• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾ ಸಿಎಂ ಬಗ್ಗೆ ಶಿವಾಜಿ ವಂಶಸ್ಥ ಬೇಸರ, ರಾಜ್ಯಸಭಾ ಚುನಾವಣೆಯಿಂದ ಹೊರಕ್ಕೆ

|
Google Oneindia Kannada News

ಮುಂಬೈ, ಮೇ 27: ಶಿವಾಜಿ ಮಹಾರಾಜರ ವಂಶಸ್ಥರು ಮತ್ತು ಪ್ರಮುಖ ಮರಾಠ ನಾಯಕ ಸಂಭಾಜಿ ಛತ್ರಪತಿ ಅವರು ಶುಕ್ರವಾರದಂದು ಮುಂಬರುವ ರಾಜ್ಯಸಭಾ ಚುನಾವಣೆಯ ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸದಿರುವ ತಮ್ಮ ನಿರ್ಧಾರವು ಕುದುರೆ ವ್ಯಾಪಾರವನ್ನು ತಡೆಗಟ್ಟುವ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿಕೊಂಡರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲ್ಮನೆಯಲ್ಲಿ ತಮ್ಮ ಎರಡನೇ ಅವಧಿಗೆ ಶಿವಸೇನೆಯ ಬೆಂಬಲವನ್ನು ನೀಡುವ ಭರವಸೆಯನ್ನು ಹಿಂಪಡೆದಿದ್ದಾರೆ ಎಂದು ಆರೋಪಿಸಿದರು.

ಎನ್‌ಸಿಪಿ ಪಟ್ಟಿ ಮಾಡಿದ ಮೋದಿ ಸರ್ಕಾರದ 8 ನ್ಯೂನ್ಯತೆಗಳುಎನ್‌ಸಿಪಿ ಪಟ್ಟಿ ಮಾಡಿದ ಮೋದಿ ಸರ್ಕಾರದ 8 ನ್ಯೂನ್ಯತೆಗಳು

ಸಂಭಾಜಿ ಛತ್ರಪತಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು ಮತ್ತು ಶಿವಸೇನೆಯ ಸಹಾಯವನ್ನು ಕೋರಿದ್ದರು, ಆದರೆ ಪಕ್ಷವು ತನ್ನ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸಿತು, ಅದನ್ನು ಅವರು ಒಪ್ಪಲಿಲ್ಲ. ಶಿವಸೇನಾ ಅಭ್ಯರ್ಥಿಗಳಾದ ಸಂಜಯ್ ರಾವುತ್ ಮತ್ತು ಸಂಜಯ್ ಪವಾರ್ ನಾಮಪತ್ರ ಸಲ್ಲಿಸಿದ ಒಂದು ದಿನದ ನಂತರ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆ ಹೊರಬಿದ್ದಿದೆ.

ಈಗ ರಾಜ್ಯಸಭಾ ಸ್ಥಾನದ ರೇಸ್‌ನಲ್ಲಿ ಇಲ್ಲ

ಈಗ ರಾಜ್ಯಸಭಾ ಸ್ಥಾನದ ರೇಸ್‌ನಲ್ಲಿ ಇಲ್ಲ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನನಗೆ ಬೆಂಬಲದ ಮಾತುಗಳನ್ನು ನೀಡಿದ್ದರು. ಆದರೆ ನಂತರ ಅವರು ಅದಕ್ಕೆ ಹಿಂಪಡೆದುಕೊಂಡರು. ಅದರ ಬಗ್ಗೆ ನನಗೆ ತೀವ್ರ ಬೇಸರವಾಗಿದೆ. ನಾನು ಈಗ ರಾಜ್ಯಸಭಾ ಸ್ಥಾನದ ರೇಸ್‌ನಲ್ಲಿ ಇಲ್ಲ" ಎಂದು ಹೇಳಿದರು. ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದ್ದು, ಪ್ರತಿಪಕ್ಷ ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳನ್ನು ಚುನಾಯಿಸುವ ಸಂಖ್ಯೆಯನ್ನು ಹೊಂದಿದೆ. ಸಂಭಾಜಿ ಛತ್ರಪತಿ ಅವರು ರಾಷ್ಟ್ರಪತಿ ಕೋಟಾದಿಂದ 2016 ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು ಮತ್ತು ಅವರ ಅವಧಿ ಇತ್ತೀಚೆಗೆ ಕೊನೆಗೊಂಡಿತು. ಈ ಬಾರಿ ಬಿಜೆಪಿಗೆ ಶಾಸಕರ ಸಂಖ್ಯೆ ಕಡಿಮೆ ಇರುವುದರಿಂದ ಎನ್‌ಸಿಪಿ ಮತ್ತು ನಂತರ ಶಿವಸೇನೆ ಅವರ ಬೆಂಬಲಕ್ಕೆ ಮುಂದಾಗಿತ್ತು. ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಭಾಗವಾಗಿ ಸೇನೆ ಮತ್ತು ಎನ್‌ಸಿಪಿ ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಅಧಿಕಾರವನ್ನು ಹಂಚಿಕೊಂಡಿವೆ.

'ದಾವೂದ್ ಇಬ್ರಾಹಿಂ ಕರಾಚಿಯಲ್ಲಿ'- ಇಡಿಗೆ ಬಾಯಿಬಿಟ್ಟ ಅಲಿಶಾ ಪರ್ಕರ್'ದಾವೂದ್ ಇಬ್ರಾಹಿಂ ಕರಾಚಿಯಲ್ಲಿ'- ಇಡಿಗೆ ಬಾಯಿಬಿಟ್ಟ ಅಲಿಶಾ ಪರ್ಕರ್

ನಾನು ಯಾವುದೇ ಪಕ್ಷದ ಭಾಗವಾಗುವುದಿಲ್ಲ

ನಾನು ಯಾವುದೇ ಪಕ್ಷದ ಭಾಗವಾಗುವುದಿಲ್ಲ

"ನಾನು ಪಕ್ಷಕ್ಕೆ ಸೇರಿದರೆ ರಾಜ್ಯಸಭೆಗೆ ಟಿಕೆಟ್ ನೀಡುವುದಾಗಿ ಶಿವಸೇನೆ ನನಗೆ ಆಫರ್ ನೀಡಿತ್ತು. ಆದರೆ ನಾನು ಯಾವುದೇ ಪಕ್ಷದ ಭಾಗವಾಗುವುದಿಲ್ಲ ಎಂದು ನಾನು ಈಗಾಗಲೇ ಘೋಷಿಸಿದ್ದೇನೆ, ಆದ್ದರಿಂದ ನಾನು ಆ ಪ್ರಸ್ತಾಪವನ್ನು ಸ್ವೀಕರಿಸಲಿಲ್ಲ. "ಚುನಾವಣೆಯಲ್ಲಿ ಸ್ಪರ್ಧಿಸದಿರುವ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಇದು ನನ್ನ ಹೆಮ್ಮೆ" ಎಂದು ಅವರು ಹೇಳಿದ್ದಾರೆ.

ಪಕ್ಷಾತೀತವಾಗಿ ಶಾಸಕರ ಬೆಂಬಲ ನಿರೀಕ್ಷೆ

ಪಕ್ಷಾತೀತವಾಗಿ ಶಾಸಕರ ಬೆಂಬಲ ನಿರೀಕ್ಷೆ

ಸಂಭಾಜಿ ಛತ್ರಪತಿ 2009ರಲ್ಲಿ ಎನ್‌ಸಿಪಿಗೆ ಸೇರ್ಪಡೆಗೊಂಡರು ಮತ್ತು ಕೊಲ್ಹಾಪುರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಆದರೆ ಎನ್‌ಸಿಪಿ ಬಂಡಾಯದಿಂದ ಸ್ಥಾನ ಕಳೆದುಕೊಂಡರು. "ನನ್ನ ಕ್ಲೀನ್ ಇಮೇಜ್ ಮತ್ತು ನನ್ನ ಕೆಲಸಕ್ಕೆ ಪಕ್ಷಾತೀತವಾಗಿ ಶಾಸಕರ ಬೆಂಬಲವನ್ನು ನಾನು ನಿರೀಕ್ಷಿಸಿದ್ದೆ, ಆದರೆ, ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಕುದುರೆ ವ್ಯಾಪಾರವಾಗಬಹುದು ಎಂದು ನಾನು ನಂತರ ಒಂದು ವಿಷಯ ಅರಿತುಕೊಂಡೆ. ಅದನ್ನು ತಪ್ಪಿಸಲು ನಾನು ನಿರ್ಧರಿಸಿದೆ ಎಂದು ಹೇಳಿದರು.

ಜೂನ್ 10 ರಂದು ಮತದಾನ

ಜೂನ್ 10 ರಂದು ಮತದಾನ

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದ್ದು, ಜೂನ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 3 ರವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದು. ಜೂನ್ 10 ರಂದು ಮತದಾನದ ದಿನದಂದು ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Shivaji Maharaj's descendant and leading Maratha leader, Sambhaji Chhatrapati, has withdrawn from the upcoming Rajya Sabha elections on Friday. He declared that he would run for election as an independent candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X