ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಭೀತಿ ನಡುವೆ ಶಾಲಾಗಳು ಶುರುವಾಗುವುದು ಯಾವಾಗ?

|
Google Oneindia Kannada News

ಮುಂಬೈ, ಜೂನ್.15: ನೊವೆಲ್ ಕೊರೊನಾ ವೈರಸ್ ಭೀತಿ ನಡುವೆಯೂ ಮಹಾರಾಷ್ಟ್ರದಲ್ಲಿ ಶೈಕ್ಷಣಿಕ ವರ್ಷ ಆರಂಭಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಪ್ರಾಯೋಗಿಕ ಯೋಜನೆ ಆಧಾರದ ಮೇಲೆ ಡಿಜಿಟಲ್ ಮತ್ತು ಆನ್ ಲೈನ್ ಕ್ಲಾಸ್ ಗಳನ್ನು ಆರಂಭಿಸುವ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

Recommended Video

Sushanth Singh Rajput's dad collapsed after hearing his son's news | Oneindia Kannada

ಸೋಮವಾರ ರಾಜ್ಯ ಶಿಕ್ಷಣ ಸಚಿವರ ಜೊತೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೊರೊನಾ ವೈರಸ್ ಮುಕ್ತವಾಗಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ಪುನಾರಂಭಿಸಲು ಸರ್ಕಾರವು ತೀರ್ಮಾನಿಸಿದೆ.

ಶಿಕ್ಷಣ ಸಚಿವರ ಮುಂದೆ ಪರೀಕ್ಷೆ ನಿ‍ಷೇಧಕ್ಕೆ ಕಾರಣ ನೀಡಿದ ಎಎಪಿ ಶಿಕ್ಷಣ ಸಚಿವರ ಮುಂದೆ ಪರೀಕ್ಷೆ ನಿ‍ಷೇಧಕ್ಕೆ ಕಾರಣ ನೀಡಿದ ಎಎಪಿ

ಕಳೆದ ಒಂದು ತಿಂಗಳಿನಿಂದ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗದ ಜಿಲ್ಲೆಗಳಲ್ಲಿ ಶಾಲೆಗಳು ಎಂದಿನಂತೆ ಆರಂಭವಾಗುತ್ತದೆ. ಉಳಿದಂತೆ ಬೇರೆ ಜಿಲ್ಲೆಗಳಲ್ಲಿ ಆನ್ ಲೈನ್ ಮೂಲಕ ತರಗತಿಗಳನ್ನು ಆರಂಭಿಸಲು ಸರ್ಕಾರವು ನಿರ್ಧರಿಸಿದೆ.

ವಿದ್ಯಾರ್ಥಿಗಳಿಗೆ ಎಷ್ಟು ಗಂಟೆಗಳ ಕಾಲ ತರಬೇತಿ

ವಿದ್ಯಾರ್ಥಿಗಳಿಗೆ ಎಷ್ಟು ಗಂಟೆಗಳ ಕಾಲ ತರಬೇತಿ

ಸರ್ಕಾರದ ನಿಯಮದ ಪ್ರಕಾರ ನಿರ್ದಿಷ್ಟ ಅವಧಿವರೆಗೂ ಆನ್ ಲೈನ್ ಕ್ಲಾಸ್ ಗಳನ್ನು ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ದಿನದಲ್ಲಿ ಒಂದು ಗಂಟೆಗಳ ಕಾಲ ತರಗತಿಯನ್ನು ನಡೆಸುವುದು. 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನದಲ್ಲಿ ಎರಡು ಗಂಟೆ ತರಬೇತಿ ನೀಡುವುದು. 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ದಿನದಲ್ಲಿ ಗರಿಷ್ಠ 3 ಗಂಟೆಗಳ ಕಾಲ ಆನ್ ಲೈನ್ ಕ್ಲಾಸ್ ಗೆ ಹಾಜರಾಗುವಂತೆ ಸೂಚಿಸಲಾಗಿದೆ.

2ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಿಲ್ಲ ತರಬೇತಿ

2ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಿಲ್ಲ ತರಬೇತಿ

ಪ್ರಾಥಮಿಕ ಪೂರ್ವ ತರಗತಿಗಳಿಂದ 2ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿ ನೀಡುವುದನ್ನು ಸರ್ಕಾರವೇ ನಿಷೇಧಿಸಿದೆ. ಬದಲಿಗೆ ರೇಡಿಯೋ ಮತ್ತು ಟಿವಿಗಳಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡುವಂತೆ ಸರ್ಕಾರವೇ ಸೂಚನೆ ನೀಡಿದೆ.

ಮಹಾರಾಷ್ಟ್ರದಲ್ಲಿ ಶಾಲಾ-ಕಾಲೇಜು ಪುನಾರಂಭ

ಮಹಾರಾಷ್ಟ್ರದಲ್ಲಿ ಶಾಲಾ-ಕಾಲೇಜು ಪುನಾರಂಭ

ಮಹಾರಾಷ್ಟ್ರದಲ್ಲಿ ಜುಲೈ ತಿಂಗಳಿನಿಂದ ಶಾಲಾ-ಕಾಲೇಜು ಪುನಾರಂಭಿಸಲು ಸರ್ಕಾರವು ತೀರ್ಮಾನಿಸಿದೆ. ಆರಂಭಿಕ ಹಂತದಲ್ಲಿ ಕಳೆದ ಒಂದು ತಿಂಗಳಿನಿಂದ ಒಂದೇ ಒಂದು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯುವುದಕ್ಕಷ್ಟೇ ಅನುಮತಿ ನೀಡಲಾಗಿದೆ.

ಒಂದೊಂದು ತಿಂಗಳು ಒಂದೊಂದು ತರಗತಿ ಶುರು

ಒಂದೊಂದು ತಿಂಗಳು ಒಂದೊಂದು ತರಗತಿ ಶುರು

ಮೂರ್ನಾಲ್ಕು ಹಂತಗಳಲ್ಲಿ ಶಾಲಾ-ಕಾಲೇಜುಗಳನ್ನು ಪುನಾರಂಭಿಸಲು ಸರ್ಕಾರವು ತೀರ್ಮಾನಿಸಿದೆ. ಮೊದಲ ಹಂತದಲ್ಲಿ ಜುಲೈನಲ್ಲಿ 9 ರಿಂದ 12ರವರೆಗೆ ತಗರತಿಗಳನ್ನು ಆರಂಭಿಸಲಾಗುತ್ತದೆ. ಆಗಸ್ಟ್ ನಲ್ಲಿ 6 ರಿಂದ 8ನೇ ತರಗತಿವರೆಗೂ ಶಾಲೆಗಳನ್ನು ತೆರೆಯಲಾಗುತ್ತದೆ. ಸಪ್ಟೆಂಬರ್ ನಲ್ಲಿ 1 ರಿಂದ 5ನೇ ತರಗತಿವರೆಗೂ ಶಾಲೆಗಳನ್ನು ಪುನಾರಂಭಿಸಲು ಸರ್ಕಾರವು ನಿರ್ಧರಿಸಿದೆ. ತರಗತಿಗಳು ಆರಂಭಿಸುವವರೆಗೂ ಆನ್ ಲೈನ್ ಕ್ಲಾಸ್ ಗಳನ್ನು ನಡೆಸುವುದಕ್ಕೆ ಸರ್ಕಾರವು ಸೂಚನೆ ನೀಡಿದೆ.

English summary
Amid Coronavirus Cases Rise In Maharastra; Government Reopen Schools From July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X