ಮಂಗಳೂರಿನಲ್ಲಿ ನೀರಿಗೆ ಬರ, ಸಣ್ಣ ಕೈಗಾರಿಕೆಗಳು ಸ್ಥಗಿತಗೊಳ್ಳುವ ಭೀತಿ

ಮಂಗಳೂರು, ಮೇ 16: ಮಂಗಳೂರು ನಗರದಲ್ಲಿ ನೀರಿನ ಸರಬರಾಜು ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ನಗರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ನೀರಿನ ಬರದ ಬಿಸಿ ತಟ್ಟಿದ್ದು, ಸಂಕಟ ಎದುರಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಬೈಕಂಪಾಡಿ ವ್ಯಾಪ್ತಿಯ 400ಕ್ಕೂ ಹೆಚ್ಚು ಕೈಗಾರಿಕೆಗಳು ಪಾಲಿಕೆ ನೀರನ್ನೇ ಅವಲಂಬಿಸಿವೆ. ನೀರಿನ ಸರಬರಾಜಿನಲ್ಲಿ ರೇಷನಿಂಗ್ ವ್ಯವಸ್ಥೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಕುಂಟಿತಗೊಂಡಿದ್ದು, ಸಂಕಷ್ಟ ಎದುರಿಸುತ್ತಿವೆ. ಈ ಕೈಗಾರಿಕೆಗಳು ವಾರ್ಷಿಕವಾಗಿ ಸುಮಾರು 4 ಕೋಟಿ ರೂಪಾಯಿಗಳಷ್ಟು ನೀರಿನ ಬಿಲ್‌ ಪಾವತಿಸುತ್ತಿವೆ. ಸದ್ಯ ಬೋರ್‌ವೆಲ್‌, ಬಾವಿ , ಟ್ಯಾಂಕರ್ ನೀರಿನ ಬಳಕೆ ಮಾಡಿಕೊಂಡು ನಿಭಾಯಿಸುತ್ತಿವೆ.

ಮುಂದೆ ಶೀಘ್ರ ಮಳೆ ಆಗದಿದ್ದರೆ ಹಲವು ಕೈಗಾರಿಕೆಗಳು ಗಂಭೀರ ಸಮಸ್ಯೆ ಎದುರಿಸಬೇಕಾದ ಆತಂಕ ವ್ಯಕ್ತವಾಗಿದೆ. ಯೆಯ್ನಾಡಿಯ ಸಣ್ಣ ಕೈಗಾರಿಕೆಗಳು ಬೋರ್‌ವೆಲ್‌ ನೀರನ್ನು ಬಳಸುತ್ತಿವೆ. ದಿನ ಕಳೆದಂತೆ ಇಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದು, ಆತಂಕ ಆರಂಭವಾಗಿದೆ. ಮೇ ತಿಂಗಳ ಅಂತ್ಯದೊಳಗೂ ಮಳೆ ಬಾರದಿದ್ದರೆ ಸಣ್ಣ ಕೈಗಾರಿಕೆಗಳು ಸಂಕಷ್ಟ ಎದುರಿಸುವುದರಲ್ಲಿ ಅನುಮಾನವಿಲ್ಲ.

Water shortage hits small industries in Mangalore

2016ರಲ್ಲಿ ಇದೇ ರೀತಿ ನೀರಿನ ಸಮಸ್ಯೆ ಎದುರಾಗಿ ಕೆಲವು ಸಣ್ಣ-ಮಧ್ಯಮ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ಮಂಗಳೂರಿನ ಹೋಟೆಲ್ ಗಳು ಸಹ ನೀರಿನ ಕೊರತೆ ಎದುರಿಸುತ್ತಿವೆ.ನಗರದಲ್ಲಿ ಸುಮಾರು 500ರಷ್ಟು ಹೊಟೇಲ್‌ಗ‌ಳಿವೆ.

ಕೆಲವು ಖಾಸಗಿ ಬೋರ್‌ವೆಲ್‌, ಬಾವಿಯ ನೀರನ್ನು ಆಶ್ರಯಿಸಿದ್ದರೆ, ಮಿಕ್ಕುಳಿದವುಗಳಿಗೆ ಟ್ಯಾಂಕರ್‌ ನೀರು. ಸಣ್ಣ-ಪುಟ್ಟ ಹೊಟೇಲ್‌ನವರು ಪಾಲಿಕೆ ನೀರಿಗಾಗಿ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+