ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮಾ ಕೊರೆಗಾಂವ್ ಪ್ರಕರಣದ ಬಂಧಿತರು ನಿಷೇಧಿತ ಉಗ್ರ ಸಂಘಟನೆಯ ಸದಸ್ಯರು

|
Google Oneindia Kannada News

ಮುಂಬೈ, ಸೆಪ್ಟೆಂಬರ್ 5: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಕಾರ್ಯಕರ್ತರು ನಿಷೇಧಿತ ಉಗ್ರ ಸಂಘಟನೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ವಿಚಾರವಾದಿಗಳ ಬಂಧನ: ಮೋದಿ ಹತ್ಯೆ ಸಂಚಿನ ಸಾಕ್ಷ್ಯ ಇದೆ ಎಂದ ಪೊಲೀಸರುವಿಚಾರವಾದಿಗಳ ಬಂಧನ: ಮೋದಿ ಹತ್ಯೆ ಸಂಚಿನ ಸಾಕ್ಷ್ಯ ಇದೆ ಎಂದ ಪೊಲೀಸರು

ಈ ಕಾರ್ಯಕರ್ತರು ಹಿಂಸಾಚಾರದ ಸಂಚು ಮತ್ತು ಸಿದ್ಧತೆ ರೂಪಿಸುವಲ್ಲಿ ಮಾತ್ರವಲ್ಲದೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾವೋವಾದಿ) ಅಜೆಂಡಾದಂತೆ ಸಮಾಜದಲ್ಲಿ ಕ್ಷೋಭೆ ಉಂಟಾಗುವಂತೆ ಮಾಡುವ ಆಸ್ತಿಪಾಸ್ತಿ ಹಾನಿ, ಬೃಹತ್ ಪ್ರಮಾಣದ ಹಿಂಸಾಚಾರ ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಸಹ ಅದು ಅಫಿಡವಿಟ್‌ನಲ್ಲಿ ಆರೋಪಿಸಿದೆ.

ವಿಚಾರವಾದಿಗಳ ಬಂಧಿಸಿದ ಕ್ರಮ ಪ್ರಶ್ನಿಸಿ, ಮಹಾ ಸರ್ಕಾರಕ್ಕೆ ನೋಟಿಸ್ವಿಚಾರವಾದಿಗಳ ಬಂಧಿಸಿದ ಕ್ರಮ ಪ್ರಶ್ನಿಸಿ, ಮಹಾ ಸರ್ಕಾರಕ್ಕೆ ನೋಟಿಸ್

ಇದಕ್ಕೂ ಮುನ್ನ ಮಂಗಳವಾರ, ಮ್ಯಾಜಿಸ್ಟ್ರೇಟ್ ಆದೇಶವನ್ನು ಪಾಲಿಸದೆ ಮತ್ತು ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಕ್ಕಾಗಿ ಮಹಾರಾಷ್ಟ್ರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪರಮ್ ಬೀರ್ ಸಿಂಗ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ವಿಚಾರವಾದಿಗಳ ಬಂಧನ: ಮಹಾರಾಷ್ಟ್ರ ಪೊಲೀಸರಿಂದ ಪತ್ರಿಕಾಗೋಷ್ಠಿವಿಚಾರವಾದಿಗಳ ಬಂಧನ: ಮಹಾರಾಷ್ಟ್ರ ಪೊಲೀಸರಿಂದ ಪತ್ರಿಕಾಗೋಷ್ಠಿ

arrested activists members of banned CPI (Maoist): maharashtra govt

ಪ್ರಕರಣದಲ್ಲಿ ಬಂಧಿತ ಕಾರ್ಯಕರ್ತರ ಕುರಿತು ಸುದ್ದಿಗೋಷ್ಠಿ ನಡೆಸಿ ಸಾಕ್ಷ್ಯಗಳ ವಿವರಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಬಾಂಬೆ ಹೈಕೋರ್ಟ್ ಸೋಮವಾರ ಮಹಾರಾಷ್ಟ್ರ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

English summary
Maharashtra government filed an affidavit before supreme court, mentioned that tha five activists atrested in connection with Bhima Koregaon vilonece case are members of banned CPI (maoist).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X