ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕು

|
Google Oneindia Kannada News

ಮುಂಬೈ, ಮಾರ್ಚ್ 17: ಕೊರೊನಾ ವೈರಸ್ ಎಲ್ಲ ವಯಸ್ಸಿನವರಿಗೆ ಸೋಂಕುವ ಸಾಧ್ಯತೆ ಇದೆ ಎಂದು ಮೊದಲೇ ಹೇಳಲಾಗಿತ್ತು. ಇದುವರೆಗೂ ಸೋಂಕು ಕಾಣಿಸಿಕೊಂಡವರ ವಯಸ್ಸು ಗಮನಿಸಿದರೆ ಬಹುತೇಕರು ಮಧ್ಯ ವಯಸ್ಸು ಹಾಗೂ ಹಿರಿಯ ವಯಸ್ಸಿನ ವ್ಯಕ್ತಿಗಳು ಆಗಿದ್ದರು.

Recommended Video

Kalaburagi marks one more corona case but Sriramulu urges not to worry

ಇದೀಗ, ಮಹಾರಾಷ್ಟ್ರದಲ್ಲಿ ಮೂರು ವರ್ಷದ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಸದ್ಯದವರೆಗೂ ಭಾರತದಲ್ಲಿ ಸೋಂಕು ಕಾಣಿಸಿಕೊಂಡವರ ಪೈಕಿ ಅತ್ಯಂತ ಕಿರಿಯ ವಯಸ್ಸಿನ ಕೇಸ್ ಇದಾಗಿದೆ.

ಮಹಾರಾಷ್ಟ್ರದಲ್ಲಿ ಮತ್ತೆ 5 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಮಹಾರಾಷ್ಟ್ರದಲ್ಲಿ ಮತ್ತೆ 5 ಕೊರೊನಾ ವೈರಸ್ ಪ್ರಕರಣಗಳು ಪತ್ತೆ

ಭಾರತದಲ್ಲಿ ನೂರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಸಂಖ್ಯೆ ಏರುತ್ತಲೇ ಇದೆ. ಅಷ್ಟಕ್ಕೂ, ಈ ಮೂರು ವರ್ಷದ ಮಗುವಿಗೆ ಸೋಂಕು ಹೇಗೆ ಹರಡಿತು? ಮುಂದೆ ಓದಿ...

ಸೋಮವಾರ ಆರು ಹೊಸ ಕೇಸ್ ಪತ್ತೆ

ಸೋಮವಾರ ಆರು ಹೊಸ ಕೇಸ್ ಪತ್ತೆ

ಮಹಾರಾಷ್ಟ್ರದಲ್ಲಿ ಇದುವರೆಗೂ ಕೊರೊನಾ ಸೋಂಕಿತರ ಸಂಖ್ಯೆ 39ಕ್ಕೆ ಏರಿದೆ. ಸೋಮವಾರ (ಮಾರ್ಚ್ 16) ಒಂದೇ ದಿನ ಒಟ್ಟು ಆರು ನೂತನ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ ಈ ಮೂರುವ ವರ್ಷದ ಮಗು ಕೂಡ ಸೇರಿದೆ ಎಂಬುದು ವಿಷಾದಕರ ಸಂಗತಿ. ಕಲ್ಯಾಣ್ ಮೂಲದ ಪುಟ್ಟ ಬಾಲಕಿಗೆ ಕೋವಿಡ್ 19 ಸೋಂಕು ತಗುಲಿದೆ.

ಯುಎಸ್ ಟೆಕ್ಕಿಯಿಂದ ಸೋಂಕು ತಗುಲಿದೆ

ಯುಎಸ್ ಟೆಕ್ಕಿಯಿಂದ ಸೋಂಕು ತಗುಲಿದೆ

ಮಾರ್ಚ್ 14ರಂದು ಯುಎಸ್‌ನಿಂದ ಮುಂಬೈಗೆ ಬಂದಿದ್ದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಆ ಟೆಕ್ಕಿ ಜೊತೆ ವಾಸವಾಗಿದ್ದ ಪತ್ನಿ ಮತ್ತು ಮಗುವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಪತ್ನಿ ಮತ್ತು ಮಗು ಇಬ್ಬರಿಗೂ ಕೊರೊನಾ ಇರೋದು ಖಚಿತವಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೂರ ಕೊರೊನಾ ವೈರಸ್ ನಿಂದ ಭಾರತದಲ್ಲಿ ಮೂರನೇ ಬಲಿ: ಹೆಚ್ಚಿದ ಭೀತಿ!ಕ್ರೂರ ಕೊರೊನಾ ವೈರಸ್ ನಿಂದ ಭಾರತದಲ್ಲಿ ಮೂರನೇ ಬಲಿ: ಹೆಚ್ಚಿದ ಭೀತಿ!

ಮಾರ್ಚ್ 9 ರಂದು ಮೊದಲ ಕೇಸ್ ಪತ್ತೆ

ಮಾರ್ಚ್ 9 ರಂದು ಮೊದಲ ಕೇಸ್ ಪತ್ತೆ

ಮಹಾರಾಷ್ಟ್ರದಲ್ಲಿ ಮಾರ್ಚ್ 9 ರಂದು ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಿದೆ. ಇದೀಗ, ಮಹಾರಾಷ್ಟ್ರ ಒಂದರಲ್ಲೇ 39 ಸೋಂಕಿತರು ವರದಿಯಾಗಿದ್ದಾರೆ. ಇದು ಭಾರತದಲ್ಲಿ ಅತಿ ಹೆಚ್ಚು ಸೋಂಕಿತರ ಕಾಣಿಸಿಕೊಂಡಿರುವ ರಾಜ್ಯವಾಗಿದೆ.

ಭಾರತದಲ್ಲಿ ಒಟ್ಟು ಕೇಸ್ ಎಷ್ಟು?

ಭಾರತದಲ್ಲಿ ಒಟ್ಟು ಕೇಸ್ ಎಷ್ಟು?

ಸದ್ಯದ ವರದಿ ಪ್ರಕಾರ ಭಾರತದಲ್ಲಿ ಒಟ್ಟು 129 ಕೇಸ್ ದಾಖಲಾಗಿದೆ. ಸುಮಾರು 13 ಜನರು ಸೋಂಕಿನಿಂದ ಹೊರಬಂದಿದ್ದಾರೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 11 ಕೇಸ್ ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

English summary
Breaking: 3 year old girl is suffering from world pandemic coronavirus. now, Covid-19 numbers rise to 39 in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X