ಬೆಂಗಳೂರು-ಮಂಗಳೂರು ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿಗೆ ನದಿಗೆ ಜಿಗಿದ ಮಹಿಳೆ
ಮಂಗಳೂರು, ಫೆಬ್ರವರಿ 15: ಬೆಂಗಳೂರು-ಮಂಗಳೂರು ಚಲಿಸುತ್ತಿದ್ದ ರೈಲಿನಿಂದ ಮಹಿಳೆಯೊಬ್ಬರು ನೇತ್ರಾವತಿ ನದಿಗೆ ಹಾರಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಳಿ ನಡೆದಿದೆ. ನಯನಾ ಎಂ.ಜಿ (27 ) ನೇತ್ರಾವತಿ ನದಿ ಹಾರಿ ಸಾವಿಗೆ ಶರಣಾದ ಮಹಿಳೆ ಎಂದು ಗುರುತಿಸಿಲಾಗಿದೆ.
ತುಮಕೂರಿನ ಮಧುಗಿರಿ ನಿವಾಸಿ ನಯನಾ ಎಂ.ಜಿ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಯಾವುದೋ ವಿಚಾರಕ್ಕೆ ಮನನೊಂದಿದ್ದ ನಯನಾಬಂಟ್ವಾಳ ಸಮೀಪ ಹಾದು ಹೋಗುವ ನೇತ್ರಾವತಿ ಸೇತುವೆ ಬರುತ್ತಿದ್ದಂತೆ ಚಲಿಸುತ್ತಿದ್ದ ರೈಲಿನಿಂದ ನೇರವಾಗಿ ನೇತ್ರಾವತಿ ನದಿಗೆ ಹಾರಿದ್ದಾರೆ. ಕೂಡಲೇ ಸಹಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಘಟನೆ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ನಗರ ಪೊಲೀಸರು ನೇತ್ರಾವತಿ ನದಿಯಲ್ಲಿ ರೈಲಿನಿಂದ ಜಿಗಿದ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ. ಗಂಟೆಗಳ ಕಾರ್ಯಾಚರಣೆ ಬಳಿಕ ಮುಳುಗುತಜ್ಞ ಮಹಮ್ಮದ್ ತಂಡ ನದಿಯಿಂದ ನಯನಾ ಎಂ.ಜಿ ಅವರ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಈವರೆಗೂ ತಿಳಿದು ಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕುಡ್ಲದಲ್ಲಿ ಜರ್ಮನ್ ಶೆಫರ್ಡ್ ಡಾಗ್ ಹವಾ..!
ಮಂಗಳೂರಿನಲ್ಲಿ ಇತ್ತೀಚಿಗೆ ಜರ್ಮನ್ ಶೆಫರ್ಡ್ ಶ್ವಾನ ಸ್ಫರ್ಧೆ ನಡೆದಿದೆ. ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಬೆಂಗಳೂರು ಮೂಲದ ರಾಜ್ ಗೌಡ ಆಯೋಜಿಸಿದ ಜರ್ಮನ್ ಶಫರ್ಡ್ ಷೋ ನಲ್ಲಿ ದೇಶದ ವಿವಿಧ ಭಾಗಗಳಿಂದ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಮಂಗಳೂರು ಕೆನೆಲ್ ಕ್ಲಬ್ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಜರ್ಮನ್ ಶೆಫರ್ಡ್ ಸ್ಪರ್ಧೆ ನಡೆದಿದೆ. ದಕ್ಷಿಣ ಭಾರತದ ಹಲವು ರಾಜ್ಯಗಳಿಂದ ಸುಮಾರು ನೂರ ಎಂಭತ್ತಕ್ಕೂ ಅಧಿಕ ಜರ್ಮನ್ ಶಫರ್ಡ್ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದೆ.

ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ರಾಷ್ಟ್ರ ಮಟ್ಟದ ಜರ್ಮನ್ ಶಫರ್ಡ್ ಷೋ ನಡೆದಿದೆ. ದೇಶದ ಬೇರೆ ಬೇರೆ ಭಾಗಗಳಿಂದ ಸುಮಾರು ನೂರ ಎಂಭತ್ತಕ್ಕೂ ಅಧಿಕ ಜರ್ಮನ್ ಶಫರ್ಡ್ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅಂತರಾಷ್ಟ್ರೀಯ ಶ್ವಾನ ಸ್ಪರ್ಧೆ ತೀರ್ಪುಗಾರ ಆಸ್ಟ್ರೇಲಿಯಾದ ವಿಂಝಿಂಜೋ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ. ಶ್ವಾನಗಳ ವಯಸ್ಸು, ಲಿಂಗ, ಲಾಂಗ್ ಕೋಟ್, ಶಾರ್ಟ್ ಕೋಟ್ ವಿಭಾಗದಲ್ಲಿ ಸ್ಪರ್ಧೆ ನಡೆದಿದೆ.
ಶನಿವಾರ ಕೇವಲ ಜರ್ಮನ್ ಶಫರ್ಡ್ ಶ್ವಾನಗಳ ಸ್ಪರ್ಧೆ ನಡೆದಿರೋದು ವಿಶೇಷವಾಗಿದೆ. ಈ ಎಲ್ಲಾ ವಿಭಾಗಗಳಲ್ಲಿ ಸ್ಪರ್ಧೆ ನಡೆದು, ಪ್ರತಿ ವಿಭಾಗದ ಟಾಪ್ ಐದು ಶ್ವಾನಗಳಿಗೆ ಪ್ರಶಸ್ತಿ ನೀಡಲಾಗಿದೆ. ಆಯಾ ವಿಭಾಗದ ಶ್ವಾನಗಳಿಗೆ ಸ್ಪರ್ಧೆಯ ನಿಯಮಗಳಿದ್ದು, ಶ್ವಾನಗಳ ಹಲ್ಲು, ಮೈಕಟ್ಟು, ನಿಲ್ಲುವ ಭಂಗಿ, ಓಡುವಾಗ ಶ್ವಾನ ದ ದೇಹದ ಚಲನೆ, ಶ್ವಾನಗಳ ಗಾತ್ರ ಹೀಗೆ ವಿವಿಧ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸ್ಪರ್ಧೆಯ ವಿಜೇತ ಶ್ವಾನಗಳನ್ನು ಗುರುತು ಮಾಡಲಾಗುತ್ತದೆ.
ಜರ್ಮನ್ ಶಫರ್ಡ್ ಮೂಲತಃ ವಿದೇಶಿ ಮೂಲದ ತಳಿಯಾಗಿದ್ದರೂ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ್ದರೂ, ಕೂಟದಲ್ಲಿ ಭಾಗವಹಿಸಿದ ಅರವತ್ತು ಜರ್ಮನ್ ಶಫರ್ಡ್ ಶ್ವಾನಗಳು ವಿದೇಶದಿಂದಲೇ ಭಾರತಕ್ಕೆ ತರಿಸಿಕೊಂಡಿದ್ದು ವಿಶೇಷವಾಗಿತ್ತು.












Click it and Unblock the Notifications