ಮಂಗಳೂರಿನಲ್ಲಿ ಸಿಎಂ ಭೇಟಿ ದಿನವೇ ಯುವಕರ ಮೇಲೆ ಬರ್ಬರ ಹಲ್ಲೆ
ಮಂಗಳೂರು, ಜುಲೈ 7: ಯುವಕರಿಬ್ಬರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಅಡ್ಯಾರ್ ಪದವಿನಲ್ಲಿ ನಡೆದಿದೆ. ವಿಚಿತ್ರವೆಂದರೆ ಇಲ್ಲೇ ಸ್ವಲ್ಪ ದೂರದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿತ್ತು ಮತ್ತು ಭಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪೆಟ್ರೋಲ್ ಕೇಳುವ ನೆಪದಲ್ಲಿ ಯುವಕರಿಬ್ಬರ ಮೇಲೆ ತಂಡ ದಾಳಿ ನಡೆಸಿದ್ದು, ಖಾಸಗಿ ಕಾಲೇಜೊಂದರ 3ನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಜಿದ್ (23) ಹಾಗೂ ಆತನ ಸ್ನೇಹಿತ ಗಾಯಗೊಂಡಿದ್ದಾರೆ.

ಅಡ್ಯಾರ್ ಪದವಿನಲ್ಲಿ ಬೈಕ್ ನಲ್ಲಿ ನಿಲ್ಲಿಸಿದ ಮೂವರ ತಂಡ "ಪೆಟ್ರೋಲ್ ಖಾಲಿಯಾಗಿದೆ. ಪೆಟ್ರೋಲ್ ಇದ್ದರೆ ನೀಡಿ" ಎಂದಿದೆ. ಸಾಜಿದ್ ಹಾಗೂ ನೌಫಲ್ ಪೆಟ್ರೋಲ್ ನೀಡಲು ಮುಂದಾಗುತ್ತಿದ್ದಂತೆ ಇವರ ಮೇಲೆ ತಂಡ ದಾಳಿ ನಡೆಸಿದೆ.
ಘಟನೆಯಿಂದ ಸಾಜಿದ್ ನ ಕೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ತೀವ್ರ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಡ್ಯಾರ್ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಇದ್ರೂ ಕೂಡ ಅಲ್ಲೇ ಸಮೀಪ ಇರುವ ಅಡ್ಯಾರ್ ಪದವಿನ ಬಳಿ ಈ ಕೃತ್ಯ ನಡೆದಿದ್ದು ಪೊಲೀಸರನ್ನು ಆಚ್ಚರಿಯಲ್ಲಿ ಕೆಡವಿದೆ. ಜತೆಗೆ ಜಿಲ್ಲೆಯ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.












Click it and Unblock the Notifications