ಯನ್ ಖಾನ್ ಡ್ರಗ್ ಪ್ರಕರಣ: ಎನ್‌ಸಿಬಿಯಲ್ಲಿ ಸಮೀರ್ ವಾಂಖೆಡೆ ಅಧಿಕಾರಾವಧಿ ಕೊನೆಗೊಂಡಿದೆ
ನವದೆಹಲಿ, ಜನವರಿ 4: ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಯ ಮುಂಬೈ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಅವರ ಅಧಿಕಾರಾವಧಿ ಡಿಸೆಂಬರ್ 31ಕ್ಕೆ ಕೊನೆಗೊಂಡಿದ್ದು, ಅವರೀಗ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ಡಿಆರ್‌ಐ (ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್) ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ.
2008-ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ ವಾಂಖೆಡೆ ಸೆಪ್ಟೆಂಬರ್ 2020 ರಿಂದ NCB ಗೆ ಡೆಪ್ಯುಟೇಶನ್‌ನಲ್ಲಿದ್ದರು. ಅವರು ಈ ಹಿಂದೆ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ಯೊಂದಿಗೆ ಪೋಸ್ಟ್ ಮಾಡಲ್ಪಟ್ಟಿದ್ದರು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ, ವಾಂಖೆಡೆ ಬಾಲಿವುಡ್ ಸೆಲೆಬ್ರಿಟಿಗಳನ್ನು ಒಳಗೊಂಡಿರುವ ಡ್ರಗ್ ಪ್ರಕರಣಗಳ ವಿರುದ್ಧ ತನಿಖೆಯಲ್ಲಿ ತೊಡಗಿದ್ದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಾಂಖೆಡೆ ನೇತೃತ್ವದ ತಂಡ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ, ಡ್ರಗ್ಸ್ ವಶಪಡಿಸಿಕೊಂಡಿತ್ತು. ಜೊತೆಗೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಿತ್ತು. ಆದರೆ ತರುವಾಯ ದಾಳಿಯ ಸಮಯದಲ್ಲಿ ಎನ್‌ಸಿಬಿ ಬಳಸಿದ ಸ್ವತಂತ್ರ ಸಾಕ್ಷಿಗಳ ರುಜುವಾತುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು ಮತ್ತು ಎನ್‌ಸಿಬಿ ಅಧಿಕಾರಿಗಳಿಂದ ಶಾರುಖ್ ಖಾನ್‌ನಿಂದ ಹಣ ವಸೂಲಿ ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಲಾಗಿತ್ತು. ಅಂತಿಮವಾಗಿ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಾಂಖೆಡೆಯನ್ನು ಗುರಿಯಾಗಿಸಿಕೊಂಡು ಎನ್‌ಸಿಬಿ ಅಧಿಕಾರಿಯ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು.

ಸಮೀರ್ ವಾಂಖೆಡೆ ಮುಂಬೈ ಕ್ರೂಸ್ ಡ್ರಗ್ ಪ್ರಕರಣವನ್ನು ಕೈಬಿಡಲು ಕೋಟಿ ಕೋಟಿ ಡೀಲ್ ಮಾಡಿಕೊಂಡಿದ್ದಾರೆಂದು ಸ್ವಾತಂತ್ರ್ಯ ಸಾಕ್ಷಿಧಾರರು ಎಂದು ಪರಿಗಣಿಸಲಾಗಿದ್ದ ಕಿರಣ್ ಗೋಸಾವಿ ಅಂಗರಕ್ಷಕ ಪ್ರಭಾಕರ್ ಹೇಳಿಕೊಂಡಿದ್ದರು. ಭಾಕರ್ ಹೇಳುವಂತೆ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಕಿರಣ್ ಗೋಸಾವಿಯೊಂದಿಗೆ ಪ್ರಕರಣ ಕೈಬಿಡಲು 25 ಕೋಟಿ ರು ಡೀಲ್ ನಡೆದಿದೆ. ಕಿರಣ್ ಗೋಸಾವಿ ದಾಳಿಯಾದಾಗಿನಿಂದಲೂ ಸಮಿರ್ ವಾಂಖೆಡೆಯೊಂದಿಗಿದ್ದರು. ಕಿರಣ್ ಸಮೀರ್ ಪರವಾಗಿ 25 ಕೋಟಿ ರು ಹಣದ ವ್ಯವಹಾರ ಮಾಡಿಕೊಳ್ಳುತ್ತಿದ್ದರು. ಈ ಒಪ್ಪಂದ ಕೊನೆಗೆ 18 ಕೋಟಿ ರುಗೆ ಬಂದು ತಲುಪಿತು. ಈ ವೇಳೆ ಕಿರಣ್ ಈ ಹಣದಲ್ಲಿ 8 ಕೋಟಿ ರು ಸಮೀರ್ ವಾಂಖೆಡೆಗೆ ಸೇರುತ್ತದೆ. ಉಳಿದಂತೆ ಇತರರಿಗೆ ಸೇರುತ್ತದೆ ಎಂದು ಹೇಳಿದ್ದರು ಎಂದು ಪ್ರಭಾಕರ್ ಹೇಳಿಕೊಂಡಿದ್ದರು. ಆದರೆ ವಿಚಾರಣೆ ಚುರುಕುಗೊಳಿಸಿದ ಎನ್‌ಸಿಬಿ ಇದರಲ್ಲಿ ಯಾವುದೇ ಉರುಳಿಲ್ಲ ಎಂದು ತನಿಖೆ ಕೈಬಿಟ್ಟಿದೆ.
ಜೊತೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಾಂಖೆಡೆ ಕೇಂದ್ರ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ ಎಂದು ಮಲಿಕ್ ಆರೋಪಿಸಿದ್ದಾರೆ. ಆದರೆ ಈ ಎಲ್ಲಾ ಆರೋಪಗಳನ್ನು ಸಮೀರ್ ನಿರಾಕರಿಸಿದರು. ವಿರುದ್ಧದ ಆರೋಪಗಳಿಗೆಲ್ಲ ಸಮೀರ್ ವಾಂಖೆಡೆ ದಿಟ್ಟವಾಗಿ ಉತ್ತರ ಕೊಡುತ್ತಲೇ ಬಂದಿದ್ದರು. ತಮ್ಮ ವೈಯಕ್ತಿಕ ವಿಚಾರಕ್ಕೆ ಬರಬೇಡಿ ಎಂದು ಎನ್ಸಿಪಿ ನಾಯಕನಿಗೆ ತಿರುಗೇಟು ನೀಡಿದ್ದರು. ಹಾಗೇ, ನನ್ನ ವಿರುದ್ಧ ವೃಥಾ ಆರೋಪ ಮಾಡಲಾಗುತ್ತಿದೆ. ನಾನು ಹಣಕ್ಕೆ ಬೇಡಿಕೆಯಿಟ್ಟಿಲ್ಲ. ಸುಲಿಗೆಯನ್ನೂ ಮಾಡಿಲ್ಲ. ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದ ನನ್ನ ವಿರುದ್ಧ ಕುತಂತ್ರ ಮಾಡಲಾಗಿದೆ ಎಂದು ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಮುಖ ರಾಜಕಾರಣಿಯ ಸಂಬಂಧಿಯೊಬ್ಬರನ್ನು ಡ್ರಗ್ಸ್ ಕೇಸ್ನಲ್ಲಿ ಬಂಧಿಸಿದ್ದೆ, ಆ ದ್ವೇಷ ತೀರಿಸಿಕೊಳ್ಳಲು ಹೀಗೆಲ್ಲ ಮಾಡಲಾಗುತ್ತಿದೆ ಎಂದಿದ್ದರು. ಆದರೆ ಆ ವಿಶೇಷ ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸದೆ, ಹೈಕೋರ್ಟ್ಗೆ ಹೋಗುವಂತೆ ಸೂಚಿಸಿತ್ತು. ಇದೆಲ್ಲದ ಮಧ್ಯೆ ಸಮೀರ್ ವಾಂಖೆಡೆಯನ್ನು ಆರ್ಯನ್ ಖಾನ್ ಡ್ರಗ್ಸ್ ಕೇಸ್ ವಿಚಾರಣೆ, ತನಿಖೆ ಕೇಸ್ನಿಂದ ದೂರ ಇಡಲಾಗಿತ್ತು.












Click it and Unblock the Notifications