ಮುಂಬೈನಲ್ಲಿ ಕಟ್ಟಡ ಕುಸಿತ: ಐದು ಸಾವು

Posted By: Prithviraj
Subscribe to Oneindia Kannada

ಮುಂಬೈ, ಅಕ್ಟೋಬರ್, 13 : ಇಲ್ಲಿಯ ಪೂರ್ವ ಬಾಂದ್ರಾದ ಬೆಹ್ರಂಪದ ನ್ಯಾಷನಲ್ ಸ್ಕೂಲ್ ಬಳಿಯ ಐದು ಅಂತಸ್ತಿನ ಕಟ್ಟಡದ ಗೋಡೆ ಕುಸಿದ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಮಧ್ಯಾಹ್ನ 1:30ಕ್ಕೆ ಐದು ಅಂತಸ್ತಿನ ಕಟ್ಟಡದ ಗೋಡೆ ಕುಸಿದ ಪರಿಣಾಮ ಒಂದನೇ ಮಹಡಿಯಿಂದ ನಾಲ್ಕನೇ ಮಹಡಿಯವರೆಗೆ ಕಟ್ಟಡದ ಗೋಡೆ ಕುಸಿದ ಪರಿಣಾಮ ನಾಲ್ಕು ಮಂದಿ ಗೋಡೆ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಸುಮಾರು 9ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು ಎಂಬ ಮಾಹಿತಿ ಇತ್ತು. ಈ ವರೆಗೆ ಐದು ಜನರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಮೃತರನ್ನು ಆಯೇಷಾ ಅಕ್ಬರ್ ಖಾನ್ (12), ಅಲಿ ನಿಸರ್ ಅಹಮದ್ ಖಾನ್(3) ಒಸಮಾ ನಿಸರ್ ಖಾನ್(14) ಮತ್ತು ಅಫಿಫಾ ಸದಾಬ್(1) ಎಂದು ಗುರುತಿಸಲಾಗಿದೆ.

ಮುಂಬೈನಲ್ಲಿ ಕಟ್ಟಡ ಕುಸಿತ: ಐದು ಸಾವು

ಕಟ್ಟಡದ ಗೋಡೆ ಕುಸಿದ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಓರ್ವ ಮಹಿಳೆ ಹಾಗು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ.[ಕಟ್ಟಡದ ಅವಶೇಷಗಳಡಿ ಸಿಲುಕಿ ಇಬ್ಬರು ಸಾವು, 4 ಮಂದಿ ರಕ್ಷಣೆ]

ಐದು ಅಗ್ನಿಶಾಮಕ ವಾಹನಗಳು ಹಾಗೂ, ಎರಡು ಆಂಬುಲೆನ್ಸ್ ವಾಹನಗಳನ್ನು ರಕ್ಷಣಾ ಕಾರ್ಯದಲ್ಲಿ ಬಳಸಿಕೊಳ್ಳಲಾಗಿದೆ. ಬಾಂದ್ರಾ ಪ್ರದೇಶವು ಹೆಚ್ಚು ಜನಸಾಂದ್ರೆತೆ ಇರುವ ಪ್ರದೇಶವಾದ ಕಾರಣ ರಕ್ಷಣಾ ಕಾರ್ಯ ನಿಧಾನಗತಿಯಲ್ಲಿ ನಡೆದಿದೆ ಎಮದು ಇಲಾಖೆ ತಿಳಿಸಿದೆ.

ಇಲ್ಲಿಯ ಕಟ್ಟಡಗಳನ್ನು ಒಂದಕ್ಕೊಂದು ಅಂಟಿಕೊಂಡಂತೆ ಕಟ್ಟಲಾಗಿತ್ತು. ರಕ್ಷಣಾ ಕಾರ್ಯಕ್ಕೆ ವಿಳಂಬವಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four people have died after a five-storey building collapsed in Mumbai Bandra east afternoon, say official
Please Wait while comments are loading...