ದುಷ್ಕರ್ಮಿಗಳಿಂದ ಉಳ್ಳಾಲ ನಗರಸಭಾ ಸದಸ್ಯನ ಕಾರು ಜಖಂ

ಮನೆಯೆದರು ನಿಲ್ಲಿಸಲಾಗಿದ್ದ ಕಾರಿನ ಮೇಲೆ ತಮ್ಮ ಪರಾಕ್ರಮ ತೋರಿರುವ ಕಿಡಿಗೇಡಿಗಳು, ಕಾರಿನ ಗಾಜು, ಕನ್ನಡಿಗಳನ್ನು ಒಡೆದು ಹಾಕಿರುವುದಲ್ಲದೆ, ಇಡೀ ಕಾರಿಗೆ ಹೆಚ್ಚಿನ ಪ್ರಮಾಣದ ಹಾನಿಯನ್ನುಂಟು ಮಾಡಿದ್ದಾರೆ.

ಸ್ಥಳ್ಕಕ್ಕೆ ಭೇಟಿ ನೀಡಿರುವ ಪೊಲೀಸರು, ಗಾಂಜಾ ಮಾಫಿಯಾ, ಹಫ್ತಾ ವಸೂಲಿ ಮಾಫಿಯಾಗಳಿಂದ ಈ ಕೃತ್ಯ ನಡೆದಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಉಳ್ಳಾಲದಾದ್ಯಂತ ಹೆಚ್ಚುತ್ತಿರುವ ಗಾಂಜಾ ಮಾಫಿಯಾ ವಿರುದ್ಧ ಧ್ವನಿ ಎತ್ತಿದ್ದ ಫಾರೂಕ್ ಅವರನ್ನು ಬೆದರಿಸಲು ಈ ರೀತಿಯ ತಂತ್ರಗಾರಿಕೆಯನ್ನು ದುಷ್ಕರ್ಮಿಗಳು ಅನುಸರಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.












Click it and Unblock the Notifications