ಈ ವರ್ಷ ಡಿಸೆಂಬರ್ ನಲ್ಲಿ ಅಂಬಾನಿ ಪುತ್ರನ ಅದ್ಧೂರಿ ಮದುವೆ
ಮುಂಬೈ, ಮಾರ್ಚ್ 26: ಮುಖೇಶ್ ಅಂಬಾನಿ ಮತ್ತು ನಿತಾ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿಯವರು ತಮ್ಮ ಸಹಪಾಠಿ, ಗೆಳತಿ ಶ್ಲೋಕಾ ಮೆಹ್ತಾ ಅವರನ್ನು ಇದೇ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಜ್ರದ ವ್ಯಾಪಾರಿಯಾಗಿರುವ ರುಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕಾ ಮೆಹ್ತಾ ಮತ್ತು ಆಕಾಶ್ ಅಂಬಾನಿ ಮದುವೆಯಾಗುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ನಿನ್ನೆ(ಮಾ.25) ಮುಂಬೈಯ ಸಿದ್ಧಿವಿನಾಯಕ ದೇವಾಲಯಕ್ಕೆ ಉಭಯ ಕುಟುಂಬವೂ ಭೇಟಿ ನೀಡುವ ಮೂಲಕ ಈ ವದಂತಿಯನ್ನು ಸತ್ಯವಾಗಿಸಿದೆ.

ಡಿಸೆಂಬರ್ 8 ರಿಂದ 12ರವರೆಗೆ ಸುಮಾರು ನಾಲ್ಕೈದು ದಿನ ಅದ್ಧೂರಿ ಕಾರ್ಯಕ್ರಮಗಳು ನಡೆಯಲಿವೆ. ಭಾರತದ ಅತ್ಯಂತ ಶ್ರೀಮಂತ ವ್ಯಾಪಾರಿಗಳ ಪೈಕಿ ಹೆಸರು ಮಾಡಿರುವ ಮುಖೇಶ್ ಅಂಬಾನಿ ಮತ್ತು ರೋಸಿ ಬ್ಲ್ಯೂ ಡೈಮಂಡ್ ಮೂಲಕ ವಿಶ್ವಖ್ಯಾತಿ ಗಳಿಸಿದ ರುಸೆಲ್ ಮೆಹ್ತಾ ಎರಡು ಶ್ರೀಮಂತ ಕುಟುಂಬದ ನಡುವೆ ನಡೆಯುತ್ತಿರುವ ಈ ಅದ್ಧೂರಿ ವಿವಾಹ ಮಹೋತ್ಸವನ್ನು ದೇಶ ವಿದೇಶದ ಗಣ್ಯರು ಕಣ್ತುಂಬಿಸಿಕೊಳ್ಳಲಿದ್ದಾರೆ.












Click it and Unblock the Notifications