ಮಂಗಳೂರು ಗಣರಾಜ್ಯೋತ್ಸವಕ್ಕೆ ಮೆರಗು ತಂದ ವಿಂಟೇಜ್ ಕಾರು ಪ್ರದರ್ಶನ: ಏನಿದರ ವಿಶೇಷತೆ?
ಮಂಗಳೂರು, ಡಿಸೆಂಬರ್ 27: ಮಂಗಳೂರಿನ ನೆಹರೂ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಅದ್ಧೂರಿಯಾಗಿ ನಡೆದಿದೆ. ಮಂಗಳೂರಿನಲ್ಲಿ ನಿನ್ನೆ (ಜನವರಿ 26) ಗಣರಾಜ್ಯೋತ್ಸವದ ಸಂಭ್ರಮ ಒಂದೆಡೆಯಾದರೆ ಮತ್ತೊಂದೆಡೆ ಹಳೆಯ ಕಾರು, ಬೈಕ್‌ಗಳ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ.
ವಾಹನ ಹಳೆಯದಾದರೂ ಸುಸ್ಥಿತಿಯಲ್ಲಿರುವ. ಕಾರು ಸ್ಕೂಟರ್ ಕಂಡು ಜನ ಖುಷಿಪಟ್ಟರೆ ಸಚಿವ ದಿನೇಶ್ ಗುಂಡೂರಾವ್ ಕಾರ್ ನಲ್ಲಿ ಒಂದು ರೌಂಡ್ ಹೊಡೆದು ಸಂಭ್ರಮಿಸಿದರು.ಮಂಗಳೂರು ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ ಹಮ್ಮಿಕೊಂಡ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. 22ನೇ ವರ್ಷದ ವಿಂಟೇಜ್ ಕಾರುಗಳ ಪ್ರದರ್ಶನದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಹಳೆಯದಾದ ಕಾರುಗಳಿದ್ದವು. ಇಂಗ್ಲೆಂಡ್, ಅಮೆರಿಕ ಮೂಲದ 1925ರ ಮಾಡೆಲಿನ ರೋಲ್ಸ್ ರಾಯ್ಸ್, ಅಂಬಾಸಿಡರ್, ಫಿಯೆಟ್ ಕಾರುಗಳನ್ನು ಸಚಿವರು ನೋಡಿ ಅದರ ಮಾಲೀಕರ ಪರಿಚಯ ಮಾಡಿಕೊಂಡರು.
ಇಟಲಿಯಲ್ಲಿ ತಯಾರಾದ ಹಳೆಕಾಲದ ಲ್ಯಾಂಬಿ ಸ್ಕೂಟರ್, ಬುಲೆಟ್ ಬೈಕ್ ಗಳು ಕೂಡ ಇದ್ದವು. ಹಳೆಕಾಲದ ಕಾರುಗಳನ್ನು ಜನರು ಕುತೂಹಲದಿಂದ ನೋಡುತ್ತಿದ್ದರು. ನೂರು ವರ್ಷ ಹಳೆಯದಾದರೂ ಬಣ್ಣ ಮಸುಕಾಗದೆ, ತುಕ್ಕು ಹಿಡಿಯದಂತೆ ಅದರ ಮಾಲೀಕರು ಕಾಯ್ದುಕೊಂಡಿದ್ದರು.ಹಳೆಯ ವಾಹನಗಳ ನಿರ್ವಹಣೆಗೆ ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವದ ಧ್ವಜ ಹಾರಿಸಿ ತೆರಳಿದ ವ್ಯಕ್ತಿ ಸಾವು
ಮಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜ ಹಾರಿಸಿದ ವ್ಯಕ್ತಿಯೊಬ್ಬರು ಮನೆಗೆ ತೆರಳಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ನಗರದ ಬಿಜೈ ನ್ಯೂ ರೋಡ್‌ನಲ್ಲಿರುವ ಫೆಲಿಸಿಟಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಿನ್ನೆ (ಜನವರಿ 26) ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣವನ್ನು ಅಪಾರ್ಟ್‌ಮೆಂಟ್‌ನ ಹಿರಿಯ ನಾಗರಿಕರಾದ, ನಿವೃತ್ತ ಸರ್ಕಾರಿ ಅಧಿಕಾರಿ ಅಬ್ದುಲ್ ಸಮದ್ (80) ಅವರು ಧ್ವಜಾರೋಹಣ ನಡೆಸಿದ್ದರು. ನಂತರ ಭಾಷಣ ಮಾಡಿ ಮನೆ ತೆರಳಿದ್ದರು.
ಮನೆ ಬಂದು ಕೂರುತಿದ್ದಂತೆ ಅಬ್ದುಲ್ ಸಮದ್ ಕೂತಲ್ಲಿಯೇ ಕುಸಿದು ಬಿದ್ದಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ಮಾಡುತ್ತಿದ್ದಂತೆ ಅಬ್ದುಲ್ ಸಮದ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.












Click it and Unblock the Notifications