ಕೊರೊನಾವೈರಸ್ ನಾಲ್ಕನೇ ಅಲೆಯ ಭಯದಲ್ಲಿ ಮಹಾರಾಷ್ಟ್ರ; ಯಾಕೆ ಹೀಗಾಯ್ತು!?

ಮುಂಬೈ, ಜೂನ್ 7: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆ ಶುರುವಾಯಿತಾ? ಎನ್ನುವ ಅನುಮಾನ ಹುಟ್ಟಿಕೊಳ್ಳುತ್ತಿದೆ. ಕಳೆದ ಐದು ದಿನಗಳಲ್ಲಿ ಮುಂಬೈ ನಗರವೊಂದರಲ್ಲೇ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೇ.50ರಷ್ಟು ಹೆಚ್ಚಳವಾಗಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಕೋವಿಡ್ -19 ಪ್ರಕರಣಗಳಲ್ಲಿ ನಿರಂತರ ಹೆಚ್ಚಳವನ್ನು ಪರಿಶೀಲಿಸಲು ರಾಜ್ಯ ಸರ್ಕಾರವು ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿತು. ಕೋವಿಡ್-19 ಕುರಿತಾದ ಹೊಸ ನಿರ್ಬಂಧಗಳನ್ನು ಅಥವಾ ನಿಮಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ಪೂರ್ವದಲ್ಲಿ ಪರಿಸ್ಥಿತಿಯನ್ನು ಮರುಪರಿಶೀಲಿಸಲು ನಿರ್ಧರಿಸಲಾಯಿತು. ಏಕೆಂದರೆ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಯಾವುದೇ ರೀತಿ ಹೆಚ್ಚಳ ಕಂಡು ಬಂದಿಲ್ಲ.

ಮಹಾರಾಷ್ಟ್ರದಲ್ಲಿ ಸೋಮವಾರ ಒಂದೇ ದಿನ 1,036 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಭಾನುವಾರ ಹೊಸ ಪ್ರಕರಣಗಳ ಸಂಖ್ಯೆಯು ಸರಾಸರಿ 1000 ಪ್ರಕರಣಗಳ ಸಂಖ್ಯೆಯನ್ನು ಮೀರಿದೆ. ಕಳೆದ ಫೆಬ್ರವರಿ 26 ರಿಂದ ಏಳು ದಿನಗಳಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸರಾಸರಿ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ನಾಲ್ಕನೇ ಅಲೆಯ ಆತಂಕಕ್ಕೆ ಕಾರಣವಾದ ಅಂಶಗಳೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಓಮಿಕ್ರಾನ್ ತಳಿಗಳಿಂದ ಹೆಚ್ಚಿತಾ ಕೊರೊನಾವೈರಸ್?

ಓಮಿಕ್ರಾನ್ ತಳಿಗಳಿಂದ ಹೆಚ್ಚಿತಾ ಕೊರೊನಾವೈರಸ್?

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ BA.4 ಮತ್ತು BA.5 ಉಪ ತಳಿಯು ಪ್ರಕರಣಗಳ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. "ರಾಜ್ಯದಲ್ಲಿ ಹೆಚ್ಚಿನ ಸೋಂಕುಗಳು ಓಮಿಕ್ರಾನ್ ರೂಪಾಂತರದ BA.4 ಮತ್ತು BA.5 ತಳಿಗಳಿಂದ ಬಂದಿವೆ. ಇದು ಹೆಚ್ಚು ಹರಡುವಿಕೆಯನ್ನು ಹೊಂದಿದೆ," ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆಗಿನ ರಾಜ್ಯ ಕ್ಯಾಬಿನೆಟ್ ಸಭೆಯ ನಂತರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಕೊರೊನಾದಿಂದ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಎಷ್ಟಿದೆ?

ಕೊರೊನಾದಿಂದ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಎಷ್ಟಿದೆ?

ಮಹಾರಾಷ್ಟ್ರದಲ್ಲಿ ಮತ್ತು ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಏರಿಕೆಯಾಗಿದ್ದರೂ, ಅದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಆಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಅಂಕಿ-ಅಂಗಳ ಪ್ರಕಾರ, ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಪೈಕಿ ಶೇ.1ರಷ್ಟು ರೋಗಿಗಳಷ್ಟೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದ್ದರಿಂದ ಸೋಂಕು ಹೆಚ್ಚು ಅಪಾಯವನ್ನು ಹುಟ್ಟು ಹಾಕುವುದಿಲ್ಲ, ಈ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಮುಂಬೈನಲ್ಲಿರುವ 24,579 ಹಾಸಿಗೆಗಳಲ್ಲಿ ಸೋಮವಾರ ಶೇ. 0.74ರಷ್ಟು ಮಾತ್ರ ಭರ್ತಿಯಾಗಿವೆ. 4,768 ಆಕ್ಸಿಜನ್ ಹಾಸಿಗೆಗಳಲ್ಲಿ ಶೇ.0.29% ಮಾತ್ರ ತುಂಬಿವೆ.

ಮುಂಬೈನಲ್ಲಿ ಸೋಮವಾರ 676 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಕಳೆದ ಏಳು ದಿನಗಳಲ್ಲಿ, ಥಾಣೆಯಲ್ಲಿ ಶೇ.17.17, ಪುಣೆಯಲ್ಲಿ ಶೇ7.42, ರಾಯಗಡ ಶೇ.3.36 ಮತ್ತು ಪಾಲ್ಘರ್ ಶೇ.2 ನಂತರ ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಮುಂಬೈ ಶೇ.67.28 ರಷ್ಟಿವೆ.

ಮುಂಬೈನಲ್ಲಿ ಸೋಂಕಿನ ಪರೀಕ್ಷೆ ಸಂಖ್ಯೆಯಲ್ಲಿ ಏರಿಕೆ

ಮುಂಬೈನಲ್ಲಿ ಸೋಂಕಿನ ಪರೀಕ್ಷೆ ಸಂಖ್ಯೆಯಲ್ಲಿ ಏರಿಕೆ

ರಾಜ್ಯದಲ್ಲಿ ನಾಗರಿಕರು ವಿಶೇಷವಾಗಿ ಸಾರ್ವಜನಿಕ ಸಾರಿಗೆ ಮತ್ತು ಜನಸಂದಣಿಯ ಇತರ ಪ್ರದೇಶಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವಿಶೇಷವಾಗಿ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮಾಸ್ಕ್ ಧರಿಸಬೇಕು. ಆದರೆ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಲಾಗಿಲ್ಲ. ಅವುಗಳನ್ನು ಧರಿಸದಿದ್ದರೆ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವಂತೆ ನಾವು ಜನರಿಗೆ ಮನವಿ ಮಾಡುತ್ತೇವೆ"ಎಂದು ಆರೋಗ್ಯ ಸಚಿವ ತೋಪೆ ಹೇಳಿದ್ದಾರೆ.

ಕಳೆದ ವಾರ, ರಾಜ್ಯ ಕಾರ್ಯಪಡೆಯು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಮರು-ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು. ಮಹಾರಾಷ್ಟ್ರದಲ್ಲಿ ಕಡ್ಡಾಯವಾಗಿ ಮಾಮಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ನಿರ್ಬಂಧಗಳನ್ನು ಏಪ್ರಿಲ್ 1ರಂದು ಕೈಬಿಡಲಾಗಿತ್ತು.

ಮಹಾರಾಷ್ಟ್ರದಲ್ಲಿ ಕೋವಿಡ್-19 ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ವ್ಯಾಸ್, ಕಳೆದ ವಾರ ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಪರೀಕ್ಷೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಅನ್ನು ಧರಿಸುವುದನ್ನು ಪ್ರೋತ್ಸಾಹಿಸಲು ನಿರ್ದೇಶಿಸಲಾಗಿತ್ತು. ಮುಂಬೈನ ಸಿವಿಕ್ ಬಾಡಿ ಮುಖ್ಯಸ್ಥ ಇಕ್ಬಾಲ್ ಚಹಲ್ ಅವರು ಕಳೆದ ವಾರ ಹೇಳಿಕೆಯನ್ನು ನೀಡಿದ್ದು, ಪ್ರತಿದಿನ ನಡೆಸುವ ಪರೀಕ್ಷೆಗಳ ಸಂಖ್ಯೆಯನ್ನು 40,000 ಕ್ಕೆ ಹೆಚ್ಚಿಸಲಾಗುವುದು ಎಂದಿದ್ದರು.

ಕೋವಿಡ್-19 ರೂಪಾಂತರ ತಳಿಗಳ ಲೆಕ್ಕಾಚಾರ ಇನ್ನೂ ಸಿಕ್ಕಿಲ್ಲ

ಕೋವಿಡ್-19 ರೂಪಾಂತರ ತಳಿಗಳ ಲೆಕ್ಕಾಚಾರ ಇನ್ನೂ ಸಿಕ್ಕಿಲ್ಲ

ಮಹಾರಾಷ್ಟ್ರದಲ್ಲಿ ಪತ್ತೆ ಆಗಿರುವ ಹೊಸ ಕೋವಿಡ್-19 ಸೋಂಕಿತ ಪ್ರಕರಣಗಳಲ್ಲಿ ಓಮಿಕ್ರಾನ್ ರೂಪಾಂತರದ BA.4 ಮತ್ತು BA.5ರ ತಳಿಯ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ನಿರ್ದಿಷ್ಟ ಅಂಕಿ- ಸಂಖ್ಯೆಗಳು ಸಿಕ್ಕಿಲ್ಲ. BA.4 ಮತ್ತು BA.5 ರೂಪಾಂತರಗಳು ದಕ್ಷಿಣ ಆಫ್ರಿಕಾದಂತಹ ಕೆಲವು ಪ್ರದೇಶಗಳಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.

Sars-CoV-2 ನ ಓಮಿಕ್ರಾನ್ ರೂಪಾಂತರದ ಆರಂಭಿಕ ವಂಶಾವಳಿಗಳಿಂದ ವಿಭಿನ್ನವಾಗಿದೆ. ವಿಜ್ಞಾನಿಗಳ ಪ್ರಕಾರ, BA.4 ಮತ್ತು BA.5 ತಳಿಯು BA.1 ನಿಂದ ಪ್ರಚೋದಿಸಲ್ಪಟ್ಟ ಪ್ರತಿಕಾಯಗಳಿಗೆ ಹೆಚ್ಚು ನಿರೋಧಕವಾಗಿದೆ. ಆದರೆ BA.2 ನಿಂದ ಪ್ರಚೋದಿಸಲ್ಪಟ್ಟ ಪ್ರತಿಕಾಯಗಳು, ಭಾರತದ ಹೆಚ್ಚಿನ ಭಾಗಗಳಲ್ಲಿ ವ್ಯಾಪಿಸಿದ್ದು, ಹೆಚ್ಚು ಅಪಾಯಕಾರಿ ಎನಿಸಿತ್ತು. ಓಮಿಕ್ರಾನ್ ರೂಪಾಂತರವು ವೈರಸ್‌ನ ಹಿಂದಿನ ತಳಿಗಳಿಗಿಂತ ಕಡಿಮೆ ಗಂಭೀರವಾದ ಅನಾರೋಗ್ಯದ ಸಾಧ್ಯತೆಯೊಂದಿಗೆ ಸೌಮ್ಯವಾದ ಪ್ರಕರಣಗಳಿಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+