• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತಿ ಸಾವಿನಿಂದ ನೊಂದು 26ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ವೃದ್ಧೆ

|

ಮುಂಬೈ, ಫೆಬ್ರವರಿ 26: ಪತಿಯ ಸಾವಿನ ದುಃಖವನ್ನು ಅರಗಿಸಿಕೊಳ್ಳಲಾಗದೆ 74 ವರ್ಷದ ವೃದ್ಧೆ 26 ಮಹಡಿ ಎತ್ತರದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಪತಿ ಸಾವಿನ ಬಳಿಕೆ ಅವರ ನೆನಪಲ್ಲೇ ಕಳೆಯುತ್ತಿದ್ದ ವೃದ್ಧೆ ಕ್ರಮೇಣವಾಗಿ ಖಿನ್ನತೆಎ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಮೃತರನ್ನು ಸವಿತಾ ಶರ್ಮಾ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಇದೀಗ ರಾಕ್ ಮಾರ್ಗ್ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಸಾಲದ ಹೊರೆ: ಮಂಡ್ಯದಲ್ಲಿ ಜೆಡಿಎಸ್ ಮುಖಂಡ ಆತ್ಮಹತ್ಯೆ

ಬೆಳಗ್ಗೆ 7.30ರ ಸುಮಾರಿಗೆ ಸವಿತಾ ಶರ್ಮಾ ಗ್ರೌಂಡ್ ಫ್ಲೋರ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.

ಡಿಸೆಂಬರ್ 20 ರಂದು ಇವರ ಪತಿ ಲಕ್ಷ್ಮಣ್ ಶರ್ಮಾ ಸಾವನ್ನಪ್ಪಿದ್ದು, ಹತ್ತಿರದಲ್ಲಿಯೇ ವಾಸವಾಗಿದ್ದ ವಿವಾಹಿತ ಮಗಳು ಪ್ರತಿದಿನ ತಾಯಿಯನ್ನು ನೋಡಿಕೊಂಡು ಹೋಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

English summary
A 74 year old woman, who was reportedly depressed since her husband's death in December last year, jumped off her 26th floor flat in a central mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X