131ನೇ ಅಂಬೇಡ್ಕರ್ ಜಯಂತಿಗೆ, 131 ಕೆ.ಜಿ ಕೇಕ್ ಕತ್ತರಿಸಿದ ಮುಂಬೈ ಜನ
ಮುಂಬೈ, ಏಪ್ರಿಲ್ 14 : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ 131 ನೇ ವರ್ಷದ ಜನ್ಮ ದಿನಾಚರಣೆಯನ್ನು ಇಂದು ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಾಣಿಜ್ಯ ನಗರಿ ಮುಂಬೈನಲ್ಲಿ ಡಾ. ಬಿ ಆರ್ ಅಂಬೇಡ್ಕರ್ರವರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಗಿದೆ.
भारतीय राज्यघटनेचे शिल्पकार, महामानव, भारतरत्न डॉ. बाबासाहेब आंबेडकर
— Prof. Varsha Eknath Gaikwad (@VarshaEGaikwad) April 13, 2022
यांची १३१ वी जयंती मुंबईतील
भोईवाडा येथील आंबेडकरवादी अनुयायांनी अनोख्या पद्धतीने साजरी केली.अतिशय सुबक असा १३१ किलो वजनाचा केक यावेळी कापण्यात आला. या सोहळ्याचे आयोजन आंबेडकर जयंती उत्सव मंडळ यांनी केले होते. pic.twitter.com/79OAB9Dv92
ನಗರದ ಜನರೆಲ್ಲರೂ ಒಟ್ಟು ಗೂಡಿ ಅಂಬೇಡ್ಕರ್ ಹಾಗೂ ಬುದ್ದನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ವಿಶೇಷವೆಂದರೆ ಡಾ. ಬಿ. ಆರ್ ಅಂಬೇಡ್ಕರ್‌ರವರ 131 ನೇ ಜಯಂತ್ಯುತ್ಸವ ಆಗಿರುವುದರಿಂದ ವಿಶೇಷವಾಗಿ ತಯಾರಿಸಿದ 131 ಕೆಜಿ ತೂಕವುಳ್ಳ ಕೇಕ್‌ನ್ನ ಸಾವರ್ಜನಿಕರು ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ಈ ವಿಭಿನ್ನವಾದ ಕೇಕ್ ಮೇಲೆ ಹ್ಯಾಪಿ ಬರ್ತಡೇ ಬಾಬಾ ಸಾಹೇಬ್ ಅಂಬೇಡ್ಕರ್ ಅಂತ ಬರೆದಿದ್ದು, ಸಂವಿಧಾನದ ಕೆಲ ಪುಟಗಳನ್ನು ಸಹ ಚಿತ್ರಿಸಿದ್ದಾರೆ.

ಇನ್ನು ಈ ಸಂಭ್ರಮದಲ್ಲಿ ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ವರ್ಷ ಏಕ್‌ನಾಥ್ ಗಾಯ್ಕವಾಡ್ ಸೇರಿದಂತೆ ಮಕ್ಕಳು, ಮಹಿಳೆಯರು, ಯುವಕರು, ವೃದ್ದರೆನ್ನದೆ ನೂರಾರು ಜನರು ಸೇರಿ ಬುಧವಾರ ಮಧ್ಯರಾತ್ರಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ್ದಾರೆ. ಹಾಡು, ಡ್ಯಾನ್ಸ್ ಮಾಡಿ ಅಂಬೇಡ್ಕರ್ ಹುಟ್ಟುಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.












Click it and Unblock the Notifications