ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮತ್ತೆ 7 ಒಮಿಕ್ರಾನ್: ದೇಶದಲ್ಲಿ ಪ್ರಕರಣದ ಸಂಖ್ಯೆ 12 ಕ್ಕೆ ಏರಿಕೆ

|
Google Oneindia Kannada News

ಮುಂಬೈ, ಡಿಸೆಂಬರ್‌ 05: ಮಹಾರಾಷ್ಟ್ರದಲ್ಲಿ ಒಂದಲ್ಲ ಎರಡಲ್ಲ ಒಮ್ಮೆಲ್ಲೇ ಏಳು ಓಮಿಕ್ರಾನ್‌ ಪ್ರಕರಣಗಳು ದೃಢಪಟ್ಟಿದೆ ಎಂದು ವರದಿಯು ತಿಳಿಸಿದೆ. ಏಳು ಪ್ರಕರಣಗಳ ಪೈಕಿ ಆರು ಪಿಂಪ್ರಿಯಲ್ಲಿ ಪತ್ತೆಯಾಗಿದ್ದು, ಒಂದು ಪ್ರಕರಣ ಪುಣೆಯಲ್ಲಿ ವರದಿ ಆಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ರೂಪಾಂತರದ ಒಟ್ಟು ಸಂಖ್ಯೆ ಈಗ 8ಕ್ಕೆ ಏರಿಕೆ ಕಂಡಿದೆ.

ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಿಂದ ದುಬೈ ಮಾರ್ಗವಾಗಿ ಮುಂಬೈಗೆ ಆಗಮಿಸಿದ 33 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟ ಒಂದು ದಿನದ ಬಳಿಕ ಈಗ ಏಳು ಮಂದಿಯಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್‌ ಹೊಸ ರೂಪಾಂತರ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು 12 ಕ್ಕೆ ಏರಿಕೆ ಆಗಿದೆ.

Breaking News: ಭಾರತದ 4ನೇ ಓಮಿಕ್ರಾನ್ ಪ್ರಕರಣ ಮುಂಬೈನಲ್ಲಿ ಪತ್ತೆ Breaking News: ಭಾರತದ 4ನೇ ಓಮಿಕ್ರಾನ್ ಪ್ರಕರಣ ಮುಂಬೈನಲ್ಲಿ ಪತ್ತೆ

ನೈಜೀರಿಯಾದ ಪ್ರಜೆಯಾಗಿರುವ 44 ವರ್ಷದ ಭಾರತೀಯ ಮೂಲದ ಮಹಿಳೆ ತನ್ನ 12 ಮತ್ತು 18 ವರ್ಷದ ಹೆಣ್ಣುಮಕ್ಕಳೊಂದಿಗೆ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ತನ್ನ ಸಹೋದರನನ್ನು ಭೇಟಿ ಮಾಡಿದ್ದಾಳೆ. ಅವರು ನವೆಂಬರ್ 24 ರಂದು ನೈಜೀರಿಯಾದ ಲಾಗೋಸ್‌ನಿಂದ ಪುಣೆಯ ಪಕ್ಕದ ನಗರಕ್ಕೆ ಬಂದಿದ್ದಾರೆ. ಮಹಿಳೆಗೆ ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ ಓಮಿಕ್ರಾನ್ ರೂಪಾಂತರ ಇರುವುದು ಕಂಡು ಬಂದಿದೆ.

7 more Omicron cases detected in Maharashtra, Indias total reaches 12

ಆಕೆಯ 45 ವರ್ಷದ ಸಹೋದರ ಮತ್ತು ಅವನ ಎರಡೂವರೆ ವರ್ಷ ಮತ್ತು ಏಳು ವರ್ಷದ ಹೆಣ್ಣುಮಕ್ಕಳು ಸಹ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಟ್ಟಿದೆ. ಹೆಚ್ಚುವರಿಯಾಗಿ, ಇತ್ತೀಚೆಗೆ ಫಿನ್‌ಲ್ಯಾಂಡ್‌ಗೆ ಪ್ರಯಾಣಿಸಿದ್ದ 47 ವರ್ಷದ ವ್ಯಕ್ತಿಯೊಬ್ಬರು ಪುಣೆಯಲ್ಲಿ ರೂಪಾಂತರ ಕಾಣಿಸಿಕೊಂಡಿದೆ. ಇನ್ನು ಓಮಿಕ್ರಾನ್‌ ಪಾಸಿಟಿವ್‌ ಕಂಡು ಬಂದ ನಾಲ್ವರಿಗೆ ಸಂಪೂರ್ಣ ಲಸಿಕೆ ಹಾಕಲಾಗಿದ್ದು, ಉಳಿದ ಮೂವರು ಅಪ್ರಾಪ್ತರು ಆಗಿದ್ದಾರೆ.

ದೇಶದಲ್ಲಿ ಎಲ್ಲಿ ಕೊರೊನಾ ಪ್ರಕರಣ

ಭಾರತದಲ್ಲಿ ಮೊದಲ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಪ್ರಕರಣವು ಕರ್ನಾಟಕ ರಾಜ್ಯದಲ್ಲಿ ಪತ್ತೆಯಾಗಿದೆ. ಕರ್ನಾಟಕದಲ್ಲಿ ಇಬ್ಬರಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಬಳಿಕ ಗುಜರಾತ್‌ನಲ್ಲಿ ಒಂದು ಪ್ರಕರಣವು ವರದಿ ಆಗಿದೆ. ಜಿಂಬಾಬ್ವೆಯಿಂದ ಜಾಮ್‌ನಗರಕ್ಕೆ ವಾಪಸ್‌ ಆಗಿದ್ದ 72 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ಹೇಳಿದೆ. ಆ ಬಳಿಕ ನಾಲ್ಕನೇ ಪ್ರಕರಣವು ಮಹಾರಾಷ್ಟ್ರದಲ್ಲಿ ದಾಖಲು ಆಗಿದೆ. ಆ ನಂತರ ಭಾರತದ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ವೈರಸ್‌ನ ಹೊಸ ಓಮಿಕ್ರಾನ್‌ನ ಒಂದು ಪ್ರಕರಣ ಕಾಣಿಸಿಕೊಂಡಿದ್ದು, ದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ ಕಂಡಿತ್ತು. ದೆಹಲಿ ಆರೋಗ್ಯ ಸಚಿವ, ಆಮ್‌ ಆದ್ಮಿ ಪಕ್ಷದ ಮುಖಂಡ ಸತ್ಯೇಂದ್ರ ಜೈನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ತಾಂಜಾನಿಯಾದಿಂದ ಆಗಮಿಸಿದ ಒಬ್ಬ ವ್ಯಕ್ತಿ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು ಜೀನೋಮ್‌ ಸಿಕ್ವೆಂನ್ಸಿಗ್‌ನಲ್ಲಿ ಓಮಿಕ್ರಾನ್‌ ರೂಪಾಂತರ ಇರುವುದು ಕಂಡು ಬಂದಿದೆ," ಎಂದು ತಿಳಿಸಿದ್ದರು. ಇನ್ನು ಈಗ ಮಹಾರಾಷ್ಟ್ರದಲ್ಲಿ ಒಟ್ಟು ಏಳು ಓಮಿಕ್ರಾನ್‌ ಪ್ರಕರಣಗಳು ಕಾಣಿಸಿಕೊಂಡಿದೆ.

ದೆಹಲಿಯಲ್ಲಿ ಮೊದಲ ಓಮಿಕ್ರಾನ್‌ ದೃಢ: ದೇಶದ ಐದನೇ ಪ್ರಕರಣದೆಹಲಿಯಲ್ಲಿ ಮೊದಲ ಓಮಿಕ್ರಾನ್‌ ದೃಢ: ದೇಶದ ಐದನೇ ಪ್ರಕರಣ

ಮಹಾರಾಷ್ಟ್ರದಲ್ಲಿ ಕೊರೊನಾ ಮಾರ್ಗಸೂಚಿ ಹೇಗಿದೆ?

ದೇಶದಲ್ಲಿ ಅಧಿಕ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿರುವ ರಾಜ್ಯವು ಮಹಾರಾಷ್ಟ್ರ ಆಗಿದೆ. ಈಗ ಓಮಿಕ್ರಾನ್‌ ಅಧಿಕ ಕಾಣಿಸಿಕೊಂಡ ರಾಜ್ಯಗಳಲ್ಲೂ ಮಹಾರಾಷ್ಟ್ರ ಅಗ್ರ ಸ್ಥಾನಕ್ಕೆ ಏರಿದೆ. ಕೊರೊನಾ ವೈರಸ್‌ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿರುವ ಹಿನ್ನೆಲೆಯಿಂದಾಗಿ ಮಹಾರಾಷ್ಟ್ರ ರಾಜ್ಯದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಓಮಿಕ್ರಾನ್ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿತ್ತು. ಓಮಿಕ್ರಾನ್ ಹೆಚ್ಚು ಕಂಡು ಬಂದಿರುವ ದೇಶಗಳಿಂದ ಬರುವ ವಿಮಾನ ಪ್ರಯಾಣಿಕರ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಈ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣವೇ RTPCR ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. 7 ದಿನಗಳು ಕಡ್ಡಾಯವಾಗಿ ಕ್ವಾಂರಟೈನ್ ಇರಬೇಕಾಗುತ್ತದೆ. ಬಳಿಕ 7ನೇ ದಿನದಂದು ಎರಡನೇ RTPCR ಪರೀಕ್ಷೆಯನ್ನು ಕಡ್ಡಾಯವಾಗಿ ಒಳಗಾಗಬೇಕಾಗುತ್ತದೆ. ಪಾಸಿಟಿವ್‌ ಕಂಡು ಬಂದರೆ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ. ವೇಳೆ 7 ನೇ ದಿನದ RT-PCR ಪರೀಕ್ಷೆಯ ವರದಿಯು ನೆಗೆಟಿವ್‌ ಎಂದು ಬಂದರೆ ಅಂತಹ ಏರ್ ಪ್ಯಾಸೆಂಜರ್ ಅನ್ನು ಇನ್ನೂ 7 ದಿನಗಳವರೆಗೆ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ದೇಶೀಯ ವಿಮಾನ ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ಸಂಪೂರ್ಣವಾಗಿ ಲಸಿಕೆಯನ್ನು ಹಾಕಿಸಿಕೊಂಡಿರಬೇಕು.

Recommended Video

ಗೋಧಿ ಹಾಗೂ ಜೀವರಕ್ಷಕ ಔಷಧ ಸಾಗಿಸಲು ಪಾಕ್ ಅನುಮತಿ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
7 more Omicron cases detected in Maharashtra, India's total reaches 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X