ವೈರಲ್ ಆದ ಆಕಾಶ್ ಅಂಬಾನಿ, ಶ್ಲೋಕಾ ಮದುವೆ ಆಮಂತ್ರಣ ಪತ್ರಿಕೆ
ಮುಂಬೈ, ಫೆಬ್ರವರಿ 14: ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನಿತಾ ಅಂಬಾನಿ ದಂಪತಿಯ ಪುತ್ರ ಆಕಾಶ್ ಅಂಬಾನಿ ಅವರ ಮದುವೆ ಆಮಂತ್ರಣ ಪತ್ರಿಕೆ ಸಅಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೀಗಷ್ಟೇ ಮಗಳು ಇಶಾ ಅಂಬಾನಿ ಅವರ ಅದ್ಧೂರಿ ಮದುವೆಯ ನಂತರ ಇದೀಗ ಪುತ್ರ ಆಕಾಶ್ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹಕ್ಕೆ ಮಾರ್ಚ್ 10 ಮತ್ತು 11 ರಂದು ದಿನ ನಿಗದಿಗೊಳಿಸಲಾಗಿದೆ.
Akash Ambani Shloka Mehta wedding card: Here’s the first glimpse of wedding card video#AkashAmbani #AkashAmbaniShlokaMehta @RelianceEnt pic.twitter.com/xN6ZZg9dFA
— NewsX (@NewsX) February 13, 2019
ಗುಲಾಬಿ ಬಣ್ಣದ ಪೆಟ್ಟಿಗೆಯಲ್ಲಿ ರಾಧಾ ಕೃಷ್ಣರು ನಿಂತಿರುವ ಚಿತ್ರದೊಂದಿಗೆ ಆಕರ್ಷಿಸುವ ಆಮಂತ್ರಣ ಪತ್ರಿಕೆಯನ್ನು ತೆರೆದರೆ, ಬೆಳ್ಳಿ ಚೌಕಟ್ಟಿನೊಳಗೆ ಬೇರೆ ಬೇರೆ ಭಂಗಿಯಲ್ಲಿ ನಿಂತ ರಾಧಾ ಕೃಷ್ಣರ ಚಿತ್ರವಿದೆ. ವಧು ಮತ್ತು ವರರಿಗೆ ನಿತಾ ಮತ್ತು ಮುಖೇಶ್ ಅಂಬಾನಿ ಶುಭ ಹಾರೈಸಿರುವ ಒಕ್ಕಣೆಯೂ ಸೇರಿದೆ.
"ಓ ಸೂರ್ಯದೇವ, ನೀನು ನಮ್ಮ 'ಆಕಾಶ'ದ ಬೆಳಕು, ನಮ್ಮೆಲ್ಲಾ 'ಶ್ಲೋಕ'ಗಳನ್ನೂ ಬೆಳಗಿಸು" ಎಂಬ ಸಾಲನ್ನು ಆಮಂತ್ರಣದ ಕೊನೆಯಲ್ಲಿ ಬರೆಯಲಾಗಿದೆ.

ಮುಂಬೈಯ ಬಂದ್ರಾ ಕುರ್ಲಾ ಸಂಕೀರ್ಣದ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಮದುವೆ ನಡೆಯಲಿದೆ. ವಜ್ರವ್ಯಾಪಾರಿ ರುಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕಾ ಮೆಹ್ತಾ ಆಕಾಶ್ ಅವರ ಬಾಲ್ಯದ ಸ್ನೇಹಿತೆಯಾಗಿದ್ದರು. ಕಳೆದ ಮಾರ್ಚ್ ನಲ್ಲಿ ಇವರ ನಿಶ್ಚಿತಾರ್ಥ ನೆರವೇರಿತ್ತು.












Click it and Unblock the Notifications