ಪ್ರಸವ ವೇದನೆಯಲ್ಲಿ ಬಾವಿಗೆ ಹಾರಿದ ಅವಿವಾಹಿತೆ, ಮಗು ನೀರಿನಲ್ಲೇ ಸಾವು
ಮಂಗಳೂರು, ಆಗಸ್ಟ್ 2: ಈ ರೀತಿ ಪ್ರಕರಣ ಎಲ್ಲೂ ನಡೆಯೋದು ಬೇಡ. ಆದರೆ ನಾಗರಿಕ ಸಮಾಜ ತಲೆತಗ್ಗಿಸುವಂಥ ಘಟನೆ ನಡೆದುಹೋಗಿದೆ. ಏನಿದು ಪ್ರಕರಣ ಅಂತೀರಾ? ಆ ಯುವತಿಗೆ ಇನ್ನೂ ಮದುವೆಯಾಗಿಲ್ಲ. ಆದರೆ ಗರ್ಭ ಧರಿಸಿದ್ದಳು. ಇನ್ನೇನು ಹೆರಿಗೆ ಆಗುತ್ತದೆ ಅನ್ನುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಬಾವಿಗೆ ಹಾರಿದ್ದಳು.
ಆದರೆ, ಆಕೆ ಮಗುವಿಗೆ ಜನ್ಮ ನೀಡಿಯೇಬಿಟ್ಟಳು. ಅದೂ ಎಲ್ಲಿ ಗೊತ್ತಾ? ಬಾವಿ ನೀರಿನಲ್ಲಿ. ಆಕೆ ಅದೇನೋ ಮಾಡಲು ಹೊರಟು ಎಡವಟ್ಟಿನಿಂದ ಗರ್ಭ ಧರಿಸಿದ ಯುವತಿ. ಆದರೆ ಎಡವಟ್ಟು ಮಗುವಿಗೆ ಜನ್ಮ ನೀಡುವ ವಿಚಾರದಲ್ಲೂ ಮುಂದುವರಿಯಿತು. ಈಕೆಗೆ ಗರ್ಭದ ಕೊಡುಗೆ ನೀಡಿದ 'ಮಹಾನುಭಾವ'ನ ಬಗ್ಗೆ ಎಲ್ಲೂ ವಿಚಾರ ಹೊರಬರಲಿಲ್ಲ. ಆದರೆ ಈಕೆಗೆ ಪ್ರಸವ ವೇದನೆ ಪ್ರಾರಂಭವಾದ ಕೂಡಲೇ ಬಾವಿಗೆ ಹಾರಿಬಿಟ್ಟಿದ್ದಾಳೆ.

ಬಾವಿಗೆ ಹಾರಿದ ತಕ್ಷಣ ಮಗು ನೀರಿನಲ್ಲೇ ಜನ್ಮ ತಾಳಿದೆ. ಈಕೆ ಮಾತ್ರ ಪಂಪ್ ಸೆಟ್ ನ ಪೈಪ್ ಹಿಡಿದು ಪಾರಾಗಿದ್ದಾಳೆ . ಕೂಡಲೇ ಅದ್ಯಾರೋ ಈಕೆಯ ಕಿರುಚಾಟ ಕಂಡು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಹಸುಗೂಸು ನೀರಲ್ಲೇ ಮುಳುಗಿ ಅಸುನೀಗಿತ್ತು. ಆದರೆ ಈ ಯುವತಿ ವಿಚಾರವನ್ನು ಎಲ್ಲೂ ಬಾಯಿ ಬಿಟ್ಟಿಲ್ಲ. ಮಂಗಳವಾರ ಮಗುವಿನ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ.
ಇದೀಗ ಆಕೆಯ 'ಮಹಾನುಭಾವ'ನ ಸುದ್ದಿ ಊರಿಡೀ ಹಬ್ಬಿದ್ದು , ಜನ ಬೆಚ್ಚಿ ಬಿದ್ದಿದ್ದಾರೆ. ಈ ಘಟನೆ ಕಡಲಕೆರೆ ಸಮೀಪದಲ್ಲಿ ನಡೆದಿದ್ದು, ಆಕೆ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಆ ಯುವತಿಯ ಗರ್ಭಕ್ಕೆ ಕಾರಣನಾದವನು ಆಕೆಯ ಸಹೋದರಿ ಗಂಡನೇ ಎಂಬುದು ಬಯಲಾಗಿದೆ.












Click it and Unblock the Notifications