Viral video; ಎಲ್ಲರನ್ನು ತನ್ನತ್ತ ಸೆಳೆದ ಮಂಗಳೂರಿನ 'ಚಾರ್ಲಿ'

ಮಂಗಳೂರು, ಜೂನ್ 19; ನಟ ರಕ್ಷಿತ್ ಶೆಟ್ಟಿ ಅಭಿಯನದ ಸಿನಿಮಾ 'ಚಾರ್ಲಿ 777' ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ನಾಯಿಯ ನಟನೆಗೆ ಜನರು ಫಿದಾ ಆಗಿದ್ದಾರೆ. ನಾಯಿಗಳ ಮೇಲಿನ ಜನರ ಪ್ರೀತಿ ಇಮ್ಮಡಿಯಾಗುತ್ತಿದೆ.

ಮಂಗಳೂರಿನಲ್ಲಿರುವ 3 ತಿಂಗಳ 'ಚಾರ್ಲಿ' ಈಗ ಎಲ್ಲರ ಗಮನ ಸೆಳೆಯುತ್ತಿದೆ. ಚಾರ್ಲಿ ಸಿನಿಮಾದಿಂದ ಸ್ಪೂರ್ತಿ ಪಡೆದು ಮಂಗಳೂರು ಪೊಲೀಸ್ ಶ್ವಾನದಳದ ಮೂರು ತಿಂಗಳ ನಾಯಿ ಮರಿಗೆ ಚಾರ್ಲಿ ಎಂದು ನಾಮಕರಣ ಮಾಡಲಾಗಿದೆ.

'ಚಾರ್ಲಿ'ಯ ತುಂಟಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಂಗಳೂರು ನಗರ ಪೊಲೀಸ್ ಆಯಕ್ತ ಎನ್. ಶಶಿಕುಮಾರ್ ಕೆಲವು ದಿನಗಳ ಹಿಂದೆ ಈ ಮುದ್ದಾದ ನಾಯಿಗೆ 'ಚಾರ್ಲಿ' ಎಂದು ನಾಮಕರಣ ಮಾಡಿದ್ದರು.

'ಚಾರ್ಲಿ 777' ಚಿತ್ರದಲ್ಲಿಯೂ ಲ್ಯಾಬ್ರೊಡರ್ ರಿಟ್ರಿವರ್ ತಳಿಯ ನಾಯಿ ನಟನೆ ಮಾಡಿದೆ. ಮಂಗಳೂರು ಪೊಲೀಸರು ಸಹ ಇದೇ ತಳಿಯ ನಾಯಿ ಮರಿಗೆ 'ಚಾರ್ಲಿ' ಎಂದು ನಾಮಕರಣ ಮಾಡಿದ್ದಾರೆ.

ಈ ಲ್ಯಾಬ್ರೊಡರ್ ರಿಟ್ರಿವರ್ ತಳಿಯ ನಾಯಿ ಬಂಟ್ವಾಳದಲ್ಲಿತ್ತು. 2022 ಮಾರ್ಚ್ 16ರಂದು ಹುಟ್ಟಿದ ಈ ಶ್ವಾನವನ್ನು ಪೊಲೀಸ್ ಇಲಾಖೆಗಾಗಿ 20,000 ರೂ. ನೀಡಿ ಖರೀದಿ ಮಾಡಲಾಗಿದೆ.

Viral Video Mangaluru Police Dog Squad Labrador Retriever Charlie

'ಚಾರ್ಲಿ' ತರಬೇತಿಗಾಗಿ ಬೆಂಗಳೂರು ನಗರಕ್ಕೆ ತೆರಳಲಿದೆ. ಬೆಂಗಳೂರು ಸೌತ್ ಸಿಆರ್‌ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲಾಗುತ್ತದೆ. ಬಳಿಕ 'ಚಾರ್ಲಿ' ಬಾಂಬ್ ಪತ್ತೆ ಮಾಡಲು ಮಂಗಳೂರು ಪೊಲೀಸ್ ಇಲಾಖೆಯ ಶ್ವಾನದಳ ಸೇರಲಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, "ಮಂಗಳೂರು ಶ್ವಾನದಳದಲ್ಲಿ 5ಕ್ಕೂ ಹೆಚ್ಚು ಶ್ವಾನಗಳಿವೆ. ಮೂರು ತಿಂಗಳ ಹಿಂದೆ ಹುಟ್ಟಿದ ಹೆಣ್ಣು ಶ್ವಾನವನ್ನು ಈಗ ಇಲಾಖೆಗೆ ಸೇರಿಸಿದ್ದೇವೆ‌‌" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+