ಧರ್ಮಸ್ಥಳದಲ್ಲಿ ಗಾಂಜಾ ವ್ಯವಹಾರ ನಡೆಸುತ್ತಿದ್ದ ಯುವಕನಿಗೆ ಬಿತ್ತು ಧರ್ಮದೇಟು

ಮಂಗಳೂರು, ಏಪ್ರಿಲ್ 26:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗಾಂಜಾ ವ್ಯವಹಾರ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಯುವಕನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದ ಘಟನೆ ಗುರುವಾರ ರಾತ್ರಿ (ಏ.25) ನಡೆದಿದೆ.

ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ ಆಸುಪಾಸಿನಲ್ಲಿ ಯುವಕನೋರ್ವ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಅದನ್ನು ಗಮನಿಸಿದ ಸ್ಥಳೀಯ ಯುವಕರು ಆತನನ್ನು ತಡೆದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಯುವಕನ ಬಳಿ ಗಾಂಜಾ ಪ್ಯಾಕೆಟ್, ಮೂರು ಮೊಬೈಲ್, ನಾಲ್ಕು ವಾಹನದ ಕೀಗಳು ಪತ್ತೆಯಾಗಿವೆ. ಧರ್ಮಸ್ಥಳ ಪರಿಸರದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ದೂರು ಈ ಹಿಂದೆ ಕೇಳಿ ಬಂದಿತ್ತು.

Youth thrashed by locals in Dharmasthala

ಈ ಗಾಂಜಾ ವ್ಯವಹಾರ ನಡೆಸುತ್ತಿರುವುದರ ಹಿಂದೆ ಈ ಯುವಕನ ಕೈವಾಡವಿದೆ ಎನ್ನುವುದರ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಆತನಿಗೆ ಧರ್ಮದೇಟು ನೀಡಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Youth thrashed by locals in Dharmasthala

ಧರ್ಮದೇಟು ತಿಂದ ಯುವಕನನ್ನು ಮಂಗಳೂರು ಹೊರವಲಯದ ತಲಪಾಡಿ ನಿವಾಸಿ ಸಮೀರ್ ಎಂದು‌ ಗುರುತಿಸಲಾಗಿದೆ. ಸ್ಥಳೀಯರು ಯುವಕನಿಗೆ ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+