ಸುಳ್ಯ ಗ್ಯಾಂಗ್ ರೇಪ್: ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮಂಗಳೂರು ಜೂನ್ 27: ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಶೇಣಿ ಎಂಬಲ್ಲಿ ನಡೆದ ಯುವತಿಯ ಗ್ಯಾಂಗ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣಾ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ 3 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಜೂನ್ 25 ರಂದು ಮೂರು ಜನ ಅಪರಿಚಿತರು ಶೇಣಿ ಎಂಬಲ್ಲಿ ಡೇರಿಗೆ ಹಾಲು ನೀಡಿ ವಾಪಾಸಾಗುತ್ತಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಸಂಜೆ 3.45ರ ಹೊತ್ತಿಗೆ ಮನೆಯಿಂದ ಹೊರಟ ಯುವತಿ ಹಾಲನ್ನು ಡೇರಿಗೆ ಕೊಟ್ಟು ವಾಪಸ್ ಮನೆಗೆ ಹೋಗುವ ಸಂದರ್ಭದಲ್ಲಿ ಚೊಕ್ಕಾಡಿ ಕಡೆಯಿಂದ ಒಂದು ಆಟೋ ಬಂದಿದೆ.

ಆ ಆಟೋ ದಲ್ಲಿದ್ದ ಮೂರು ಜನ ಅಪರಿಚಿತರು ಮನೆಗೆ ವಾಪಾಸಾಗುತ್ತಿದ್ದ ಯುವತಿಯನ್ನು ಬಲವಂತವಾಗಿ ರಿಕ್ಷಾದ ಒಳಗೆ ಹಾಕಿ ಚೊಕ್ಕಾಡಿ ಸಮೀಪದ ರಬ್ಬರ್ ತೋಟಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.

Young Women were raped by a Four young men

ಅತ್ಯಾಚಾರ ಮಾಡಿದ ವಿಚಾರವನ್ನು ಮನೆಯವರ ಬಳಿ ತಿಳಿಸಿದರೆ ಕೊಲ್ಲುವುದಾಗಿ ಬೆದರಿಸಿ ಅದೇ ಆಟೋದಲ್ಲಿ ಶೇಣಿಗೆ ಕರೆತಂದು ಬಿಟ್ಟು ಪರಾರಿಯಾಗಿದ್ದಾರೆ. ಈ ಕುರಿತು ಸಂತ್ರಸ್ಥ ಯುವತಿ ಬೆಳ್ಳಾರೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅತ್ಯಾಚಾರಿಗಳ ಬಂಧನಕ್ಕೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳ ಮಾಹಿತಿ ಸಂಗ್ರಹಿಸಿದ ಪೊಲೀಸರು ಚೊಕ್ಕಾಡಿಯ ಬಳಿ ಆರೋಪಿಗಳು ಪರಾರಿಯಾಗುವಾಗ ಸುತ್ತುವರಿದು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಡ್ನೂರು ಗ್ರಾಮ ನಿವಾಸಿಗಳಾದ ಜಯಪ್ರಕಾಶ್ ( 25), ರಂಜಿತ್ ಎನ್ ಕೆ (20 ) ಹಾಗು ರವೀಂದ್ರ(35) ಎಂದು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+