Fact Check: 10 ದಿನಗಳ ಕಾಲ ಭಾರತೀಯ ಸೈನ್ಯದ ವಶಕ್ಕೆ ಮುಂಬೈ ನಗರ?

ಮುಂಬೈ, ಮೇ 8: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ ಮಾಡುತ್ತಿದೆ. ದೇಶಾದ್ಯಂತ 58 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದೆ. ಮಹಾರಾಷ್ಟ್ರ ಒಂದರಲ್ಲೇ 17 ಸಾವಿರ ಸೋಂಕು ಪತ್ತೆಯಾಗಿದೆ.

ಮಹಾರಾಷ್ಟ್ರ ದೇಶದ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯವಾಗಿದೆ. ಅದರಲ್ಲೂ ಮುಂಬೈ ನಗರದಲ್ಲಿ ಕೊರೊನಾ ರುದ್ರತಾಂಡವ ಮಾಡುತ್ತಿದೆ. ಈವರೆಗೂ ಮುಂಬೈನಲ್ಲಿ 11 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾಗಿದೆ.

ಮುಂಬೈ ನಗರವನ್ನು ನಿಯಂತ್ರಣಕ್ಕೆ ತರಲು ಮಹರಾಷ್ಟ್ರ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿದೆ. ಇದೀಗ, ಮುಂಬೈ ನಗರವನ್ನು ಹತ್ತು ದಿನಗಳ ಕಾಲ ಭಾರತೀಯ ಸೈನ್ಯದ ವಶಕ್ಕೆ ವಹಿಸಲಾಗುತ್ತಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ.

Army Not Being Deployed In Mumbai City To Control Lockdown

ಶನಿವಾರದಿಂದ ಹತ್ತು ದಿನಗಳ ಕಾಲ ಮುಂಬೈ ನಗರವನ್ನು ಮಿಲಿಟರಿ ವಶಕ್ಕೆ ತೆಗೆದುಕೊಳ್ಳುತ್ತಿದೆ. ಹಾಲು ಮತ್ತು ಮೆಡಿಕಲ್ ಬಿಟ್ಟು ಬೇರೆನೂ ಸಿಗುವುದಿಲ್ಲ. ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂಬ ಸಂದೇಶ ವಾಟ್ಸಾಪ್ ಹಾಗು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದು ಸುಳ್ಳು ಸುದ್ದಿ ಎಂದು ಪಿಐಬಿ ಪ್ಯಾಕ್ಟ್ ಚೆಕ್ ವಿಭಾಗ ಹೇಳಿದೆ. ಮುಂಬೈ ನಗರದಲ್ಲಿ ಸೈನ್ಯ ಪ್ರವೇಶವಾಗುತ್ತಿಲ್ಲ. ಇಂತಹ ಸುದ್ದಿಗಳನ್ನು ಸಾರ್ವಜನಿಕರು ನಂಬಬೇಡಿ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಇನ್ನು ಮಹಾರಾಷ್ಟ್ರದಲ್ಲಿ ಮೇ ಅಂತ್ಯದವರೆಗೂ ಲಾಕ್‌ಡೌನ್‌ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಮುಂಬೈ ಮತ್ತು ಪುಣೆ ನಗರಗಳಲ್ಲಿ ಲಾಕ್‌ಡೌನ್‌ ಮುಂದುವರಿಯುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+