• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೇಸ್‌ ಕೋರ್ಸ್‌ನಲ್ಲಿ 1000 ಹಾಸಿಗೆಯ ಕೋವಿಡ್ ಕೇರ್ ಸೆಂಟರ್

|
Google Oneindia Kannada News

ಮುಂಬೈ, ಜೂನ್ 24 : ಮುಂಬೈ ನಗರದಲ್ಲಿ ಕೊರೊನಾ ವೈರಸ್ ಸೋಂಕನ್ನು ಹತೋಟಿಗೆ ತರಲು ಸ್ಥಳೀಯ ಆಡಳಿತ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಪ್ರಸ್ತುತ ನಗರದಲ್ಲಿ ಸೋಂಕಿತರ ಸಂಖ್ಯೆ 68,410.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆಟದ ಮೈದಾನ, ಸಮುದಾಯ ಭವನಗಳನ್ನು ಈಗಾಗಲೇ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದೆ. ಮಹಾಲಕ್ಷ್ಮೀ ರೇಸ್‌ ಕೋರ್ಸ್‌ ಅನ್ನು ಈಗ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ: ಡೇಂಜರ್ ಜೋನ್‌ನಲ್ಲಿ ಮುಂಬೈ, ಪುಣೆಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ: ಡೇಂಜರ್ ಜೋನ್‌ನಲ್ಲಿ ಮುಂಬೈ, ಪುಣೆ

ಬಿಎಂಸಿ ಮಹಾಲಕ್ಷ್ಮೀ ರೇಸ್ ಕೋರ್ಸ್‌ನಲ್ಲಿ 1000 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಹಲವು ಹಾಸಿಗೆಗಳನ್ನು ಹಾಕಿ ರೋಗಿಗಳಿಗೆ ಅಗತ್ಯವಾದ ಮೂಲಭೂತ ವ್ಯವಸ್ಥೆಗಳನ್ನು ಮಾಡಲಾಗಿದೆ.

ಮುಂಬೈ ವಲಸೆ ಕಾರ್ಮಿಕರಿಗೆ ಆಹಾರ ತಯಾರು ಮಾಡಿದ 99ರ ಅಜ್ಜಿಮುಂಬೈ ವಲಸೆ ಕಾರ್ಮಿಕರಿಗೆ ಆಹಾರ ತಯಾರು ಮಾಡಿದ 99ರ ಅಜ್ಜಿ

ಮಂಚ, ಫ್ಯಾನ್, ಚೇರ್ ವ್ಯವಸ್ಥೆಗಳನ್ನು ಮಾಡಲಾಗಿದೆ. ರೇಸ್‌ ಕೋರ್ಸ್‌ನ ಶೌಚಾಲಯಗಳನ್ನು ರೋಗಿಗಳ ಉಪಯೋಗಕ್ಕಾಗಿ ಬಳಕೆ ಮಾಡಲಾಗುತ್ತದೆ. ಮುಂದಿನ ವಾರದಿಂದ ಕೋವಿಡ್ - 19 ಸೋಂಕಿತ ರೋಗಿಗಳನ್ನು ಇಲ್ಲಿ ದಾಖಲು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ಪರೀಕ್ಷೆ ಬೆಲೆ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ ಕೊರೊನಾ ಪರೀಕ್ಷೆ ಬೆಲೆ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ

ಈಗಾಗಲೇ ಬಿಎಂಸಿ ನಗರದಲ್ಲಿನ ಹಲವು ಆಟದ ಮೈದಾನದಲ್ಲಿ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್‌ಗಳನ್ನು ನಿರ್ಮಾಣ ಮಾಡಿದೆ. ಆದರೆ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಹೆಚ್ಚಳ ಮಾಡಲಾಗುತ್ತಿದೆ.

ದೇಶದಲ್ಲಿಯೇ ಕೊರೊನಾ ಸೋಂಕಿತರು ಹೆಚ್ಚು ಇರುವ ರಾಜ್ಯ ಮಹಾರಾಷ್ಟ್ರ. ಒಟ್ಟು 1,39,010 ಸೋಂಕಿತರು ರಾಜ್ಯದಲ್ಲಿ ಇದ್ದು, ಇವರಲ್ಲಿ ಹೆಚ್ಚು ಜನರು ಮುಂಬೈ ನಗರದಲ್ಲಿಯೇ ಇದ್ದಾರೆ.

English summary
Brihanmumbai Municipal Corporation (BMC) is setting up a Covid care centre with a capacity of around 1000 beds in Mahalakshmi Race Course.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X