ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಬಿಷಪ್‌ ವಿರುದ್ಧ ನೂರಾರು ಎಕರೆ ಭೂ ಒತ್ತುವರಿ ಆರೋಪ

|
Google Oneindia Kannada News

ಮಂಗಳೂರು, ಜನವರಿ 30: ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಅವರ ವಿರುದ್ಧ ಭಾರಿ ಪ್ರಮಾಣದ ಭೂಮಿ ಒತ್ತುವರಿ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಉಪಲೋಕಾಯುಕ್ತರು ಆದೇಶಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಂಗಳೂರು ನಗರದ ಅತ್ತಾವರ ಮತ್ತು ಜೆಪ್ಪಿನಮೊಗರು ಪ್ರದೇಶದಲ್ಲಿ ನೂರಾರು ಎಕರೆ ಭೂಮಿಯನ್ನು ಮಂಗಳೂರು ಬಿಷಪ್ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕರ ದೂರುಗಳ ವಿಚಾರಣೆ ನಡೆಯಿತು. ಈ ಸಂದರ್ಭ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಉಪಲೋಕಾಯುಕ್ತ ಸುಭಾಷ್ ಆಡಿ ಆದೇಶ ಹೊರಡಿಸಿದ್ದಾರೆ.

Upa Lokayukta orders inquiry against Bishop Aloysius Paul D'souza of Mangaluru

ಸಾರ್ವಜನಿಕ ದೂರುಗಳ ವಿಚಾರಣೆ ಸಂದರ್ಭದಲ್ಲಿ ನೂರಕ್ಕೂ ಅಧಿಕ ಮಂದಿ ಹಾಜರಾಗಿ, ಮಂಗಳೂರು ನಗರದ ಅತ್ತಾವರ ಹಾಗೂ ಜೆಪ್ಪಿನಮೊಗರು ಗ್ರಾಮದಲ್ಲಿರುವ ಸರಕಾರಿ ಪರಂಬೋಕು ಜಮೀನಿನಲ್ಲಿ ವಾಸವಿರುವವರನ್ನು ಒಕ್ಕಲೆಬ್ಬಿಸಿ, ಭೂಮಿಯನ್ನು ಒತ್ತುವರಿ ಮಾಡಲು ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

Upa Lokayukta orders inquiry against Bishop Aloysius Paul D'souza of Mangaluru

ಮಾತ್ರವಲ್ಲದೇ ದಾಖಲೆಗಳ ಸಮೇತ ಉಪಲೋಕಾಯುಕ್ತರ ಮುಂದೆ ಜನರು ತಮ್ಮ ವಾದ ಮಂಡಿಸಿದರು. ಈ ಹಿನ್ನಕಲೆಯಲ್ಲಿ ದೂರನ್ನು ಗಂಭೀರವಾಗಿ ಪರಿಗಣಿಸಿದ ಉಪಲೋಕಾಯುಕ್ತರು, ಈ ಬಗ್ಗೆ ತನಿಖೆ ನಡೆಸಿ 20 ದಿನಗಳೊಳಗೆ ಪ್ರಾಥಮಿಕ ವರದಿ ನೀಡಲು ಮಂಗಳೂರು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಗೆ ಆದೇಶಿಸಿದರು.

ಉಪಲೋಕಾಯುಕ್ತರ ಈ ಆದೇಶದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

English summary
Upa Lokayukta ordered inquiry against Mangaluru Bishop Aloysius Paul D'souza for inheriting huge property at Jeppinamogaru and Attavar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X