ತಣ್ಣೀರುಬಾವಿ ಕಡಲ ತೀರಕ್ಕೆ ಬಂದ ನೀಲಿ ತಿಮಿಂಗಿಲ

ಮಂಗಳೂರು, ಜುಲೈ 29 : ಮೃತಪಟ್ಟ ನೀಲಿ ತಿಮಿಂಗಿಲವೊಂದು ತಣ್ಣೀರುಬಾವಿ ಕಡಲ ತೀರಕ್ಕೆ ತೇಲಿಕೊಂಡು ಬಂದು ಬಿದ್ದಿದೆ. ತಿಮಿಂಗಿಲದ ಮೈಮೇಲೆ ಗಾಯಗಳಾಗಿದ್ದು, ಹಡಗು ಡಿಕ್ಕಿ ಹೊಡೆದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಗುರುವಾರ ಬೆಳಗ್ಗೆ ತಣ್ಣೀರು ಬಾವಿ ಬೀಚ್‌ನಲ್ಲಿ ತಿಮಿಂಗಿಲ ಪತ್ತೆಯಾಗಿದೆ. ಮೊದಲು ತಿಮಿಂಗಿಲವನ್ನು ಸ್ಥಳೀಯರು ಗುರಿತಿಸಿದರು. ಮೃತಪಟ್ಟಿರುವ ತಿಮಂಗಿಲ ಸುಮಾರು 15 ಟನ್ ತೂಕವಿರಬಹುದು ಎಂದು ಅಂದಾಜಿಸಲಾಗಿದೆ. [ಕಡಲ ತೀರಕ್ಕೆ ಬಂದ ಗಾಯಗೊಂಡ ಡಾಲ್ಫಿನ್]

Tannirbavi

ತಿಮಿಂಗಿಲ ಬಿದ್ದಿರುವ ಸುದ್ದಿ ತಿಳಿದ ಹಲವಾರು ಜನರು ಅದನ್ನು ನೋಡಲು ಕಡಲ ತೀರಕ್ಕೆ ಆಗಮಿಸಿದ್ದರು. ತಿಮಿಂಗಿಲದ ಮೈಮೇಲೆ ಹಲವಾರು ಗಾಯಗಳಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. [ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ]

ಡಾಲ್ಫಿನ್ ಪತ್ತೆಯಾಗಿತ್ತು : ಕೆಲವು ದಿನಗಳ ಹಿಂದೆ ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಕಡಲ ತೀರನಲ್ಲಿ 4 ಅಡಿ ಉದ್ದದ ಡಾಲ್ಫಿನ್‌ ಒಂದು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿ ಅದನ್ನು ಪುನಃ ಸಮುದ್ರಕ್ಕೆ ಬಿಡಲಾಗಿತ್ತು.

beach

ಸಮುದ್ರದ ದಡದಲ್ಲಿ ಡಾಲ್ಫಿನ್‌ ಬಿದ್ದಿರುವುದನ್ನು ಸ್ಥಳೀಯರು ನೋಡಿದ್ದರು. ಡಾಲ್ಫಿನ್‌ ದೇಹದಲ್ಲಿ ಗಾಯದ ಗುರುತುಗಳಿದ್ದು, ಹಡಗುಗಳ ಬ್ಲೇಡ್‌ ತಗುಲಿ ಗಾಯವಾಗಿರಬಹುದು ಶಂಕಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+