ಆರ್ಯನ್ ಖಾನ್ NCB ಮುಂಬೈ ಕಚೇರಿ ಹಾಜರಾತಿ ಅಗತ್ಯವಿಲ್ಲವೆಂದ ಹೈಕೋರ್ಟ್

ಮುಂಬೈ ಡಿಸೆಂಬರ್ 15: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಆರೋಪಿ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜಾಮೀನು ಷರತ್ತಿನ ಭಾಗವಾಗಿ ಪ್ರತಿ ಶುಕ್ರವಾರ ಮುಂಬೈನಲ್ಲಿರುವ ಎನ್‌ಸಿಬಿ ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ನೀಡುವಾಗ ಬಾಂಬೆ ಹೈಕೋರ್ಟ್ ಆರ್ಯನ್ ಖಾನ್‌ ಪ್ರತಿ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುಂಬೈನಲ್ಲಿರುವ ಎನ್‌ಸಿಬಿ ಕಚೇರಿಗೆ ಹಾಜರಾಗುವಂತೆ ಸೂಚಿಸಿತ್ತು. ಹೀಗಾಗಿ ಜಾಮೀನು ಪಡೆದ ಬಳಿಕ ಆರ್ಯನ್ ಖಾನ್ ಅವರು ನವೆಂಬರ್ 5, 12, 19, 26 ಮತ್ತು ಡಿಸೆಂಬರ್ 3 ಮತ್ತು 10 ರಂದು NCB ಮುಂದೆ ಹಾಜರಾಗಿದ್ದರು.

ಎನ್‌ಸಿಬಿಯ ಮೂರು ಪುಟಗಳ ಪ್ರತಿಕ್ರಿಯೆ ಮತ್ತು ಆರ್ಯನ್ ಖಾನ್ ಅವರ ಮನವಿಯನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿ ಎನ್‌ಡಬ್ಲ್ಯೂ ಸಾಂಬ್ರೆ ಅವರು ಎನ್‌ಸಿಬಿಯಿಂದ ಯಾವಾಗ ಮತ್ತು ಎಲ್ಲಿಗೆ ಕರೆದರೂ ಆರ್ಯನ್ ಖಾನ್ ಸಹಕರಿಸಬೇಕು. ಅವರ ಸಮಯವನ್ನು ನೀಡಿದರೆ ಅವರಿಗೆ ಪ್ರಯಾಣಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆ. ಆರ್ಯನ್ ಖಾನ್ ಅವರ ಇತರ ಪ್ರಯಾಣದ ಯೋಜನೆಗಳಿಗೆ ಸಂಬಂಧಿಸಿದಂತೆ, ಅವರು ಎನ್‌ಸಿಬಿ ಕಚೇರಿಯನ್ನು ಹೊರತುಪಡಿಸಿ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರೆ, ಅವರು ಡ್ರಗ್ ಕ್ರೂಸ್ ಪ್ರಕರಣದ ತನಿಖಾಧಿಕಾರಿಗೆ ತಿಳಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Aryan Khan doesnt need to mark weekly attendance at NCB Mumbai office: Bombay HC

ಬುಧವಾರ ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿ, ''ಪ್ರಕರಣದಲ್ಲಿ ಯಾವುದೇ ಬೆಳವಣಿಗಳು ಕಂಡು ಬರುತ್ತಿಲ್ಲ. ಆರ್ಯನ್ ಎನ್‌ಸಿಬಿಗೆ ಯಾವಗಲೂ ಸಹಕರಿಸಲು ಸಿದ್ಧರಿರುತ್ತಾರೆ ಮತ್ತು ಅವರು ಬಯಸಿದಾಗ ಅವರು ಹೋಗುತ್ತಾರೆ. ಆರ್ಯನ್ ಖಾನ್ ಅವರು ಎನ್‌ಸಿಬಿ ಕಚೇರಿಗೆ ಹೋಗಬೇಕಾದಾಗಲೆಲ್ಲಾ ಭಾರಿ ಪೊಲೀಸ್ ನಿಯೋಜನೆ ಇರುತ್ತದೆ. ಮುಂಬೈ ನಗರಕ್ಕೆ ಉತ್ತಮ ಕೆಲಸ ಮಾಡಬೇಕಾದ ಅವರಿಗೆ ನಾವು ಈ ಇತರ ಕೆಲಸವನ್ನು ನೀಡುತ್ತಿದ್ದೇವೆ.

ಎನ್‌ಸಿಬಿ ಪರ ವಾದ ಮಂಡಿಸಿದ ವಕೀಲ ಶ್ರೀರಾಮ್ ಶಿರ್ಸಾತ್, ಮಾರ್ಪಾಡಿನಲ್ಲಿ ಏಜೆನ್ಸಿಗೆ ಯಾವುದೇ ತೊಂದರೆ ಇಲ್ಲ. ಆದರೆ "ನಮ್ಮ ಪ್ರಾರ್ಥನೆ ಏನೆಂದರೆ ಅವರು ಕರೆದಾಗಲೆಲ್ಲಾ ಸಹಕರಿಸಬೇಕು ಮತ್ತು ಮುಂಬೈ ಅಥವಾ ದೆಹಲಿಗೆ ಕರೆದಾಗಲೆಲ್ಲಾ ಬರಬೇಕು" ಎಂದು ಹೇಳಿದರು. ಆರ್ಯನ್ ಖಾನ್ ಅವರು ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು ಮತ್ತು ಜಾಮೀನು ಷರತ್ತುಗಳನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿದ್ದರು. ಮನವಿಯಲ್ಲಿ ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಯಲ್ಲಿ ಹಾಜರಾತಿಯನ್ನು ಗುರುತಿಸುವ ಅಗತ್ಯವನ್ನು ತೆಗೆದುಹಾಕುವಂತೆ ಅವರು ಕೋರಿದ್ದರು.

Aryan Khan doesnt need to mark weekly attendance at NCB Mumbai office: Bombay HC

ಅಕ್ಟೋಬರ್ 3 ರಂದು ಮುಂಬೈ ಕ್ರೂಸ್ ಡ್ರಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿತ್ತು. 15 ದಿನಗಳ ಮುನ್ನವೇ ನಡೆದಿತ್ತು ರೇವ್‌ ಪಾರ್ಟಿ ಬಗ್ಗೆ ಸುಳಿವು ಪಡೆದಿದ್ದ ಎನ್‌ಸಿಬಿ -ಡ್ರಗ್ಸ್‌ ಸೇವನೆ ಮಾಡುವ ಅತಿಥಿಗಳ ಸೋಗಿನಲ್ಲಿ ಕ್ರೂಸ್‌ ಹಡಗು ಏರಿದ್ದರು. ಕ್ರೂಸ್‌ಶಿಪ್‌ನಲ್ಲಿಮಾದಕ ವಸ್ತು ಪತ್ತೆಯಾಗಿದ್ದು, 13 ಗ್ರಾಮ್‌ ಕೊಕೇನ್‌, 6 ಗ್ರಾಮ್‌ ಎಂಡಿ, 21 ಗ್ರಾಮ್‌ ಚರಸ್‌ ಹಾಗೂ 1,33,000 ರೂ. ನಗದು ವಶಪಡಿಸಿಕೊಳ್ಳಲಾಗಿತ್ತು. ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ ಸೇರಿದಂತೆ 8ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಎನ್‌ಸಿಬಿ ಹಾಜರುಪಡಿಸಿತ್ತು. ಸತತ ಪ್ರಯತ್ನದ ನಂತರ ಅಕ್ಟೋಬರ್ 28ರಂದು ಆರ್ಯನ್ ಖಾನ್‌ಗೆ ಷರತ್ತುಬದ್ಧ ಜಾಮೀನು ನೀಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+