ಮೂಡಬಿದಿರೆ: ವಿವಾಹಿತ ಮಹಿಳೆ ಮಗುವಿನ ಜತೆ ನಾಪತ್ತೆ

ಮೂಡಬಿದಿರೆ, ಜೂನ್ 13: ಇಲ್ಲಿನ ಯುವ ವಿವಾಹಿತ ಮಹಿಳೆಯೊಬ್ಬರು ತಮ್ಮ 2 ವರ್ಷದ ಮಗುವಿನ ಜತೆ ನಾಪತ್ತೆಯಾಗಿದ್ದಾರೆ. ತಾಲೂಕಿನ ಮಲ್ಲಮುಂಡುಕೂರು ಗ್ರಾಮದ ಕುದ್ರಿಪಡವು ಬಳಿ ಈ ಪ್ರಕರಣ ನಡೆದಿದೆ.

ಜೂನ್ 3ರಂದು ಆಟೋರಿಕ್ಷಾದಲ್ಲಿ ಕನ್ನಿಗೋಳಿಗೆ ಹೊರಟ ಮಹಿಳೆ ತದನಂತರ ವಾಪಸಾಗಿಲ್ಲ ಎಂದು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೂಲತಃ ಹಾಸನದವರಾದ ದಿವ್ಯಾ ಕ್ರಾಸ್ಟಾ (25) ಮತ್ತು ಡಿಯೋನಾ ಕ್ರಾಸ್ಟಾ (2) ನಾಪತ್ತೆಯಾದವರು. ದಿವ್ಯಾ ಕ್ರಾಸ್ಟಾ ಅವರ ಪತಿ ಇವಾನ್ ಕ್ರಾಸ್ಟಾ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

Young housewife Divya Crasta from Kudripadavu of Moodbidri reported missing

ಕುದ್ರಿಪಡವುನಲ್ಲಿ ದಿವ್ಯಾ ಕ್ರಾಸ್ಟಾ ಮಗುವಿನೊಂದಿಗೆ ತಮ್ಮ ಅತ್ತೆ-ಮಾವನ ಮನೆಯಲ್ಲಿ ವಾಸವಾಗಿದ್ದರು. 5.1 ಅಡಿ ಎತ್ತರದ ದಿವ್ಯಾ ಕ್ರಾಸ್ಟಾ ಮನೆಯಿಂದ ಹೊರಟಾಗ ಜೀನ್ಟ್ ಡ್ರೆಸ್ ಧರಿಸಿದ್ದರು ಎಂದು ಆಕೆಯ ಮನೆಯವರು ದೂರಿನಲ್ಲಿ ತಿಳಿಸಿದ್ದಾರೆ. ನಾಪತ್ತೆಯಾಗಿರುವ ದಿವ್ಯಾ ಕ್ರಾಸ್ಟಾ ಬಗ್ಗೆ ಮಾಹಿತಿ ದೊರೆತರೆ 08258-236333 ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸುವಂತೆ ಮೂಡಬಿದಿರೆ ಪೊಲೀಸರು ತಿಳಿಸಿದ್ದಾರೆ. (ಲೈಂಗಿಕ ಕಿರುಕುಳ ಪಿಜಿಯಲ್ಲಿ ಯುವತಿ ಆತ್ಮಹತ್ಯೆ)

ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ (ಉಜಿರೆ ವರದಿ):
ಮೂಡಿಗೆರೆ ಜಿಲ್ಲೆಯ ಕಳಸದ ಕೆಳಗುರು ನಿವಾಸಿ ಪೂಜಾ ನೇಣು ಹಾಕಿಕೊಂಡು ಜೂನ್ 12ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೂಜಾ ಎಸ್ ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಮೊದಲ ಪಿಯುಸಿ ಪರೀಕ್ಷೆಯಲ್ಲಿ ಮೊದಲ ಬಾರಿ ಅನುತ್ತೀರ್ಣರಾಗಿದ್ದಳು. ತದನಂತರ ಮತ್ತೆ ಪರೀಕ್ಷೆ ಬರೆದಳಾದರೂ ಮತ್ತೆ ಫೇಲ್ ಆದಳು. ಇದರಿಂದ ನೊಂದ ಪೂಜಾ, ತಾನು ವಾಸವಾಗಿದ್ದ ಪಿಜಿ ವಸತಿ ನಿಲಯದಲ್ಲಿ ನೇಣುಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

ತಣ್ಣಿರು ಬಾವಿಯಲ್ಲಿ ಬಾಲಕಿಯರ ಆತ್ಮಹತ್ಯೆ:
ಮಂಗಳೂರಿನ ತಣ್ಣಿರು ಬಾವಿಯಲ್ಲಿ 15 ವರ್ಷದ ಬಾಲಕ-ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಲು ಮತ್ತು ಬೆಲ್ಟಿನಿಂದ ಒಬ್ಬರಿಗೊಬ್ಬರು ಬಂಧಿಸಿಕೊಂಡು ಜೂನ್ 12ರಂದು ಸಂಜೆ ತಣ್ಣಿರು ಬಾವಿ ಬೀಚಿನಲ್ಲಿ ಸಾವಿಗೀಡಾಗಿದ್ದಾರೆ.

15 ವರ್ಷ ವಯಸ್ಸಿನವರಾದ ಪ್ರತಾಪ್ ಮತ್ತು ಮಂಜುಳ ಮೃತರು. ಇಬ್ಬರೂ ಮೂಡುಶೆಡ್ಡೆ ನಿವಾಸಿಗಳು ಎಂದು ತಿಳಿದುಬಂದಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರು ತಮ್ಮ ಪ್ರೀತಿಯನ್ನು ತಿರಿಸ್ಕರಿಸುತ್ತಾರೆ ಎಂಬ ಅಂಜಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಇಬ್ಬರ ಮನೆಯವರೂ ಕಾವೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+